ಮುಂಬೈ: ಮಹಿಳಾ ಮೀಸಲಾತಿ ಬಗ್ಗೆ ಸಚಿವ ಗಿರೀಶ್ ಮಹಾಜನ್ ವೇದಿಕೆಯ ಮೇಲೆ ದೊಡ್ಡ ಭಾಷಣ ಬಿಗಿಯುತ್ತಿದ್ದರೆ, ಇತ್ತ ಅದೇ ಮೀಸಲಾತಿಯ ಹಕ್ಕಿನಿಂದ ಮಹಿಳೆಯೊಬ್ಬರು ರೊಚ್ಚಿಗೆದ್ದು ಸಚಿವರಿಗೇ ಬೆವರಿಳಿಸಿದ ಘಟನೆ ನಗರದಲ್ಲಿ ನಡೆದಿರುವುದು ದೇಶಾದ್ಯಂತ ಸದ್ದು ಮಾಡ್ತಿದೆ. ರಸ್ತೆ
ನಡೆದಿದ್ದೇನು?
ಮುಂಬೈನ ವರ್ಲಿಯ ಜಾಂಬೋರಿ ಮೈದಾನದಿಂದ ಡೋಮ್‌ವರೆಗೆ ಮಹಾಯುತಿ ಮೈತ್ರಿಕೂಟದ (ಬಿಜೆಪಿ ನೇತೃತ್ವದ) ವತಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಆಯೋಜಿಸಲಾಗಿತ್ತು.
ಕೇಂದ್ರದಲ್ಲಿ ಮಹಿಳಾ ಮೀಸಲಾತಿ ಮಸೂದೆ ತಿರಸ್ಕೃತಗೊಂಡಿದ್ದನ್ನು ಖಂಡಿಸಿ ಕಾಂಗ್ರೆಸ್ ಮತ್ತು ಎಂವಿಎ ವಿರುದ್ಧ ಸಾವಿರಾರು ಮಹಿಳೆಯರು ಬೀದಿಗಿಳಿದಿದ್ದರು. ಸಂಜೆ 5 ಗಂಟೆಗೆ ಶುರುವಾಗಬೇಕಿದ್ದ ಈ ರ್‍ಯಾಲಿ ವಿಳಂಬವಾದ ಕಾರಣ, ಇಡೀ ವರ್ಲಿ ಭಾಗ ಸ್ತಬ್ಧವಾಗಿತ್ತು.
ಇದನ್ನೂ ಓದಿ: ವಿದ್ಯಾವಂತ ಯುವಜನರಲ್ಲಿ ನಿರುದ್ಯೋಗದ ಹೆಚ್ಚಿನ ಪ್ರಮಾಣ
ಇದೇ ಟ್ರಾಫಿಕ್‌ನಲ್ಲಿ ಮಹಿಳೆಯೊಬ್ಬರು ತನ್ನ ಮಗುವನ್ನು ಶಾಲೆಯಿಂದ ಕರೆತರಲು ಹೋಗುತ್ತಿದ್ದಾಗ ಗಂಟೆಗಟ್ಟಲೆ ಸಿಲುಕಿಕೊಂಡಿದ್ದರು. ತಾಳ್ಮೆ ಕಳೆದುಕೊಂಡ ಆ ಮಹಿಳೆ, ಕಾರ್‌ನಿಂದ ಕೆಳಗಿಳಿದು ನೇರವಾಗಿ ಮೆರವಣಿಗೆಯ ಮಧ್ಯಕ್ಕೆ ನುಗ್ಗಿದ್ದಾರೆ. ಅಲ್ಲಿ ಭಾಷಣ ಸಿದ್ಧತೆಯಲ್ಲಿದ್ದ ಸಚಿವ ಗಿರೀಶ್ ಮಹಾಜನ್ ಅವರನ್ನೇ ತರಾಟೆಗೆ ತೆಗೆದುಕೊಂಡಿದ್ದಾರೆ.
ಇಲ್ಲಿ ನೂರಾರು ಜನರು ಕಾಯುತ್ತಿದ್ದಾರೆ. ಪಕ್ಕದಲ್ಲೇ ಖಾಲಿ ಮೈದಾನವಿದ್ದರೂ ರಸ್ತೆಯಲ್ಲೇಕೆ ಮೆರವಣಿಗೆ ಮಾಡ್ತೀರಾ? ಎಂದು ಕಿರುಚುತ್ತಾ ಸಚಿವರ ಬೆವರು ಇಳಿಸಿದ್ದಾರೆ. “ಇಲ್ಲಿಂದ ಮೊದಲು ಜಾಗ ಖಾಲಿ ಮಾಡಿ (Get out of here!)” ಎಂದು ಸಚಿವರಿಗೆ ಮತ್ತು ಪ್ರತಿಭಟನಾಕಾರರಿಗೆ ಅಕ್ಷರಶಃ ಕ್ಲಾಸ್ ತಗೊಂಡಿದ್ದಾರೆ.
ಸಚಿವರು ಮಹಿಳೆಯರ ಬಗ್ಗೆ ಭಾಷಣ ಬಿಗಿಯುತ್ತಿದ್ದರೆ, ಇತ್ತ ಅದೇ ಮಹಿಳೆಯೊಬ್ಬರು ಸಿಟ್ಟಿನಿಂದ ಬಂದು, “ನಿಮ್ಮ ಈ ಭಾಷಣ ಮತ್ತು ಶೋಕಿಯಿಂದ ನಮಗೆ ಇಲ್ಲಿ ಟ್ರಾಫಿಕ್ ಜಾಮ್ ಆಗುತ್ತಿದೆ, ಜನರಿಗೆ ತೊಂದರೆ ಕೊಡೋದು ನಿಲ್ಲಿಸಿ” ಎಂದು ಎಲ್ಲರ ಎದುರೇ ತರಾಟೆಗೆ ತೆಗೆದುಕೊಂಡರು.
ಸಚಿವರು ಸಮಾಧಾನಪಡಿಸಲು ಪ್ರಯತ್ನಿಸಿದರೂ, ಆಕೆ ಮಾತ್ರ “ಮೊದಲು ಈ ರಸ್ತೆ ಕ್ಲಿಯರ್ ಮಾಡಿ, ಆಮೇಲೆ ಮೀಸಲಾತಿ ಬಗ್ಗೆ ಮಾತಾಡಿ” ಎಂದು ಗುಡುಗಿದ್ದಾರೆ. ಸಚಿವರು ಮತ್ತು ಅವರ ಬೆಂಬಲಿಗರು ಒಂದು ಕ್ಷಣ ಏನು ಮಾಡಬೇಕೆಂದು ತಿಳಿಯದೆ ಪೇಚಿಗೆ ಸಿಲುಕಿದ ದೃಶ್ಯ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಪೊಲೀಸರು ಆಕೆಯನ್ನು ತಡೆಯಲು ಬಂದಾಗ, ಪೊಲೀಸರ ಮೇಲೆಯೂ ಹರಿಹಾಯ್ದ ಆಕೆ, “ನನಗೆ ಹಿರಿಯ ಅಧಿಕಾರಿಗಳ ಜೊತೆ ಮಾತನಾಡಬೇಕು” ಎಂದು ಪಟ್ಟು ಹಿಡಿದಿದ್ದಾರೆ. ಕೊನೆಗೆ ಪೊಲೀಸರು ಆಕೆಯನ್ನು ಸಮಾಧಾನಪಡಿಸಿ ಪಕ್ಕಕ್ಕೆ ಕರೆದೊಯ್ದಿದ್ದಾರೆ. ಸದ್ಯ ಸಚಿವರಿಗೆ ಮಹಿಳೆ ಚಳಿ ಬಿಡಿಸಿದ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ನೆಟ್ಟಿಗರ ಫುಲ್ ಸಪೋರ್ಟ್
ಸದ್ಯ ಈ ವಿಡಿಯೋ ಘರ್ ಕೆ ಕಲೇಷ್ ಎಂಬ ಎಕ್ಸ್ (X) ಖಾತೆಯಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಮಹಿಳೆಯ ಧೈರ್ಯಕ್ಕೆ ಭೇಷ್ ಎನ್ನುತ್ತಿದ್ದಾರೆ. ಭಾಷಣ ಮಾಡೋದು ಸುಲಭ, ಆದರೆ ಜನರ ಸಮಸ್ಯೆಗಳನ್ನು ಅರಿತುಕೊಳ್ಳುವುದು ಮುಖ್ಯ ಎಂದು ಜನರು ಕಮೆಂಟ್ ಮಾಡುತ್ತಿದ್ದಾರೆ.
ಇದನ್ನೂ ನೋಡಿ: ಸಂವಿಧಾನ ಮೌಲ್ಯಗಳ ಪ್ರತಿಧ್ವನಿ: ಸಂವಿಧಾನ ಗೀತೆ | ರವಿ ಮರಿಯಪ್ಪ – ಗುರುರಾಜ ದೇಸಾಯಿ ಮಾತಯಕತೆ Janashakthi Media
