ಗುಬ್ಬಿ: ಸಮರ್ಪಕವಾಗಿ ವಿದ್ಯುತ್ ನೀಡುತ್ತಿಲ್ಲ ಎಂದು ಆರೋಪಿಸಿ ಗುಬ್ಬಿ ತಾಲೂಕಿನ ಕೋಡಿನಾಗೇನಹಳ್ಳಿ, ವಾರುತಿ ಪಾಳ್ಯ, ಎನ್. ರಾಂಪುರ ಗ್ರಾಮಸ್ಥರು ನಿಟ್ಟೂರು ಬೆಸ್ಕಾಂ ಕಚೇರಿ ಮುಂದೆ ಪ್ರತಿಭಟಿಸಿದರು.
ರೈತ ಮುಖಂಡ ಸದಾಶಿವಯ್ಯ ವಾತನಾಡಿ, ಸುವಾರು ಮೂರು ತಿಂಗಳಿನಿಂದ ಸಮರ್ಪಕವಾಗಿ ವಿದ್ಯುತ್ ಕೊಡುತ್ತಿಲ್ಲ. ಇದರಿಂದ ರೈತರಿಗೆ ತುಂಬಾ ಸಮಸ್ಯೆಯಾಗುತ್ತಿದೆ. ಬೆಸ್ಕಾಂ ಅಧಿಕಾರಿಗಳು ರೈತರ ಜತೆ ಚಲ್ಲಾಟವಾಡುತ್ತಿದ್ದಾರೆ. ಎಸ್ಒ ಅಧಿಕಾರಿಗಳಿಗೆ ಮನವಿ ವಾಡಿದರೂ ಯಾವುದೇ ಸಮಸ್ಯೆ ಬಗೆಹರಿಸಿಲ್ಲ. ವಿದ್ಯುತ್ ಇಲ್ಲದೆ ರೈತರು ಪರಾದಾಡುವ ಪರಿಸ್ಥಿತಿ ಎದುರಾಗಿದೆ. ಬೇಸಿಗೆ ಇರುವುದರಿಂದ ತೋಟಗಳು ಒಣಗುವ ಪರಿಸ್ಥಿತಿ ನಿರ್ವಾಣವಾಗಿದೆ ಎಂದು ಆಕ್ರೋಶ ಹೊರಹಾಕಿದರು.
ಇದನ್ನೂ ಓದಿ: ವಿಶೇಷ ವಿಧಾನಸಭೆ ಅಧಿವೇಶನಕ್ಕೆ ಮಹಿಳಾ ಪತ್ರಕರ್ತರ ಉಪಸ್ಥಿತಿ ಕೋರಿದ ಛತ್ತೀಸ್ಗಢ ಸರ್ಕಾರ
ರೈತ ಮುಖಂಡ ಪ್ರಸಾದ್ ವಾತನಾಡಿ, ವಿದ್ಯುತ್ ಸಮಸ್ಯೆಯಿಂದ ಪಂಪ್, ಮೋಟಾರ್ಗೆ ಸಮಸ್ಯೆಯಾಗುತ್ತಿದೆ. ತೋಟಗಳಿಗೆ ನೀರು ಸರಬರಾಜು ವಾಡದೆ ಬೆಳೆ ಬೆಳೆಯುತ್ತಿರುವ ಬೆಳೆಗಳಿಗೂ ನೀರಿನ ಅಭಾವ ಎದುರಾಗುತ್ತಿದೆ. ಸಂಬಂಧಪಟ್ಟ. ಬೆಸ್ಕಾ ಅಧಿಕಾರಿಗಳು ದೂರವಾಣಿ ಕರೆ ಸ್ವೀಕರಿಸುತ್ತಿಲ್ಲ ನಮ್ಮ ಸಮಸ್ಯೆ ಯಾರ ಬಳಿ ಹೇಳಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಅಳಲು ತೊಡಿಕೊಂಡರು.ಸಮಸ್ಯೆ ಬಗೆಹರಿಯದೆ ಹೋದರೆ ಮುಂದಿನ ದಿನಗಳಲ್ಲಿ ಕುಟುಂಬ ಸಮೇತ ಬೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ ನೆಡೆಸಲು ಮುಂದಾಗುತ್ತೆವೆ ಎಂದು ಎಚ್ಚರಿಸಿದರು.
ಬೆಸ್ಕಾಂ ಶಾಖಾಧಿಕಾರಿ ಕೃಷ್ಣಪ್ಪ ವಾತನಾಡಿ, ರೈತರ ಸಮಸ್ಯೆಯನ್ನು ನಾವು ಕೂಡ ಆಲಿಸಿದೇವೆ. ಇದರ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದು ಒಂದು ವಾರದೊಳಗೆ ರೈತರಿಗೆ ಬೆಳಗ್ಗೆ ಹಾಗ ಸಂಜೆ ವೇಳೆ ಸಮರ್ಪಕವಾಗಿ ವಿದ್ಯುತ್ ಕೊಡುತ್ತೇವೆ ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಹಿಂಪಡೆದರು.
ಇದನ್ನೂ ನೋಡಿ: ಖಾಸಗಿ ಆಸ್ಪತ್ರೆಗಳೊಂದಿಗೆ ಕರಾರು ಒಪ್ಪಂದ ರದ್ದತಿಗೆ ಒತ್ತಾಯಿಸಿ ಡಿವೈಎಫ್ಐ ಪ್ರತಿಭಟನೆ Janashakthi Media
