ಮಂಗಳೂರು: ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದ ಭವ್ಯ ಭಾರತದ ಸೌಹಾರ್ದ ಪರಂಪರೆಗೆ ಕೊಳ್ಳಿ ಇಟ್ಟ ಕೋಮುವಾದ ಇಂದು ತನ್ನ ವಿರಾಟ್ ಸ್ವರೂಪವನ್ನು ತೋರಿಸುತ್ತಿದೆ. ದೇಶದ ಸಂವಿಧಾನವನ್ನೇ ಬುಡಮೇಲುಗೊಳಿಸಲು ಹವಣಿಸುತ್ತಿದೆ. ಅಂತಹ ಕೋಮುವಾದವನ್ನು ಸೋಲಿಸಿ ದೇಶದ ಜಾತ್ಯಾತೀತತೆಯನ್ನು ಹಾಗೂ ಜನತೆಯ ಬದುಕನ್ನು ರಕ್ಷಿಸಲು ಎಡಪಂಥೀಯ ವಿಚಾರಧಾರೆಯಿಂದ ಮಾತ್ರವೇ ಸಾಧ್ಯ.
ಇದಕ್ಕೆ ಸಾಕ್ಷಿ ಎಂಬಂತೆ ಎರಡನೆಯ ಮಹಾಯುದ್ಧದ ಸಂದರ್ಭದಲ್ಲಿ ರಷ್ಯಾದ ಕೆಂಪು ಸೇನೆ ಫ್ಯಾಸಿಸ್ಟರ ಮೇಲೆ ವಿಜಯ ಸಾಧಿಸಿ ಜಗತ್ತನ್ನು ರಕ್ಷಿಸಿದ ಪರಿಯನ್ನು ಮತ್ತೆ ನೆನಪಿಸಬೇಕಾಗಿದೆ ಎಂದು DYFI ಮಾಜಿ ರಾಜ್ಯಾಧ್ಯಕ್ಷರಾದ ಸುನಿಲ್ ಕುಮಾರ್ ಬಜಾಲ್ ರವರು ಅತ್ಯಂತ ಧೃಢವಿಶ್ವಾಸದಿಂದ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
24 ವರ್ಷಗಳ ಹಿಂದೆ ಬಜಾಲ್ ಪರಿಸರದಲ್ಲಿ ಹಿಂದೂ ಮತಾಂಧ ಶಕ್ತಿಗಳ ಕರಾಳ ಖಡ್ಗಕ್ಕೆ ಬಲಿಯಾದ ಕಾಂ. ಶ್ರೀನಿವಾಸ್ ಬಜಾಲ್ ರವರ 24ನೇ ವರ್ಷದ ಹುತಾತ್ಮ ದಿನಾಚರಣೆಯ ಸಂದರ್ಭದಲ್ಲಿ ಧ್ವಜಾರೋಹಣ ಗೈಯ್ಯತ್ತಾ ಅವರು ಈ ಮಾತುಗಳನ್ನು ಹೇಳಿದರು.
ಇದನ್ನೂ ಓದಿ: ವೆನೆಜುವೆಲಾದಲ್ಲಿ ಜೋಡಿ ಭೂಕಂಪನ: 22 ಮಹಡಿ ಕಟ್ಟಡ ಕುಸಿತ, ರಕ್ಷಣಾ ಕಾರ್ಯಾಚರಣೆ ಆರಂಭ
DYFI ದ.ಕ.ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ರವರು ಮಾತನಾಡಿ, ಜಾತಿ ಧರ್ಮದ ಹೆಸರಿನಲ್ಲಿ ದ್ವೇಷ ರಾಜಕಾರಣ ನಡೆಸುವ ಮತಾಂಧ ಶಕ್ತಿಗಳು ದೇಶವನ್ನು ಆಳುತ್ತಿರುವುದು ದುರಂತ. ದೇಶ ಕಟ್ಟಬೇಕಾದ ಯುವಜನತೆಯ ತಲೆಯಲ್ಲಿ ಕೋಮು ದ್ವೇಷದ ಅಮಲನ್ನು ತುಂಬಿಸಿ ಶ್ರೀನಿವಾಸ ಬಜಾಲ್ ರಂತಹ ಪ್ರತಿಭಾನ್ವಿತ ಯುವಕರನ್ನೇ ಬಲಿತೆಗೆದುಕೊಳ್ಳುತ್ತಿರುವ ಕೋಮುವಾದಿ ಶಕ್ತಿಗಳ ಅಟ್ಟಹಾಸವನ್ನು ಮಟ್ಟ ಹಾಕಬೇಕಾಗಿದೆ ಎಂದು ಹೇಳಿದರು
ಈ ಸಂದರ್ಭದಲ್ಲಿ ಡಿವೈಎಫ್ಐ ಜಿಲ್ಲಾ ನಾಯಕರಾದ ಜಗದೀಶ್ ಬಜಾಲ್, ಜಿಲ್ಲಾ ಕಾರ್ಮಿಕ ಮುಖಂಡರಾದ ಅಶೋಕ್ ಸಾಲ್ಯಾನ್, ದೀಪಕ್ ಬಜಾಲ್, ಹಿರಿಯ CPIM ನಾಯಕರಾದ ಕೇಶವ ಭಂಡಾರಿಯವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನೇತೃತ್ವವನ್ನು ಡಿವೈಎಫ್ಐ ಪಕ್ಕಲಡ್ಕ ಘಟಕದ ಕಾರ್ಯದರ್ಶಿ ಧೀರಾಜ್ ಬಜಾಲ್,ಅಧ್ಯಕ್ಷರಾದ ಪ್ರಕಾಶ್ ಶೆಟ್ಟಿ ,ಸ್ಥಳೀಯ DYFI ನಾಯಕರಾದ ಯಶ್ ರಾಜ್ ಬಜಾಲ್,ಧೀಕ್ಷಿತ್ ಭಂಡಾರಿ, ರಿತೇಶ್ ಬಜಾಲ್, ವರಪ್ರಸಾದ್ ಕುಲಾಲ್, ಅಶೋಕ್ ಎನೆಲ್ಮಾರ್, ನಾಗರಾಜ್ ಬಜಾಲ್ , ಪ್ರೀತೇಶ್, ಪ್ರಥಮ್ ಮುಂತಾದವರು ವಹಿಸಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಶ್ರೀನಿವಾಸ್ ಬಜಾಲ್ ಹತ್ಯೆಯಾದ ಸ್ಥಳದಿಂದ ಘೋಷಣೆಗಳನ್ನು ಕೂಗುವ ಮೂಲಕ ಪಕ್ಕಲಡ್ಕ ಬಸ್ ನಿಲ್ದಾಣದವರೆಗೂ ಮೆರವಣೆಗೆ ನಡೆಸಲಾಯಿತು.
ಇದನ್ನೂ ನೋಡಿ: ಬೀದಿ ವ್ಯಾಪಾರಿಗಳನ್ನು ರಕ್ಷಿಸಿ – ಪ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ Janashakthi Media
