ನವದೆಹಲಿ: ಅತ್ಯಾಚಾರಕ್ಕೊಳಗಾದ 15 ವರ್ಷದ ಬಾಲಕಿಯ ಗರ್ಭಪಾತಕ್ಕೆ ಸಂಬಂಧಿಸಿದಂತೆ, “ಅತ್ಯಾಚಾರ ಸಂತ್ರಸ್ತೆಯರ ವಿಷಯದಲ್ಲಿ ಗರ್ಭಪಾತ ಮಾಡಿಸಿಕೊಳ್ಳಲು ಯಾವುದೇ ನಿರ್ದಿಷ್ಟ ಕಾಲಮಿತಿ ಇರಬಾರದು” ಎಂದು ಸುಪ್ರೀಂ ಕೋರ್ಟ್ ಏಪ್ರಿಲ್ 30ರಂದು ಹೇಳಿದೆ.
ಇದನ್ನೂ ಓದಿ: ಮೇ 29ರಿಂದ ಶಾಲೆ ಶುರು: 2026-27 ಶೈಕ್ಷಣಿಕ ಕ್ಯಾಲೆಂಡರ್ ಪ್ರಕಟ
ಅತ್ಯಾಚಾರದಿಂದ ಉಂಟಾದ ಗರ್ಭಧಾರಣೆಯನ್ನು ಮುಂದುವರಿಸುವಂತೆ ಬಾಲಕಿಯನ್ನು ಒತ್ತಾಯಿಸುವುದು ಆಕೆಗೆ ಮತ್ತಷ್ಟು ನೋವು ಮತ್ತು ಜೀವನಪರ್ಯಂತ ಮಾನಸಿಕ ಕಲೆಗಳನ್ನು ನೀಡುತ್ತದೆ. “ಆಕೆ ಕೇವಲ 15 ವರ್ಷದ ಮಗು, ಈಗ ಆಕೆ ಓದಬೇಕಾದ ವಯಸ್ಸು. ಇಂತಹ ಪರಿಸ್ಥಿತಿಯಲ್ಲಿ ಆಕೆಯನ್ನು ತಾಯಿಯನ್ನಾಗಿ ಮಾಡುವುದು ಎಷ್ಟು ಸರಿ? ಆಕೆ ಅನುಭವಿಸುತ್ತಿರುವ ಅವಮಾನ ಮತ್ತು ನೋವನ್ನು ಕಲ್ಪಿಸಿಕೊಳ್ಳಿ” ಎಂದು ಪೀಠವು ಹೇಳಿತು.
ಯಾವುದೇ ವ್ಯಕ್ತಿಯ ಮೇಲೆ ಅನಪೇಕ್ಷಿತ ಗರ್ಭಧಾರಣೆಯನ್ನು ಹೇರಲು ಸಾಧ್ಯವಿಲ್ಲ. ಪ್ರಸ್ತುತ ಇರುವ ಕಾನೂನಿನ ಪ್ರಕಾರ ಗರ್ಭಪಾತಕ್ಕೆ 20 ವಾರಗಳ ಕಾಲಮಿತಿಯಿದೆ. ಆದರೆ ಅತ್ಯಾಚಾರ ಸಂತ್ರಸ್ತೆಯರ ಪ್ರಕರಣದಲ್ಲಿ ಈ ಮಿತಿಯನ್ನು ತೆಗೆದುಹಾಕುವ ಬಗ್ಗೆ ಅಥವಾ ಕಾನೂನಿಗೆ ತಿದ್ದುಪಡಿ ತರುವ ಬಗ್ಗೆ ಪರಿಶೀಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ. “ಕಾನೂನು ಎಂಬುದು ಕಾಲಕ್ಕೆ ತಕ್ಕಂತೆ ಬದಲಾಗಬೇಕು ಮತ್ತು ಜೀವಂತವಾಗಿರಬೇಕು ಎಂದು ನ್ಯಾಯಾಲಯ ಪ್ರತಿಪಾದಿಸಿತು.
ಇದನ್ನೂ ನೋಡಿ: “ಬಿಸಿಲಿಗೆ ಎಸಿ ಬೇಡ… ಜೇಬಲ್ಲಿ ಒಂದು ಈರುಳ್ಳಿ ಸಾಕು!” Janashakthi Media
