ಹಾವೇರಿ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನುಸರಿಸುವ ಜನ ವಿರೋಧಿ ನೀತಿಗಳು, ವಿದ್ಯಾರ್ಥಿ ವಿರೋಧಿ ನೀತಿಗಳನ್ನು ಹಿಮ್ಮೆಟ್ಟಿಸಲು ಬಲಿಷ್ಠ ವಿದ್ಯಾರ್ಥಿ ಚಳುವಳಿಯನ್ನು ರೂಪಿಸಬೇಕಾಗಿದೆ ಎಂದು ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಹೇಳಿದರು. ಸರ್ಕಾರ
ನಗರದ ಪಿ.ಬಿ ರಸ್ತೆಯಲ್ಲಿರುವ ಭಗತ್ ಅಕಾಡೆಮಿಯಲ್ಲಿ ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್ಎಫ್ಐ) ಹಾವೇರಿ ಜಿಲ್ಲಾ ಸಮಿತಿಯು ಅಧ್ಯಯನ, ಸಂಘಟನೆ, ನಾಯಕತ್ವ ಕುರಿತು ಆಯೋಜಿಸಿದ ಜಿಲ್ಲಾ ಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಗತ್ ಸಿಂಗ್, ರಾಜಗುರು, ಸುಖದೇವ್ ಅವರು ಜೀವನಶೈಲಿ, ವಿಚಾರಧಾರೆಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು. ಸರ್ಕಾರ
ಭಗತ್ ಸಿಂಗ್ ಹೋರಾಟ ನಮಗೆ ಸ್ಪೂರ್ತಿ. ನಮ್ಮ ಹಳ್ಳಿಗಳಲ್ಲಿ ಸರಿಯಾದ ರೀತಿಯ ಶಾಲೆಗಳು, ಅಂಗನವಾಡಿ, ಕಾಲೇಜುಗಳಿಲ್ಲ, ಡೋನೇಷಣ ಹಾವಳಿ ವಿಪರೀತವಾಗಿದೆ. ಬೇರೆ ದೇಶಗಳಲ್ಲಿ ಕಚ್ಚಾ ತೈಲ ದರ ಕಡಿಮೆ ದರದಲ್ಲಿ ಕೊಟ್ಟರೆ ಆದರೆ ನಮ್ಮ ದೇಶದಲ್ಲಿ ಯಾಕೆ ಜಾಸ್ತಿ ಪೆಟ್ರೋಲ್ ಡಿಸೇಲ್ ದರ ಯಾಕೆ ಜಾಸ್ತಿಯಾಗುತ್ತಿದೆ. ಸರಿಯಾದ ರೀತಿಯ ಉದ್ಯೋಗಗಳು ಕೂಡ ಬಿಡುತ್ತಿಲ್ಲ. ಪ್ರತಿ ಬಜೆಟ್ ಗಳಲ್ಲಿ ಉದ್ಯೋಗಳು ನೀಡುತ್ತಿಲ್ಲ.
ಇದನ್ನೂ ಓದಿ: ರಾಜೀನಾಮೆ ಹಿಂಪಡೆದ ರಾಮಲಿಂಗಾ ರೆಡ್ಡಿ: ಕಾಂಗ್ರೆಸ್ ಒಳಗಿದ್ದ ಭಿನ್ನಮತಕ್ಕೆ ತೆರೆ
ಹಾವೇರಿ ಜಿಲ್ಲೆಯ ಎಸ್ಎಫ್ಐ ಸಂಘಟನೆ ದೊಡ್ಡ ಮಟ್ಟದ ಚಳುವಳಿಯನ್ನು ನಾವು ಕಾಣುತಿದ್ದೇವೆ. ನಮ್ಮ ಜಿಲ್ಲೆಯಲ್ಲಿ ಸರಿಯಾದ ಕಾಲೇಜುಗಳು, ಹಾಸ್ಟೆಲ್ ಗಳು ಇರಲಿಲ್ಲ. ಎಸ್ಎಫ್ಐ ಹೋರಾಟದಿಂದ ಮಾತ್ರ ತರಲು ಸಾದ್ಯವಾಗಿದೆ. ಎಸ್ಎಫ್ಐ ಚಳುವಳಿಯ ಮೂಲ ಉದ್ದೇಶ ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಸಮಾಜವಾದ. ಇದು ಎಸ್ಎಫ್ಐ ನ ಮೂರು ಘೋಷಣೆಯಾಗಿದೆ. ಜಾತಿ ವ್ಯವಸ್ಥೆ ತೊಲಗಿಸಲು ಹೋರಾಟ ರೂಪಿಸಬೇಕಿದೆ. ಜಿಲ್ಲೆಯಲ್ಲಿ ಎಲ್ಲರೂ ಸೇರಿ ಚಳುವಳಿಯನ್ನು ಕಟ್ಟಬೇಕು ಎಂದು ಹೇಳಿದ್ದರು.
ಎಸ್ಎಫ್ಐ ಮಾಜಿ ಜಿಲ್ಲಾಧ್ಯಕ್ಷೆ ಹಾಗೂ ಡಿವೈಎಫ್ಐ ರಾಜ್ಯ ಸಮಿತಿ ಸದಸ್ಯೆ ರೇಣುಕಾ ಕಹರ ಮಾತನಾಡಿ , ಎಸ್ಎಫ್ಐ ಸಂಘಟನೆಯ ಎಲ್ಲಾ ತರಹದ ಚಳುವಳಿಯನ್ನು ನೀವೆಲ್ಲ ನೋಡುತ್ತಿರಬಹುದು. ದುಡಿಯುತಿರುವ ಜನಗಳ ಪರವಾಗಿ, ವಿದ್ಯಾರ್ಥಿಗಳ ಸಮಸ್ಯೆಗಳನ್ನು ಕೈಗೆತ್ತಿಕೊಂಡು ಎಸ್ಎಫ್ಐ ಸಂಘಟನೆ ಕೆಲಸವನ್ನು ಮಾಡುತ್ತಿದೆ.
ದಿನಕ್ಕೊಂದು ಹೇಳಿಕೆಯನ್ನು ನೀಡುತ್ತಿದ್ದಾರೆ. ಆದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸರಿಯಾದ ರೀತಿಯಲ್ಲಿ ಯುವಕರಿಗೆ ಉದ್ಯೋಗಗಳನ್ನು ಸೃಷ್ಟಿ ಮಾಡುತ್ತಿಲ್ಲ. ಲಕ್ಷಾಂತರ ಉದ್ಯೋಗ ಖಾಲಿ ಇದ್ದರೂ ಕೂಡ ಯಾಕೆ ಭರ್ತಿ ಮಾಡುತ್ತಿಲ್ಲ. ಹಾಗಾಗಿ ಎಲ್ಲರೂ ಸೇರಿ ಚಳುವಳಿಯನ್ನು ಒಗ್ಗಟ್ಟಾಗಿ ಕಟ್ಟಬೇಕು. ನಾವೆಲ್ಲರೂ ಸೇರಿ ಜನಸಾಮಾನ್ಯರ ಪರವಾಗಿ , ದೀನ ದಲಿತರ ಮಕ್ಕಳ ಪರವಾಗಿ, ಸರಿಯಾದ ರೀತಿಯಲ್ಲಿ ನಾವೆಲ್ಲರೂ ಚಳುವಳಿ ಚಟುವಟಿಕೆಗಳನ್ನು ಮಾಡ್ಬೇಕು. ಸಂಘಟಿತರಾಗುವ ನಮ್ಮ ಜೀವನ ಶೈಲಿಗೆ ನಾವೆಲ್ಲರೂ ಪಾಲಿಸಿಕೊಳ್ಳಬೇಕೆಂದು ಕಾರ್ಯಗಾರ ಯಶಸ್ವಿಗೆ ಶುಭಕೋರಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಎಸ್ಎಫ್ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಅನ್ಯಾಯವನ್ನು ಪ್ರಶ್ನಿಸುವ ಯುವಕರಿಗೆ ಜಿರಳೆಗಳೇಂದು ಹಂಗಿಸುವ ಮನಸ್ಥಿತಿಗಳು ದೇಶದ ದುರಂತಗಳೆಂದು ಹೇಳಬಹುದು.
ಶಿಕ್ಷಣ ಹಾಗೂ ಉದ್ಯೋಗ, ಆರೋಗ್ಯದ ಸಮಸ್ಯೆಗಳ ಪರಿಹಾರಕ್ಕಾಗಿ ಚರ್ಚೆ ನಡೆಸಬೇಕಾದ ಘನವೆತ್ತ ಅಧಿಕಾರಿಗಳು ವಿದ್ಯಾರ್ಥಿಗಳಿಗೆ, ಯುವಕರಿಗೆ ಜಿರಳೆಗಳೆನ್ನುವುದು ಹಾಸ್ಯಾಸ್ಪದ ವಿಷಯವಲ್ಲ ಬಹಳಷ್ಟು ಗಂಭೀರವಾದ ಪರಿಸ್ಥಿತಿಯಲ್ಲಿದೆ ಇದು ಬಹುದೊಡ್ಡ ಚಳುವಳಿಯಾಗಿ ಬೆಳೆಯುತ್ತಿದೆ. ಆದರಿಂದ ವಿದ್ಯಾರ್ಥಿಗಳು ತಮಗೆ ಆದ ಅನ್ಯಾಯವನ್ನು ಸಹಿಸಿಕೊಳ್ಳಬಾರದು ಸಂಘಟಿತರಾಗಬೇಕು ಎಂದು. ವಿವಿಧ ಘಟಕಗಳಿಂದ ಆಗಮಿಸಿದ ಕಾರ್ಯಕರ್ತರಿಗೆ ಜಿಲ್ಲಾ ಮಟ್ಟದ ಕಾರ್ಯಾಗಾರದಲ್ಲಿ ಅಧ್ಯಯನ, ಸಂಘಟನೆ, ನಾಯಕತ್ವ ಕುರಿತು ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಹಾಸ್ಟೆಲ್ ವಿದ್ಯಾರ್ಥಿಗಳ ಉಪಸಮಿತಿಯ ರಾಜ್ಯ ಸಂಚಾಲಕ ಅರುಣ್ ನಗವತ್, ಕಾಲೇಜ್ ಘಟಕದ ಅಧ್ಯಕ್ಷೆ ಚೈತ್ರಾ ಕೊರವರ ವೇದಿಕೆಯಲ್ಲಿದರು. ಶಂಭು ಸವದತ್ತಿ, ಪರಶುರಾಮ ಎಸ್, ಜ್ಯೋತಿ ಪಟ್ಟಣಶೆಟ್ಟಿ , ಪ್ರೀತಿ ಭದ್ರಾಪುರ, ಅಸ್ಫಿಯ ನದಾಫ್, ವಿಕಾಶ್ ಎಮ್, ನಂಜುಂಡ, ಶರಣ್, ಪಲ್ಲವಿ ಸವಣೂರ, ಜ್ಯೋತಿ ಪೂರ್ಲಿ, ಸಂದೀಪ್, ಮಂಜುಳಾ ಹಾವೇರಿ ಅನೇಕ ಕಾರ್ಯಕರ್ತರು ಭಾಗವಹಿಸಿದರು. ಕೃಷ್ಣ ನಾಯ್ಕ ನಿರೂಪಿಸಿದರು. ರಾಘು ಅಂಗಡಿ ವಂದಿಸಿದರು.
ಇದನ್ನೂ ನೋಡಿ: ಖಾತೆ ಹಂಚಿಕೆಯಲ್ಲಿ ಅಸಮಾಧಾನ: ಹಿರಿತನ ಪರಿಗಣಿಸುತ್ತಿಲ್ಲ ಎಂದ ಸಚಿವ ಕೆ ಹೆಚ್ ಮುನಿಯಪ್ಪ Janashakthi Media
