‘ಚುನಾವಣಾ ಆಯೋಗ ಕೇಂದ್ರದ ಕೈಯಲ್ಲಿ’: ಸಿಎಂ ಸಿದ್ದರಾಮಯ್ಯ ಆರೋಪ

ದಾವಣಗೆರೆ: ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಧಾನಿ ನರೇಂದ್ರ ಮೋದಿ ರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಚುನಾವಣೆ, ಮತದಾನದ ವಿಚಾರ ಪ್ರಸ್ತಾಪ ಮಾಡಿ, ಆರೋಪ ಮಾಡಿದ್ದಾರೆ. ಚುನಾವಣಾ ಆಯೋಗ ಕೇಂದ್ರ ಹಾಗೂ ಬಿಜೆಪಿ ಕೈಯಲ್ಲಿದೆ ಎಂದು ಪುನರುಚ್ಚರಿಸಿದ್ದಾರೆ.

ಭಾರತೀಯ ಚುನಾವಣಾ ಆಯೋಗವು ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿ ಇರುವುದರಿಂದ ಮತದಾರರ ಪಟ್ಟಿಯನ್ನು ದುರುಪಯೋಗಪಡಿಸಿಕೊಂಡ ಆರೋಪ ಎದುರಿಸುತ್ತಿರುವ ದೇಶದ ಏಕೈಕ ಪ್ರಧಾನಿ ಮೋದಿ ಎಂದು ಟೀಕಿಸಿದ್ದಾರೆ.

ಕಾಂಗ್ರೆಸ್ ಎಂದಿಗೂ ಆಯೋಗವನ್ನು ದುರುಪಯೋಗಪಡಿಸಿಕೊಂಡಿಲ್ಲ

ಜವಾಹರಲಾಲ್ ನೆಹರೂ ಮತ್ತು ಇಂದಿರಾ ಗಾಂಧಿಯವರ ಕಾಲದಲ್ಲಿ ಚುನಾವಣಾ ಆಯೋಗದ ದುರುಪಯೋಗದ ಬಗ್ಗೆ ಯಾವುದೇ ದೂರುಗಳಿರಲಿಲ್ಲ . ಕಾಂಗ್ರೆಸ್ ಎಂದಿಗೂ ಆಯೋಗವನ್ನು ತಪ್ಪಾಗಿ ಬಳಸಿಕೊಂಡಿಲ್ಲ ಎಂದು ಸಮರ್ಥನೆ ನೀಡಿದರು.

ಇದನ್ನೂ ಓದಿ: ಕೇರಳ ವಿಧಾನಸಭಾ ಚುನಾವಣೆ: ಎಲ್‌ಡಿಎಫ್ ಪ್ರಣಾಳಿಕೆ ಬಿಡುಗಡೆ

ರಾಜ್ಯದ ಆರ್ಥಿಕ ಪರಿಸ್ಥಿತಿಯ ಬಗ್ಗೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ಆರೋಪಗಳನ್ನು ತಳ್ಳಿಹಾಕಿದ ಸಿದ್ದರಾಮಯ್ಯ, ಜಿಎಸ್‌ಟಿ ಸಂಗ್ರಹ ಮತ್ತು ಹೂಡಿಕೆಯಲ್ಲಿ ಕರ್ನಾಟಕ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ ಎಂದು ಸಮರ್ಥಿಸಿಕೊಂಡರು.

ಶೋಷಿತ ವರ್ಗದ ಕಣ್ಣೀರು ಒರೆಸುವ ಕೆಲಸ

ದೇಶದ ಜಿಡಿಪಿ ದರ ಶೇ. 7.14 ರಷ್ಟಿದ್ದರೆ, ರಾಜ್ಯದ ಜಿಡಿಪಿ ದರ ಶೇ. 8.1 ರಷ್ಟಿದೆ ಎಂದು ಅಂಕಿಅಂಶಗಳನ್ನು ನೀಡಿದ ಅವರು, ನರೇಂದ್ರ ಮೋದಿ ಆಡಳಿತದಲ್ಲಿ ದೇಶದ ಸಾಲವು 53 ಲಕ್ಷ ಕೋಟಿಯಿಂದ 218 ಲಕ್ಷ ಕೋಟಿಗೆ ಏರಿಕೆಯಾಗಿದೆ ಎಂದು ವ್ಯಂಗ್ಯವಾಡಿದರು.

ಬಡವರ ಪರವಾದ ಗ್ಯಾರಂಟಿ ಯೋಜನೆಗಳನ್ನು ಬಿಜೆಪಿ ವಿರೋಧಿಸುತ್ತಿದೆ ಎಂದು ಆರೋಪಿಸಿದ ಸಿದ್ದರಾಮಯ್ಯ, ತಮ್ಮ ಸರ್ಕಾರವು ಶೋಷಿತ ವರ್ಗದ ಕಣ್ಣೀರು ಒರೆಸುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.ರಾಜ್ಯದಲ್ಲಿ ಸಾಲದ ರಾಮಯ್ಯನ ಸರಕಾರ: ಅಶೋಕ್‌

‘ಸಿದ್ದರಾಮಯ್ಯ ಅಂದ್ರೆ ಸಾಲದ ರಾಮಯ್ಯ. ಸಾಲ ಮಾಡುವುದರಲ್ಲಿ ಮುಖ್ಯಮಂತ್ರಿ ನಿಸ್ಸೀಮರು, 2023ರಿಂದ ಇಲ್ಲಿಯವರೆಗೆ ಸಿದ್ದರಾಮಯ್ಯನವರು 4.21 ಕೋಟಿ ರೂ. ಸಾಲ ಮಾಡಿದ್ದಾರೆ,’ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಆರೋಪಿಸಿದರು.

‘2023 ರಲ್ಲಿ 81 ಸಾವಿರ ಕೋಟಿ ರೂ., 2024 ರಲ್ಲಿ 92,000 ಕೋಟಿ, 2025 ರಲ್ಲಿ 1,16,000 ಕೋಟಿ, 2026ರಲ್ಲಿ1,32,000 ಕೋಟಿ ರೂ. ಸೇರಿ ಒಟ್ಟು 4,21,000 ಕೋಟಿ ರೂ. ಸಾಲ ಮಾಡಿದ್ದಾರೆ. ಆ ಮೂಲಕ ಇದುವರೆಗೆ ರಾಜ್ಯವನ್ನಾಳಿದ ಎಲ್ಲಮುಖ್ಯಮಂತ್ರಿಗಳಿಗಿಂತಲೂ ಹೆಚ್ಚು ಸಲ ಮಾಡಿದ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ,’ ಎಂದು ಟೀಕಿಸಿದರು.ಆರ್ಥಿಕ ಸ್ಥಿತಿ ಐಸಿಯುನಲ್ಲಿ:

‘2013 ರಲ್ಲಿ ರಾಜ್ಯದ ಪ್ರತಿಯೊಬ್ಬ ನಾಗರಿಕನ ತಲೆ ಮೇಲೆ 19,000 ರೂ. ಸಾಲವಿತ್ತು. 2018 ರಲ್ಲಿ ಸಿದ್ದರಾಮಯ್ಯ ಅಧಿಕಾರದಿಂದ ಕೆಳಗಿಳಿದಾಗ ಸಾಲ 37,000 ರೂ.ಗೆ ಏರಿಕೆಯಾಗಿತ್ತು. 2023ರಲ್ಲಿ76,000 ರೂ. ಆಯಿತು, ಈಗ 2026ರ ಮಾರ್ಚ್ ಅಂತ್ಯಕ್ಕೆ ರಾಜ್ಯದ ಪ್ರತಿಯೊಬ್ಬ ವ್ಯಕ್ತಿಯ ತಲೆ ಮೇಲೆ 1,12,400 ರೂ. ಸಾಲವಿದೆ.

ಸಿದ್ದರಾಮಯ್ಯ ಅಧಿಕಾರ ವಹಿಸಿಕೊಂಡು ಮಜಾರಾಮಯ್ಯ ಆದ ಬಳಿಕ ರಾಜ್ಯದ ಜನರನ್ನು ಸಾಲಗಾರರನ್ನಾಗಿ ಮಾಡಿದ್ದಾರೆ. ಕರ್ನಾಟಕದ ಆರ್ಥಿಕ ಪರಿಸ್ಥಿತಿ ಐಸಿಯುನಲ್ಲಿದೆ,’ ಎಂದು ಅಶೋಕ್‌ ದೂರಿದರು.

ಇದನ್ನೂ ನೋಡಿ: ಐವತ್ತೈದು ವಯಸ್ಸು, ಯುವಕನ ಉತ್ಸಾಹ: ಒಂಟಿ ಕಣ್ಣಿನ ಕೃಷ್ಣಮೂರ್ತಿ ಸಾಧನೆಯ ಪಯಣ Janashakthi Media

Donate Janashakthi Media

Leave a Reply

Your email address will not be published. Required fields are marked *