ಸಚಿವರಿಗೆ ಜಿಲ್ಲಾ ಉಸ್ತುವಾರಿ ಹಂಚಿಕೆ: ಸಿಎಂ ಡಿಕೆಶಿ ಸರ್ಕಾರದ ಮಹತ್ವದ ನಿರ್ಧಾರ

ಬೆಂಗಳೂರು: ಸಂಪುಟ ವಿಸ್ತರಣೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರ ಸಚಿವರಿಗೆ ಜಿಲ್ಲಾ ಉಸ್ತುವಾರಿ ಜವಾಬ್ದಾರಿಗಳನ್ನು ಹಂಚಿಕೆ ಮಾಡಿದೆ.

ಪ್ರಸ್ತುತ ಪ್ರತಿಯೊಬ್ಬ ಸಚಿವರಿಗೆ ಎರಡರಿಂದ ಮೂರು ಜಿಲ್ಲೆಗಳ ಹೊಣೆಗಾರಿಕೆ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಸಂಪುಟ ವಿಸ್ತರಣೆ ನಡೆದ ಬಳಿಕ ಈ ಹಂಚಿಕೆಯಲ್ಲಿ ಬದಲಾವಣೆ ಸಾಧ್ಯತೆ ಇದೆ.

ಇದನ್ನೂ ಓದಿ: ಲಂಚ ಸ್ವೀಕಾರ ಆರೋಪ – ಮೂವರು ಮಹಿಳಾ ಅಧಿಕಾರಿಗಳ ಬಂಧನ

ಯಾರಿಗೆ ಯಾವ ಜಿಲ್ಲೆ:

ಡಾ. ಜಿ. ಪರಮೇಶ್ವರ – ತುಮಕೂರು, ಚಿತ್ರದುರ್ಗ
ಕೆ.ಹೆಚ್. ಮುನಿಯಪ್ಪ – ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ವಿಜಯನಗರ
ರಾಮಲಿಂಗಾರೆಡ್ಡಿ – ಬೆಂಗಳೂರು ದಕ್ಷಿಣ, ಮಂಡ್ಯ
ಎಂ.ಬಿ. ಪಾಟೀಲ್ – ವಿಜಯಪುರ, ಬಾಗಲಕೋಟೆ
ಕೆ.ಜೆ. ಜಾರ್ಜ್ – ಚಿಕ್ಕಮಗಳೂರು, ದಾವಣಗೆರೆ
ಕೃಷ್ಣ ಬೈರೇಗೌಡ – ಬೆಂಗಳೂರು ನಗರ, ಹಾಸನ
ಈಶ್ವರ ಖಂಡ್ರೆ – ಬೀದರ್, ಗದಗ
ಸತೀಶ್ ಜಾರಕಿಹೊಳಿ – ಬೆಳಗಾವಿ, ಧಾರವಾಡ, ಹಾವೇರಿ
ಪ್ರಿಯಾಂಕ್ ಖರ್ಗೆ – ಕಲಬುರ್ಗಿ, ಯಾದಗಿರಿ
ಡಾ. ಶರಣಪ್ರಕಾಶ್ ಪಾಟೀಲ್ – ರಾಯಚೂರು, ಕೋಪ್ಪಳ
ಯತೀಂದ್ರ ಸಿದ್ದರಾಮಯ್ಯ – ಮೈಸೂರು, ಚಾಮರಾಜನಗರ
ಬೈರತಿ ಸುರೇಶ್ – ಕೋಲಾರ, ಚಿಕ್ಕಬಳ್ಳಾಪುರ
ಯು.ಟಿ. ಖಾದರ್ – ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ

ಮೈಸೂರು ಜಿಲ್ಲೆಯ ಉಸ್ತುವಾರಿಯಾಗಿ ಯತೀಂದ್ರ ಸಿದ್ದರಾಮಯ್ಯ ನೇಮಕಗೊಂಡಿದ್ದಾರೆ. ಈ ಹಿಂದೆ ಈ ಹೊಣೆಗಾರಿಕೆಯನ್ನು ವಹಿಸಿದ್ದ ಎಚ್‌.ಸಿ. ಮಹದೇವಪ್ಪ ಅವರು ಪ್ರಸ್ತುತ ಸಂಪುಟದಲ್ಲಿ ಸ್ಥಾನ ಪಡೆದಿಲ್ಲ.

ಇದೇ ವೇಳೆ, ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಭಾಗದ ಜಿಲ್ಲೆಗಳ ಉಸ್ತುವಾರಿ ಕುರಿತು ಇದ್ದ ಕುತೂಹಲಕ್ಕೆ ತೆರೆ ಬಿದ್ದಿದ್ದು, ಯು.ಟಿ. ಖಾದರ್ ಅವರಿಗೆ ಈ ಜವಾಬ್ದಾರಿ ನೀಡಲಾಗಿದೆ.

ಸಂಪುಟ ವಿಸ್ತರಣೆ ನಡೆದ ಬಳಿಕ ಉಸ್ತುವಾರಿ ಹಂಚಿಕೆಯಲ್ಲಿ ಬದಲಾವಣೆ ಸಾಧ್ಯತೆ ಇರುವುದರಿಂದ, ಮುಂದಿನ ದಿನಗಳಲ್ಲಿ ಈ ಪಟ್ಟಿಯಲ್ಲಿ ತಿದ್ದುಪಡಿ ಆಗುವ ನಿರೀಕ್ಷೆಯಿದೆ.

ಇದನ್ನೂ ನೋಡಿ: ಭೂಮಿ ಹೋಯ್ತು, ಉದ್ಯೋಗ ಸಿಗಲಿಲ್ಲ! 13 ವರ್ಷ ಕಳೆದರೂ ಸಿಗದ ನ್ಯಾಯ! Janashakthi Media

Donate Janashakthi Media

Leave a Reply

Your email address will not be published. Required fields are marked *