ಬಸ್ ವ್ಯವಸ್ಥೆ ಕಲ್ಪಿಸಿ, ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ, ಹರ್ಜಿ ಪಟ್ಟಿ ಬಿಡೆಗಡಿಗಾಗಿ ಎಸ್‌ಎಫ್‌ಐ ಅಗ್ರಹ

ವಿಜಯನಗರ: ತಾಲೂಕಿನ ಎಲ್ಲಾ ಗ್ರಾಮೀಣ ಪ್ರದೇಶಗಳಿಗೆ ಸರಿಯಾದ ಸಮಯಕ್ಕೆ ಸಮರ್ಪಕವಾಗಿ ಬಸ್ ವ್ಯವಸ್ಥೆ ಕಲ್ಪಿಸಲು ಮತ್ತು ಹಾಸ್ಟೆಲ್ ಹಾರ್ಜಿ ಹಾಕಿದ ಎಲ್ಲಾ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ, ಹರ್ಜಿ ಪಟ್ಟಿ ಬಿಡೆಗಡಿಗಾಗಿ ಎಸ್‌ಎಫ್‌ಐ ಅಗ್ರಹಿಸಿದೆ.

ಈ ಸಂದರ್ಭದಲ್ಲಿ ಎಸ್‌ಎಫ್‌ಐ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಶಿವರೆಡ್ಡಿ ಮಾತನಾಡಿ ಹರಪನಹಳ್ಳಿ ನಗರಕ್ಕೆ ತಾಲೂಕಿನ ಎಲ್ಲಾ ಗ್ರಾಮೀಣ ಪ್ರದೇಶಗಳಿಂದ ಸರಿಸುಮಾರು 7,000ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳಿಗೆ ವ್ಯಾಸಂಗ ಮಾಡುಲು ಬರುತ್ತಿದ್ದರೆ ಆದರೆ ಬಸ್ ವ್ಯವಸ್ಥೆ ಇಲ್ಲದ ಕಾರಣಕ್ಕೆ ಎಷ್ಟೋ ವಿದ್ಯಾರ್ಥಿಗಳು ತರಗತಿಯನ್ನು ತಪ್ಪಿಸಿಕೊಳ್ಳುವಂತಹ ಪರಿಸ್ಥಿತಿ ಉಂಟಾಗಿದೆ ಮತ್ತು ಬಸ್ ವ್ಯವಸ್ಥೆ ಸರಿಯಾಗಿ ಇಲ್ಲದ ಕಾರಣಕ್ಕೆ ಪೋಷಕರು ತಮ್ಮ ಮಕ್ಕಳುನ್ನು ವಿದ್ಯಾಭ್ಯಾಸಕ್ಕೆ ಕಳೆಸದೆ ಇರುವದರಿಂದ ಎಷ್ಟೋ ವಿದ್ಯಾರ್ಥಿಗಳು ತಮ್ಮ ವಿದ್ಯೆಭ್ಯಾಸವನ್ನೆ ನಿಲ್ಲಿಸಿದ್ದಾರೆ.

ಈ ಕಾರಣದಿಂದ ತಮ್ಮ ಇಲಾಖೆಗೆ ಬಸ್ ಬಿಡುವಂತೆ ಹಲವಾರು ಬಾರಿ ಮನವಿ ಪತ್ರವನ್ನು ನೀಡಿದ್ದೇವೆ ಆದರೆ ಇಲಾಖೆಯ ಅಧಿಕಾರಿಗಳು ಮನವಿಗೆ ಸ್ಪಂಧಿಸಿದೆ ನಿರ್ಲಕ್ಷ್ಯತನ ವಹಿಸಿರುವುದು ಅತ್ಯಂತ ಖಂಡನಿಯ ಮತ್ತು ಹಾಸ್ಟೆಲ್ ಅರ್ಜಿ ಹಾಕಿದ ಎಲ್ಲ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಸಿಗುಬೇಕು ಹಾಸ್ಟೆಲ್ ಅರ್ಜಿಗಳ ಪಟ್ಟಿಯನ್ನು ಈ ಕೂಡುಲೆ ಪ್ರಕಟಸಿಬೇಕೆಂದು SFI ಅಗ್ರಹ ಮಾಡುತ್ತೇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ವೆನೆಜುವೆಲಾದಲ್ಲಿ ಭೀಕರ ಭೂಕಂಪ : ಕಟ್ಟಡಗಳು ಕುಸಿತ, ಸಾವಿರಾರು ಸಾವು-ನೋವಿನ ಆತಂಕ

ಎಸ್‌ಎಫ್‌ಐ ತಾಲೂಕು ಸಂಚಾಲಕರಾದ ಮಲ್ಲಿಕಾರ್ಜುನ ಮಾತನಾಡಿ ಎಸ್ ಎಫ್ ಐ ಹೋರಾಟದ ಪ್ರತಿಫಲವಾಗಿ ರಾಜ್ಯ ಸರ್ಕಾರವು ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಿರುವುದು ಭಾರತ ವಿದ್ಯಾರ್ಥಿ ಫೆಡರೇಷನ್ ತಾಲೂಕು ಸಮಿತಿಯು ಸ್ವಾಗತ ಬಯುಸುತ್ತೆದೆ ಆದರೆ ಉಚಿತ ಬಸ್ ಪಾಸ್ ಜೊತೆಗೆ ಸರಿಯಾದ ಸಮಯಕ್ಕೆ ಸಮರ್ಪಕವಾಗಿ ಎಲ್ಲಾ ಗ್ರಾಮೀಣ ಪ್ರದೇಶಗಳಿಗೆ ಬಸ್ ಬಿಡಲು ಸರ್ಕಾರ ಹೆಚ್ಚಿನ ಮಟ್ಟದಲ್ಲಿ ಬಸ್ ಖರೀದಿಸಲು ಮುಂದಾಗಬೇಕು ಎಂದು SFI ಒತ್ತಾಯ ಮಾಡುತ್ತೇದೆ ಎಂದು ಹೇಳಿದರು.

ಅತೀ ಶೀಘ್ರದಲ್ಲಿ ಬೇಡೆಕೆಗಳನ್ನು ನೆರವೇರಸದೆ ಹೋದಲ್ಲಿ ಮುಂಬರುವ ದಿನಗಳಲ್ಲಿ ಹರಪನಹಳ್ಳಿಯನ್ನು ಬಂದು ಮಾಡುಲಾಗುತ್ತೆದೆ ಎಂದು ಎಸ್ ಎಫ್ ತಾಲೂಕು ಸಹಾ ಸಂಚಾಲಕರಾದ ಸಂಜುನಾಯ್ಕ್ ತಿಳಿಸಿದರು.

1. ಡಿಪೋ ಬಳಿ ಇರುವ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಬಸ್ ಬಿಡುಬೇಕು.

2. ನಿಚ್ಚಲಾಪುರು ನಿಂದ ಹರಪನಹಳ್ಳಿ ಗೆ ಬಸ್ ಬಿಡುಬೇಕು.

3. ತಾಲವಕಾರ ನಿಂದ ಹರಪನಹಳ್ಳಿ ಗೆ ಬಸ್ ಬಿಡುಬೇಕು.

4. ಪೃಥ್ವಿಶ್ವರ್ ನಿಂದ ಹರಪನಹಳ್ಳಿ ಗೆ ಬಸ್ ಸ್ಟಾಪ್ ಇದ್ದರು ನಿಲ್ಲಿಸದೆ ಹಾಗೆ ಹೋಗುತ್ತಾರೆ ಹಾಗಾಗಿ ಕೂಡುಲೆ ನಿಲ್ಲಿಸಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಬಸ್ ವ್ಯವಸ್ಥೆ ಮಾಡಬೇಕು.

5. ನಿಪ್ಪನ ನಾಯಕನಹಳ್ಳಿ ನಿಂದ ಹರಪನಹಳ್ಳಿ ಗೆ ಬಸ್ ಬಿಡುಬೇಕು.

6. ಕುಂಚೂರು ನಿಂದ ಹರಪನಹಳ್ಳಿ ಗೆ ಯಾವದೇ ಬಸ್ ವ್ಯವಸ್ಥೆ ಇಲ್ಲದ ಕಾರಣ ವಿದ್ಯಾರ್ಥಿಗಳು ಬೆಳಿಗ್ಗೆ ಹಾಲಿನ ಗಾಡಿಗೆ ಬರುತ್ತಿದ್ದಾರೆ ಕೂಡಲೆ ಬಸ್ ವ್ಯವಸ್ಥೆ ಕಲ್ಪಿಸಬೇಕು

7. ಮಾದಪುರ ನಿಂದ ಹರಪನಹಳ್ಳಿ ಗೆ ಬಸ್ ಬಸ್ ಬಿಡುಬೇಕು.

8. ಕಳದಿಪುರು ನಿಂದ ಹರಪನಹಳ್ಳಿಗೆ ಬಸ್ ವ್ಯವಸ್ಥೆ ಮಾಡಬೇಕು.

9. ಹೊಸ್ ಹೋಬಳಾಪುರು ನಿಂದ ಹರಪನಹಳ್ಳಿ ಗೆ ಬಸ್ ಬಿಡುಬೇಕು.

10. ಹರ್ಸಾನಾಳ್ ನಿಂದ ಹರಪನಹಳ್ಳಿ

11. ಶಾಲಾ-ಕಾಲೇಜ್ ಆರಂಭದ ಜೊತೆಗೆ ಹಾಸ್ಟೆಲ್ ಪ್ರಾರಂಭಿಸಬೇಕು.

12. ಆಯ್ಕೆ ಪಟ್ಟಿ ಬಿಡುಗಡೆಗಾಗಿ ವಿಳಂಬ ಮಾಡಬಾರದು.

13. ಹಾಸ್ಟೆಲ್ ಆಯ್ಕೆ ಪಟ್ಟಿಯನ್ನು ಕೂಡಲೇ ಬಿಡುಗಡೆ ಮಾಡಬೇಕು.

14. ಅರ್ಜಿ ಹಾಕಿದ ಎಲ್ಲಾ ವಿದ್ಯಾರ್ಥಿಗಳಿಗೂ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಬೇಕು.

15. ಮೆನ್ ಚಾರ್ಟ್ ಪ್ರಕಾರ ಉತ್ತಮ ಗುಣಮಟ್ಟದ ಆಹಾರವನ್ನು ಸಮಯಕ್ಕೆ ಸರಿಯಾಗಿ ಒದಗಿಸಬೇಕು.

16. ಗ್ರಂಥಾಲಯ ಮತ್ತು ಅದಕ್ಕೇಬೇಕಾದಂತಹ ಪಠ್ಯಪುಸ್ತಕ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆ ಪುಸ್ತಕಗಳನ್ನು ಒದಗಿಸಬೇಕು.

17. ಕಂಪ್ಯೂಟರ್ ಲ್ಯಾಬ್ ಒದಗಿಸಬೇಕು.

18. ಫ್ರೀ ವೈಫೈ ನೀಡಬೇಕು.

19. ವಿದ್ಯಾರ್ಥಿಗಳ ಆಹಾರ ಭತ್ಯೆಯನ್ನು ಕನಿಷ್ಠ 4.500 ರೂ ಕ್ಕೆ ಏರಿಕೆ ಮಾಡಬೇಕು.

ಮುಖಂಡರಾದ ಗೌತಮಿ, ಮಂಗಳಮ್ಮ, ಪ್ರಿಯಾ, ಸುಜಾತ ಮೋಹನ್, ಕಿರಣ್, ಬಸವರಾಜ್, ಸಂಜಯ್, ಕೃಷ್ಣ, ವಿಜಯಕುಮಾರ್, ಹಾಗೂ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಇದನ್ನೂ ನೋಡಿ: ದುಡಿಯುವ ಭೂಮಿ ಕಿತ್ತುಕೊಂಡ ಸರಕಾರ – ಯು.‌ಬಸವರಾಜ Janashakthi Media

Donate Janashakthi Media

Leave a Reply

Your email address will not be published. Required fields are marked *