NCERT 6ನೇ ತರಗತಿ ‘R3’ ಕನ್ನಡ ಪಠ್ಯಪುಸ್ತಕದ ಮೂಲಕ ಸಾಂಸ್ಕೃತಿಕ ದಬ್ಬಾಳಿಕೆ; ತೀವ್ರ ಆಕ್ಷೇಪ

ಬೆಂಗಳೂರು: ಎನ್‌ಸಿಇಆರ್‌ಟಿ (NCERT) ಹೊರತಂದಿರುವ 6ನೇ ತರಗತಿಯ ‘R3’ ಕನ್ನಡ ಪಠ್ಯಪುಸ್ತಕವನ್ನು ನೋಡಿದರೆ ಗಾಬರಿಯಾಗುತ್ತದೆ. ಮಕ್ಕಳ ಕಲಿಕೆಗಾಗಿ ರೂಪಿಸಬೇಕಾದ ಪುಸ್ತಕಗಳನ್ನು ರಾಜಕೀಯ ಮತ್ತು ಸಾಂಸ್ಕೃತಿಕ ದಬ್ಬಾಳಿಕೆಗೆ ಅಸ್ತ್ರವನ್ನಾಗಿಸುವುದು ಅಪಾಯಕಾರಿ.

ಕರ್ನಾಟಕದ ಸಾಂಸ್ಕೃತಿಕ, ಸಾಮಾಜಿಕ ವೈವಿಧ್ಯತೆ ಪ್ರತಿಬಿಂಬಿಸುವ ಪಾಠಗಳಿಲ್ಲ. ಕರಾವಳಿ, ಉತ್ತರ ಕರ್ನಾಟಕ, ಮಲೆನಾಡು, ಹಳೆಯ ಮೈಸೂರು ಭಾಗದ ಜಾನಪದ, ಸಾಹಿತ್ಯ, ಬದುಕು ಕಾಣೆಯಾಗಿದೆ.

6ನೇ ತರಗತಿ ಮಗುವಿನ ಕುತೂಹಲ, ವಯೋಮಾನಕ್ಕೆ ತಕ್ಕ ಚಟುವಟಿಕೆ, ಪಠ್ಯ , ಚಿತ್ರ, ಕಥೆಗಳಿಲ್ಲ. ನಿರೂಪಣೆ ನೀರಸವಾಗಿದ್ದು ಉಪದೇಶದ ಧಾಟಿಯಿದೆ.

ಇದನ್ನೂ ಓದಿ: ಇಟ್ಟಿಗೆ ಭಟ್ಟಿಯಲ್ಲಿ ಬಂಧಿತ ಕಾರ್ಮಿಕರ ರಕ್ಷಣೆ – 18 ಮಂದಿಗೆ ಮುಕ್ತಿ, ಮೂವರು ಬಂಧನ

ಮೊದಲನೆಯದಾಗಿ ಪುಸ್ತಕಕ್ಕೆ ‘ಕೃಷ್ಣ’ನ ಹೆಸರು ಏಕೆ?. ಎನ್ ಇ ಪಿ 2020ಯ ‘ಭಾರತೀಯ ಜ್ಞಾನ ಪರಂಪರೆ’ ಹೇರಿಕೆ ಭಾಗವಾಗಿ ಎನ್‌ಇಪಿ ಜಾರಿಯಾದ ನಂತರ
NCERT ಪುಸ್ತಕಗಳಿಗೆ ಪುರಾಣ-ಪುಣ್ಯಕತೆ ಹಾಗೂ ದೇವರ ಧರ್ಮವನ್ನು ಶಿಕ್ಷಣದಲ್ಲಿ ತುರುಕುವ ಚಾಳಿ ಶುರುವಾಗಿದೆ. 3ನೇ ತರಗತಿಗೆ ‘ಮೃದುಲಾ’, 6ನೇ ತರಗತಿಗೆ ‘ಕೃಷ್ಣ’ ಏನಿದು. ಇದು ಪಠ್ಯವನ್ನು ‘ಕೇಸರೀಕರಣ’ ಮಾಡುವ ಯೋಜನೆಯಲ್ಲದೆ ಮತ್ತೇನು.

ಕರ್ನಾಟಕದ ಅಸ್ಮಿತೆ ಅಡಗಿರುವುದು ಪಂಪ, ಕುವೆಂಪು, ಕಾರಂತ , ಬಸವಣ್ಣ ವೈಚಾರಿಕತೆಯಲ್ಲಿ. ಆದರೆ NCERT ‘ಕೃಷ್ಣ’ ಎಂದು ಹೆಸರಿಸಿದೆ .ಸ್ಥಳೀಯ ವೈಚಾರಿಕ ಸಾಂಸ್ಕೃತಿಕತೆ ಬದಿಗೊತ್ತಿ, ದೇವರು -ಧರ್ಮ ರಾಜಕೀಯಕ್ಕೆ NCERT ಮುಂದಾಗಿರುವುದು ಖಂಡನೀಯ .

ಮುಂದುವರಿದು , ಆರೋಗ್ಯವೇ ಭಾಗ್ಯ ಪಾಠದಲ್ಲಿ ಆಹಾರದ ಬಗ್ಗೆ ಹೇಳುವಾಗ, ಹಿಂಬಾಗಿಲಿನಿಂದ ಸಾತ್ವಿಕ ಆಹಾರದ ಸಂಕಥನ ಹೇಳಲು ಮುಂದಾಗಿದೆ .ತಟ್ಟೆಯಲ್ಲಿ ಕೇವಲ ಮುದ್ದೆ -ರೊಟ್ಟಿ-ಅನ್ನ-ತರಕಾರಿ-ಹಾಲು-ಹಣ್ಣು ಮಾತ್ರ ಇದ್ದು ಮೀನು -ಮೊಟ್ಟೆ -ಮಾಂಸ- ಕಣ್ಮರೆಯಾಗಿದೆ . ಸಾತ್ವಿಕ ಆಹಾರವೆಂದರೆ ಕೇವಲ ರೊಟ್ಟಿ ಹಾಲು ತರಕಾರಿ ಎಂದು ಬ್ರೈನ್‌ವಾಶ್ ಮಾಡುವ ತಂತ್ರವಾಗಿದೆ .

ಸಮತೋಲನ ಆಹಾರಕ್ಕೆ ಹೊಸ ವ್ಯಾಖ್ಯಾನ ನೀಡಿದ್ದು ನಮ್ಮ ದೇಹಕ್ಕೆ ಶಕ್ತಿ ದೊರಕಲು ಸಮತೋಲನ ಆಹಾರಗಳಾದ ಹಾಲು, ಸೊಪ್ಪು, ತರಕಾರಿ, ಹಣ್ಣು, ಹಂಪಲುಗಳು ಅಗತ್ಯ. ಇವು ನಮ್ಮ ದಿನ ನಿತ್ಯದ ಆಹಾರದ ಭಾಗವಾಗಬೇಕು ಎಂದು ಹೇಳಲಾಗಿದೆ .ಕರ್ನಾಟಕದ ರಾಗಿಮುದ್ದೆ ದೇಹಕ್ಕೆ ಶಕ್ತಿ ತುಂಬಿ ತಮಿಳುನಾಡಿನ ಮಧುರವಾದ ಇಡ್ಲಿ ಸಿಹಿಯೊಡನೆ ಗುಜರಾತಿನ ಕಿಚಡಿ ಎಂದು ಹೇಳುವ ಮೂಲಕ . ರಾಜ್ಯಕ್ಕೊಂದು ಸಸ್ಯಾಹಾರ ಎಂಬ ಹೊಸ ಸಂಕಥನ ಪ್ರಾರಂಭವಾಗಿದೆ .

ಕರ್ನಾಟಕ ಅಂದ್ರೆ ರಾಗಿ ಮುದ್ದೆ-ಬಸ್ಸಾರು ಮಾತ್ರಾನಾ? ಪಂದಿ ಕರಿ, ಮೀನಿನ ಸಾರು, ಖೀಮಾ ಉಂಡೆ ತಿನ್ನುವ ಕೋಟಿ ಜನ ಕರ್ನಾಟಕದವರಲ್ಲವಾ?

ಹಾಗಾದರೆ , ಮೊಟ್ಟೆ, ಮೀನು, ಕೋಳಿ, ಮಟನ್, ಕರಾವಳಿ ಮಗುವಿನ ‘ಮೀನು’, ಉತ್ತರ ಕರ್ನಾಟಕದ ಮಗುವಿನ ಜೋಳದ ರೊಟ್ಟಿ-ಎಣ್ಣೆಗಾಯಿ, ಕುರಿ ಮಾಂಸ ಎಲ್ಲಿಗೋಗುತ್ತದೆ . NCERT ಪ್ರಕಾರ ಅದು ‘ಸಮತೋಲನ ಆಹಾರ’ವಲ್ಲವೇ!

ಉದ್ದೇಶಪೂರ್ವಕವಾಗಿ ಮಾಂಸಾಹಾರವನ್ನು ಕಡೆಗೆಣಿಸುವ ತಂತ್ರವಾಗಿದೆ .

ಸಸ್ಯಾಹಾರ ಮಾತ್ರ ಸಮತೋಲನ’ ಎಂದು ಬರೆದು ಮಕ್ಕಳ ಊಟದ ತಟ್ಟೆಯಲ್ಲಿ ರಾಜಕೀಯ ಮಾಡಲಾಗುತ್ತಿದೆ . ಇದು ಶಿಕ್ಷಣ ಅಲ್ಲ, ಸಾಂಸ್ಕೃತಿಕ ಭಯೋತ್ಪಾದನೆ.

ನಮ್ಮ ಆಗ್ರಹಗಳು

1. ಕರ್ನಾಟಕದಲ್ಲಿನ ಕನ್ನಡ ಕಲಿಕಾ ಅಧಿನಿಯಮ 2015ರ ಪ್ರಕಾರ ಸಿಬಿಎಸ್ಇ ಶಾಲೆಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಪ್ರಥಮ ದ್ವಿತೀಯ ಭಾಷೆಯಾಗಿ ಕಲಿಸಬೇಕು. ಈಗಾಗಲೇ ಸವಿ ಕನ್ನಡ, ಸಿರಿ ಕನ್ನಡ ಹಾಗೂ ತಿಳಿ ಕನ್ನಡ ಪುಸ್ತಕಗಳಿದ್ದು, ತಿಳಿ ಕನ್ನಡವನ್ನು ಈ ಮೊದಲು ದ್ವಿತೀಯ ಅಥವಾ ತೃತೀಯ ಭಾಷೆಯಾಗಿ ಬಳಸಲಾಗುತ್ತಿತ್ತು. ತಿಳಿ ಕನ್ನಡವನ್ನೇ R3ಯಾಗಿ ಬಳಸಬೇಕು .

2. ಆರನೇ ತರಗತಿಗೆ R3 ಯಾಗಿ ಸಿದ್ಧಪಡಿಸಿರುವ ಇದೇ ಪಠ್ಯವನ್ನು ಈ ವರ್ಷದಿಂದಲೇ ಒಂಬತ್ತನೇ ತರಗತಿಗೆ R3ಯ ಪಠ್ಯವಾಗಿ ಬಳಸಲು ಸಿಬಿಎಸ್ಇ ಯು ತರಾತುರಿಯಾಗಿ ಆದೇಶಿಸಿರುವುದನ್ನು ಹಿಂಪಡೆಯಬೇಕು . ಪುಸ್ತಕದ ಹೆಸರು ‘ಕೃಷ್ಣ’ ಎಂದು ಏಕೆ ಎಂದು NCERT ಲಿಖಿತ ಉತ್ತರ ನೀಡಬೇಕು

3. ಕರ್ನಾಟಕದಲ್ಲಿ ಪಠ್ಯರಚನೆ ಹಾಗೂ ಎಲ್ಲಾ ಶೈಕ್ಷಣಿಕ ಕೆಲಸಗಳಿಗೆ ಶೈಕ್ಷಣಿಕ ಪ್ರಾಧಿಕಾರವಾಗಿರುವ dsert ಯನ್ನು ಈ ಕಾರ್ಯದಲ್ಲಿ ಏಕೆ ತೊಡಗಿಸಿಕೊಂಡಿಲ್ಲವೆಂಬುದಕ್ಕೆ ಕಾರಣ ನೀಡಬೇಕು

4 . ‘ಸಮತೋಲನ ಆಹಾರ’ ಪಾಠದಲ್ಲಿ ಮೊಟ್ಟೆ, ಮೀನು, ಮಾಂಸದ ಚಿತ್ರ-ಉಲ್ಲೇಖ ಸೇರಿಸಿ ಮರುಮುದ್ರಣ ಮಾಡಬೇಕು

5 . ಪುಸ್ತಕದ ಹೆಸರು ಬದಲಿಸಿ ಕನ್ನಡದ ಅಸ್ಮಿತೆಗೆ ಸರಿ ಹೊಂದುವ ಹೆಸರಿಡಬೇಕು .

ಇದನ್ನೂ ನೋಡಿ: ಕಾಂಗ್ರೆಸ್‌ ಸರ್ಕಾರಕ್ಕೆ 3 ವರ್ಷ | ಮಹಿಳಾ ಮತ್ತು ಮಕ್ಕಳ ಕಲ್ಯಾಣ: ಘೋಷಣೆ ಎಷ್ಟು? ಸಾಧನೆ ಎಷ್ಟು? Janashakthi Media

Donate Janashakthi Media

Leave a Reply

Your email address will not be published. Required fields are marked *