ಬೆಂಗಳೂರು: ಸಮುದಾಯ 50 ಮನುಷ್ಯತ್ವದೆಡೆಗೆ ಸಮುದಾಯ ಜಾಥ ಆಚರಣೆಯ ಭಾಗವಾಗಿ, ಸಮುದಾಯ ಸಂಘಟನೆಯು ಜೂನ್ 28, ಭಾನುವಾರ ಬೆಳಗ್ಗೆ 11 ಗಂಟೆಗೆ ನಗರದ ಗಾಂಧಿ ಭವನದ ಮೈಲಾರ ಮಹದೇವಪ್ಪ ಸಭಾಂಗಣದಲ್ಲಿ “ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ ಮುಂದೇನು? – ಸಾಂಸ್ಕೃತಿಕ ರಂಗದ ವಿಶ್ಲೇಷಣೆ” ವಿಷಯದ ಮೇಲೆ ವಿಚಾರ ಸಂಕಿರಣ ಆಯೋಜಿಸಿದೆ ಎಂದು ಸಮುದಾಯ ಬೆಂಗಳೂರು ಕಾರ್ಯದರ್ಶಿ ಸಂಗಮೇಶ ಸಿವಣಗಿ ತಿಳಿಸಿದ್ದಾರೆ. ಸಾಂಸ್ಕೃತಿಕ
ಕವಿ ಚಿಂತಕ ಡಾ.ಮೂಡ್ನಕೂಡು ಚಿನ್ನಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನೆಡೆಯಲಿರುವ ಈ ವಿಚಾರ ಸಂಕಿರಣದಲ್ಲಿ, ಮಾವಳ್ಳಿ ಶಂಕರ್, ಡಾ. ಹೆಚ್ ಜನಾರ್ಧನ್(ಜನ್ನಿ ), ಶ್ರೀಪಾದ್ ಭಟ್, ಯು. ಟಿ. ಫರ್ಝಾನ,ಡಾ. ಬಿ ಆರ್ ಮಂಜುನಾಥ್, ವಿನಯ್ ಶ್ರೀನಿವಾಸ್, ಡಾ ಬಿ ಸಿ ಬಸವರಾಜು, ಡಾ ರವಿಕುಮಾರ್ ಭಾಗಿ ವಿಚಾರಗಳನ್ನು ಪ್ರಸ್ತುತ ಪಡಿಸಿ ವಿಶ್ಲೇಷಣೆ ಮಾಡಲಿದ್ದಾರೆ.
ಇದನ್ನೂ ಓದಿ: ಅಶ್ಲೀಲ ವೀಡಿಯೊ ಹಂಚಿಕೆ – ಲೈಂಗಿಕ ಕಿರುಕುಳ ದೂರುಗಳಲ್ಲಿ ಈಗ ಎಫ್‌ಐಆರ್ ಕಡ್ಡಾಯ: ರಾಜ್ಯ ಸರ್ಕಾರ
ಮತದಾರರ ಪಟ್ಟಿ ಪರಿಷ್ಕರಣೆ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗುತ್ತಿರುವ ಸಂದರ್ಭದಲ್ಲಿ ಅದರ ಸಾಧಕ ಬಾಧಕಗಳು ಜನರಿಗೆ ತಲುಪಬೇಕಾಗಿರುವುದರಿಂದ ಈ ಕಾರ್ಯಕ್ರಮಕ್ಕೆ ಹೆಚ್ಚಿನ ಮಹತ್ವ ಬಂದಿದೆ. ಹಾಗಾಗಿ ಈ ರೀತಿಯ ಚರ್ಚೆಗಳು ಅಗತ್ಯ ಎಂದು ಸಂಗಮೇಶ್ ತಿಳಿಸಿದ್ದಾರೆ.
ಇದನ್ನೂ ನೋಡಿ: ದುಡಿಯುವ ಭೂಮಿ ಕಿತ್ತುಕೊಂಡ ಸರಕಾರ – ಯು.ಬಸವರಾಜ Janashakthi Media
