ಖಾಸಗಿ ಹೂಡಿಕೆ ಕುಸಿತ – ಭಾರತದ ದೊಡ್ಡ ಸವಾಲು: ಕಾಂಗ್ರೆಸ್ ಟೀಕೆ

ನವದೆಹಲಿ: ಭಾರತದಲ್ಲಿ ಖಾಸಗಿ ಕಾರ್ಪೊರೇಟ್ ಹೂಡಿಕೆ ಚೈತನ್ಯ ಕೊರತೆ ದೇಶದ ಅತ್ಯಂತ ಗಂಭೀರ ಸವಾಲಾಗಿದೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ. ಭಾರತ

ಜೂನ್‌ 25ರಂದು ಈ ಕುರಿತು ಪ್ರತಿಕ್ರಿಯಿಸಿದ ಅವರು, ಆರ್ಥಿಕ ಶಕ್ತಿಯ ಹೆಚ್ಚುತ್ತಿರುವ ಕೇಂದ್ರೀಕರಣವು ಹೂಡಿಕೆ ಬೆಳವಣಿಗೆಗೆ ಅಡ್ಡಿಯಾಗುತ್ತಿದೆ ಎಂದು ಆರೋಪಿಸಿದರು.

ಇತ್ತೀಚಿನ ವರದಿಯನ್ನು ಉಲ್ಲೇಖಿಸಿ,ಅದಾನಿ ಗ್ರೂಪ್ 2025-26 ಹಣಕಾಸು ವರ್ಷದಲ್ಲಿ ದೇಶದ ಒಟ್ಟು ಖಾಸಗಿ ಮೂಲಧನ ವೆಚ್ಚದ ಸುಮಾರು ಮೂರನೇ ಭಾಗವನ್ನು ಒಬ್ಬರೇ ಹೊಂದಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಇಂಧನ ದರ ಏರಿಕೆ ವಿರುದ್ಧ ಸಿಪಿಐ(ಎಂ) ಆಕ್ರೋಶ – ತಕ್ಷಣ ಕಡಿತಕ್ಕೆ ಒತ್ತಾಯ

“ಖಾಸಗಿ ಹೂಡಿಕೆ ಕುಂಠಿತವಾಗಿರುವುದು ಹಲವು ಕಾರಣಗಳಿಂದಾಗಿದೆ. ನಿಜವಾದ ವೇತನದ ಸ್ಥಗಿತದಿಂದ ಬಳಕೆದಾರರ ಖರೀದಿ ಶಕ್ತಿ ಕುಸಿದಿದೆ. ಹೆಚ್ಚಿನ ದರ ಏರಿಕೆಯಿಂದ ಗೃಹ ಉಳಿತಾಯ ಪ್ರಮಾಣವೂ ಕಡಿಮೆಯಾಗಿದೆ,” ಎಂದು ರಮೇಶ್ ವಿವರಿಸಿದರು.

ಅವರು ಮತ್ತಷ್ಟು ಆರೋಪಿಸಿ, “ತೆರಿಗೆ ಹಾಗೂ ತನಿಖಾ ಸಂಸ್ಥೆಗಳ ‘ದಾಳಿ ರಾಜ್’, ನೀತಿಗಳಲ್ಲಿನ ಸ್ಥಿರತೆ ಮತ್ತು ಪಾರದರ್ಶಕತೆಯ ಕೊರತೆ ಹೂಡಿಕೆದಾರರಲ್ಲಿ ಭಯದ ವಾತಾವರಣ ಸೃಷ್ಟಿಸಿದೆ. ಜೊತೆಗೆ ಚೀನಾದಿಂದ ಹೆಚ್ಚುತ್ತಿರುವ ಆಮದು ದೇಶೀಯ ಉತ್ಪಾದಕರ ಮಾರುಕಟ್ಟೆಯನ್ನು ಹಾಳು ಮಾಡಿದೆ,” ಎಂದು ಹೇಳಿದರು.

ಆರ್ಥಿಕ ಶಕ್ತಿಯ ಕೇಂದ್ರೀಕರಣವು ಹೂಡಿಕೆ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತಿದೆ ಎಂದು ಅವರು ಒತ್ತಿ ಹೇಳಿದರು.

“ಸಾಮಾನ್ಯವಾಗಿ ಸಾರ್ವಜನಿಕ ಹೂಡಿಕೆ ಖಾಸಗಿ ಹೂಡಿಕೆಯನ್ನು ತಳ್ಳಿಹಾಕುತ್ತದೆ ಎಂಬ ಆತಂಕ ಇತ್ತು. ಆದರೆ ಈಗ ರಾಜಕೀಯ ಆಶ್ರಯ ಪಡೆದ ಖಾಸಗಿ ಹೂಡಿಕೆಯೇ ವ್ಯಾಪಕ ಖಾಸಗಿ ಹೂಡಿಕೆಯನ್ನು ಹೊರದೂಡುತ್ತಿದೆ,” ಎಂದು ರಮೇಶ್ ಟೀಕಿಸಿದರು.

ಇದನ್ನೂ ನೋಡಿ: ಬೀದಿ ವ್ಯಾಪಾರಿಗಳನ್ನು ರಕ್ಷಿಸಿ – ಪ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ Janashakthi Media

Donate Janashakthi Media

Leave a Reply

Your email address will not be published. Required fields are marked *