ತುಮಕೂರು: ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೊಕಿನ ಹುಳಿಯಾರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿಚಾರಣೆಗಾಗಿ ಕರೆತರಲಾದ ವ್ಯಕ್ತಿಯೊಬ್ಬರು ದುರ್ಮರರ್ಣಕ್ಕೀಡಾದ ಘಟನೆ ಅತ್ಯಂತ ಆಘಾತಕಾರಿ ಹಾಗೂ ಖಂಡನೀಯವಾಗಿದೆ ಎಂದು ಭಾರತ ಕಮುಯನಿಸ್ಟ್ (ಮಾರ್ಕ್ಸ್ವಾದಿ) CPI(M) ತುಮಕೂರು ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸಿದೆ. ಪ್ರಕರಣ
ಪೋಲಿಸ್ ವಶದಲ್ಲಿದ್ದ ವ್ಯಕ್ತಿಯ ಸಾವು ಕಾನೂನು ವ್ಯವಸ್ಥೆಯ ಮೇಲಿನ ಜನರ ವಿಶ್ವಾಸಕ್ಕೆ ಗಂಭೀರ ಧಕ್ಕೆಯಾಗಿದೆ. ಗೃಹ ಸಚಿವರ ತವರು ಜಿಲ್ಲೆಯಲ್ಲಿ ಇಂತಹ ಘಟನೆ ಸಂಭವಿಸಿರುವುದು ಸರ್ಕಾರದ ಜವಾಬ್ದಾರಿತನವನ್ನು ಪ್ರಶ್ನಿಸುವಂತಾಗಿದೆ. ಎಂದು CPI(M) ಅಭಿಪ್ರಾಯಪಟ್ಟಿದೆ. ಪ್ರಕರಣ
ಇದನ್ನೂ ಓದಿ: 20ಕ್ಕೂ ಹೆಚ್ಚು ವರ್ಗಾವಣೆಗಳ ನಡುವೆಯೂ ಪ್ರಾಮಾಣಿಕತೆ ಉಳಿಸಿದ ಐಎಎಸ್ ಅಧಿಕಾರಿ
ಈ ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ತಕ್ಷಣವೇ ಸ್ವತಂತ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಘಟನೆಗೆ ಕಾರಣವಾದ ನಿಜಾಂಶಗಳನ್ನು ಬಹಿರಂºಗಪಡಿಸಿ, ತಪ್ಪಿಸ್ಥರು ಯಾರೇ ಆಗಿರಲಿ ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು CPI(M) ಒತ್ತಾಯಿಸುತ್ತದೆ.
ಸಂತ್ರಸ್ತರ ಕುಟುಂಬಕ್ಕೆ ನ್ಯಾಯ ಒದಗಿಸುವುದರೊಂದಿಗೆ ಸಾರ್ವಜನಿಕರಲ್ಲಿ ಕಾನೂನು ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಮರುಸ್ಥಾಪಿಸಲು ಸರ್ಕಾರ ತುರ್ತುಕ್ರಮ ಕೈಗೊಳ್ಳಬೇಕು ಎಂದು CPI(M) ಆಗ್ರಹಿಸಿದೆ.
ಪತ್ರಿಕಾ ಪ್ರಕಟಣೆಯಲ್ಲಿ ರಾಜ್ಯ ಕಾ.ದ.ಮಂಸದಸ್ಯ ಸೈಯದ್ ಮುಜೀಬ್, ಜಿಲ್ಲಾ ಕಾ.ದ.ಮಂ ಸದಸ್ಯ ಬಿ.ಉಮೇಶ್ ಹಾಗೂ ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ ಇದ್ದರು.
ಇದನ್ನೂ ನೋಡಿ: “ಯುಗಾದಿ: ಕಾವ್ಯದಲ್ಲಿ ಮೂಡುವ ಜೀವನದ ನಂಟು” Janashakthi Media
