ನವದೆಹಲಿ: ಸುಪ್ರೀಂ ಕೋರ್ಟ್ನ ನ್ಯಾಯಾಧೀಶರ ಸಂಖ್ಯೆಯನ್ನು ಪ್ರಸ್ತುತ 34ರಿಂದ 38ಕ್ಕೆ ಹೆಚ್ಚಿಸುವ ಮಹತ್ವದ ಪ್ರಸ್ತಾಪಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಮೂಲಕ ನ್ಯಾಯಾಂಗ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವ ಕ್ರಮಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ನವದೆಹಲಿ
ಇದನ್ನೂ ಓದಿ: ಮದ್ಯ ನೀತಿ ಪ್ರಕರಣ| ಕೇಜ್ರಿವಾಲ್ ಪರ ವಕಾಲತ್ತು ವಹಿಸಲು ಅಮಿಕಸ್ ಕ್ಯೂರಿ ನೇಮಕ: ದೆಹಲಿ ಹೈಕೋರ್ಟ್
ಈ ಪ್ರಸ್ತಾವನೆಯನ್ನು ಜಾರಿಗೆ ತರಲು ಸಂಸತ್ತಿನಲ್ಲಿ “ಸುಪ್ರೀಂ ಕೋರ್ಟ್ (ನ್ಯಾಯಾಧೀಶರ ಸಂಖ್ಯೆ) ತಿದ್ದುಪಡಿ ಮಸೂದೆ, 2026” ಅನ್ನು ಮಂಡಿಸಲು ಸಂಪುಟ ಅನುಮೋದನೆ ನೀಡಿದೆ. ನ್ಯಾಯಾಂಗದ ಹೆಚ್ಚುತ್ತಿರುವ ಕೆಲಸದ ಒತ್ತಡವನ್ನು ಗಮನದಲ್ಲಿಟ್ಟುಕೊಂಡು ಈ ತಿದ್ದುಪಡಿ ಮಾಡಲಾಗುತ್ತಿದೆ.
ಈ ಹಿಂದೆ 1956ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಸಂಖ್ಯೆ ಕೇವಲ 10ಕ್ಕೆ ಸೀಮಿತವಾಗಿತ್ತು. ನಂತರ 1960ರಲ್ಲಿ 13ಕ್ಕೆ, 1977ರಲ್ಲಿ 17ಕ್ಕೆ, 1986ರಲ್ಲಿ 25ಕ್ಕೆ ಹಾಗೂ 2008ರಲ್ಲಿ 30ಕ್ಕೆ ಹೆಚ್ಚಿಸಲಾಯಿತು. ಕೊನೆಯ ಬದಲಾವಣೆ 2019ರಲ್ಲಿ ನಡೆದಿದ್ದು, ಆಗ 31ರಿಂದ 34ಕ್ಕೆ ಹೆಚ್ಚಿಸಲಾಗಿತ್ತು.
ಈಗ ಮತ್ತೆ 38ಕ್ಕೆ ಹೆಚ್ಚಿಸುವ ಮೂಲಕ ನ್ಯಾಯಾಂಗ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ಇದನ್ನೂ ನೋಡಿ: ದು.ಸರಸ್ವತಿಯವರ ಹೋರಾಟದ ಯಶೋಗಾಥೆ Janashakthi Media
