ಭಾರತವನ್ನೂ ತಲುಪಿದ ಇಸ್ರೇಲ್‍ – ಯುಸ್‍ ನ ಇರಾನ್‍ ಯುದ್ಧ

ಇಸ್ರೇಲ್‍-ಯುಎಸ್ ಆರಂಭಿಸಿದ ಇರಾನ್‍ ಯುದ್ದದ ಬಿಸಿ, ಒಂದು ವಾರದ ಒಳಗೇ ಭಾರತವನ್ನೂ ತಲುಪಿದೆ. ಪೆಟ್ರೋಲ್-ಡೀಸೆಲ್  ಅಭಾವ ಮತ್ತು ಬೆಲೆ ಏರಿಕೆ ಯಾವಾಗ ಪ್ರಕಟವಾಗುತ್ತೋ ಎಂಬ  ಆತಂಕದಲ್ಲಿದ್ದ ಜನರಿಗೆ, ಬಹುಶಃ  ಅದರ ಮೊದಲ ಕಂತಾಗಿ ಮನೆಯಲ್ಲಿ ಬಳಸುವ ಅಡುಗೆ ಅನಿಲದ ಬೆಲೆಯಲ್ಲಿ 60ರೂ. ಮತ್ತು ವಾಣಿಜ್ಯ ಬಳಕೆಯ ಸಿಲಿಂಡರ್‍  ಬೆಲೆಯಲ್ಲಿ 114.50 ರೂ. ಏರಿಕೆ ತಕ್ಷಣದಿಂದಲೇ ಜಾರಿಗೆ ಬಂದಿದೆ.  ವಾಣಿಜ್ಯ ಸಿಲಿಂಡರ್ ಗಳ ಬೆಲೆ ಏರಿಕೆಯ ನಂತರ ಅದರ ಪೂರೈಕೆಗೂ ಅಡ್ಡಿಯಾಗಿದೆ, ಹೊಟೆಲುಗಳನ್ನು ಮುಚ್ಚಬೇಕಾಗಿ ಬರಬಹುದು ಎಂದೂ ಹೊಟೆಲ್‍ ಮಾಲಕರ ಸಂಘ ಹೇಳಿರುವುದಾಗಿ ವರದಿಯಾಗಿದೆ. ಇಸ್ರೇಲ್‍
ಎರಡನೆಯದಾಗಿ, ಭಾರತದ ನೌಕಾಪಡೆಯ ಆಹ್ವಾನದ ಮೇಲೆ ‘ಮಿಲನ್ ‍2026’ರಲ್ಲಿ ಭಾಗವಹಿಸಲು ಭಾರತಕ್ಕೆ ಬಂದಿದ್ದ  ಇರಾನಿನ ಹಡಗನ್ನು ನಮ್ಮ  ಹಿತ್ತಲಲ್ಲೇ  ಹಿಂದೂ ಮಹಾಸಾಗರದಲ್ಲಿ  ಯುಎಸ್ ಸಬ್‍ಮೆರಿನ್ ಟೊರ್ಪೆಡೋ ಹೊಡೆದು ಮುಳುಗಿಸಿದೆ. ಅದು  ಟ್ರಂಪ್‍ ಆಡಳಿತದ ಪ್ರಕಾರ “ಸದ್ದಿಲ್ಲದ ಸಾವು” ಕಂಡಿದೆ. ಇಸ್ರೇಲ್‍

ಖರೀದಿಗೆ “ಅನುಮತಿ” ಕೊಡಲು ಅವರು ಯಾರು?

ಈ ನಡುವೆ, ಯುಎಸ್ ಹಣಕಾಸು ಇಲಾಖೆ  ರಷ್ಯಾದಿಂದ ಈಗಾಗಲೇ ಹಡಗುಗಳಲ್ಲಿ ತುಂಬಿಸಿದ್ದ ತೈಲವನ್ನು  ಪಡೆಯಲು ಮಾರ್ಚ್‍ 5ರಿಂದ ಎಪ್ರಿಲ್‍ 4 ರವರೆಗೆ 30 ದಿನಗಳ “ಅನುಮತಿ”ಯನ್ನು ಭಾರತಕ್ಕೆ ನೀಡಲಾಗಿದೆ ಎಂದು ಪ್ರಕಟಿಸಿರುವುದು ದೊಡ್ಡ ಸುದ್ದಿಯಾಗಿದೆ. ಸಹಜವಾಗಿ ಏಳುವ ಪ್ರಶ್ನೆ -ಅನುಮತಿ ಕೊಡಲು ಅವರು ಯಾರು? ಆದರೆ, ಈಗ ಸಾಮಾನ್ಯವಾಗಿರುವಂತೆ, ಭಾರತ ಸರಕಾರ ತಕ್ಷಣವೇ ಹೀಗೇನೂ ಕೇಳಲಿಲ್ಲ, ಅಥವ ಹೇಳಲಿಲ್ಲ. ಅದಕ್ಕೆ ‘ಸೂಕ್ತ” ಪ್ರತಿಕ್ರಿಯೆ ನೀಡುವ ಕೆಲಸವನ್ನು ಈ ಬಾರಿಯೂ ಅದು ನಮ್ಮ ವ್ಯಂಗ್ಯಚಿತ್ರಕಾರರಿಗೇ ಬಿಟ್ಟಿರುವಂತೆ ಕಾಣುತ್ತದೆ. ಇಸ್ರೇಲ್‍

“ಅನುಮತಿ ಕೇವಲ 30 ದಿನಗಳಿಗೆ, 30 ಹಡಗುಗಳಿಗೆ, ಒಂದು ಸಮಯದಲ್ಲಿ 30 ಬ್ಯಾರಲ್‍ಗಳಿಗ ಮಾತ್ರ”

ಕೃಪೆ: ಸುಭಾನಿ, ಡೆಕ್ಕನ್‍ ಕ್ರಾನಿಕಲ್,

***

ತೈಲ ಕೊಡಿ, ಮಾರಾಯ್ರೆ..”      “ ನಾನೀಗ ಬಿಜಿಯಾಗಿದ್ದೇನೆ”

              “ರಷ್ಯಾದಿಂದ ತಗೊಳ್ಳಿ..”       “ಕೇಳಿ, ಬರೀ 30 ದಿನಗಳ ಪರ್ಮಿಷನ್ ಕೊಡುತ್ತಿದ್ದೇನೆ..”

ಕೃಪೆ: ರಾಕೇಶ್ ರಂಜನ್, ಮೊಲಿಟಿಕ್ಸ್.ಇನ್

***

ಮಾರ್ಚ್ 6ರಂದು ಒಂದು ಸಂದರ್ಶನದಲ್ಲಿ ಅಮೆರಿಕದ ಖಜಾನೆ(ಹಣಕಾಸು) ಕಾರ್ಯದರ್ಶಿ ಸ್ಕಾಟ್ ಬೆಸ್ಸೆಂಟ್ “ಜಗತ್ತಿನಲ್ಲಿ ತೈಲದ ಸರಬರಾಜು ಚೆನ್ನಾಗಿದೆ. ನಿನ್ನೆ, ಭಾರತದಲ್ಲಿನ ನಮ್ಮ ಮಿತ್ರರು ಈಗಾಗಲೇ ನೀರಿನ ಮೇಲಿರುವ ರಷ್ಯಾದ ತೈಲವನ್ನು ಖರೀದಿಸಲು ಪ್ರಾರಂಭಿಸಲು ಖಜಾನೆ (ಇಲಾಖೆ)ಒಪ್ಪಿಕೊಂಡಿತು [ಒತ್ತು ಸೇರಿಸಲಾಗಿದೆ] ಎಂದರು. ಇಸ್ರೇಲ್‍

“ಭಾರತೀಯರು ಬಹಳ ಉತ್ತಮ ನಟರಾಗಿದ್ದರು. ಈ ಶರತ್ಕಾಲದಲ್ಲಿ ನಿರ್ಬಂಧಿತ ರಷ್ಯಾದ ತೈಲವನ್ನು ಖರೀದಿಸುವುದನ್ನು ನಿಲ್ಲಿಸುವಂತೆ ನಾವು ಅವರನ್ನು ಕೇಳಿದ್ದೆವು. ಅವರು ಹಾಗೆ ಮಾಡಿದರು. ಅವರು ಅದರ ಬದಲಿಗೆ ಯುಎಸ್ ನಿಂದ  ಖರೀದಿಸಲಿದ್ದರು. ಆದರೆ ಪ್ರಪಂಚದಾದ್ಯಂತ ತೈಲದ ತಾತ್ಕಾಲಿಕ ಅಂತರವನ್ನು ಕಡಿಮೆ ಮಾಡಲು, ನಾವು ಅವರಿಗೆ ರಷ್ಯಾದ ತೈಲವನ್ನು ಸ್ವೀಕರಿಸಲು ಅನುಮತಿ ನೀಡಿದ್ದೇವೆ.” [ಒತ್ತು ಸೇರಿಸಲಾಗಿದೆ] ಎಂದು ಮುಂದುವರೆದು ಅವರು ಹೇಳಿದರು ಎಂದು ವರದಿಯಾಗಿದೆ! ಇಸ್ರೇಲ್‍

ಇದನ್ನೂ ಓದಿ: ಸಾಮ್ರಾಜ್ಯಶಾಹಿ ಪ್ರೇರಿತ ಯುದ್ದ ವಿರೋಧಿಸಿ ವಿಶ್ವಶಾಂತಿಗಾಗಿ ಸಿಐಟಿಯು ನೇತೃತ್ವದಲ್ಲಿ ಕಾರ್ಮಿಕರ ಪ್ರತಿಭಟನೆ

ಅದೇ ದಿನ ಯುಎಸ್‍ನ ಇಂಧನ ಕಾರ್ಯದರ್ಶಿ ಕ್ರಿಸ್ ರೈಟ್ ಕೂಡ “ತೈಲ ಬೆಲೆಗಳನ್ನು ಕಡಿಮೆ ಮಾಡಲು ನಾವು ಅಲ್ಪಾವಧಿಯ ಕ್ರಮಗಳನ್ನು ಜಾರಿಗೆ ತಂದಿದ್ದೇವೆ. ಭಾರತದಲ್ಲಿರುವ ನಮ್ಮ ಸ್ನೇಹಿತರು ಈಗಾಗಲೇ ಹಡಗುಗಳಲ್ಲಿರುವ ತೈಲವನ್ನು ತೆಗೆದುಕೊಂಡು, ಅದನ್ನು ಸಂಸ್ಕರಿಸಿ, ಆ ಬ್ಯಾರೆಲ್‌ಗಳನ್ನು ತ್ವರಿತವಾಗಿ ಮಾರುಕಟ್ಟೆಗೆ ಸಾಗಿಸಲು ನಾವು ಅವಕಾಶ ನೀಡುತ್ತಿದ್ದೇವೆಎಂದು ಹೇಳಿದರಂತೆ.

***

ನಿರೀಕ್ಷಿಸಿದಂತೆ, ಒಂದು ಸಾರ್ವಭೌಮ ದೇಶಕ್ಕೆ ಎಲ್ಲಿಂದ ಏನನ್ನು ಖರೀದಿಸಬೇಕು ಎಂದು ಅನುಮತಿ ನೀಡಲು ಇವರ್ಯಾರು ಎಂಬ ಆಕ್ರೋಶ ವ್ಯಕ್ತವಾಯಿತು. ಆದರೆ ಕಳೆದ ಹತ್ತು ವರ್ಷಗಳಿಂದ ನಮ್ಮ ಆಳರಸರನ್ನು ನೋಡುತ್ತಿರುವ ನಮ್ಮ ವ್ಯಂಗ್ಯಚಿತ್ರಕಾರರು ಆ ಆಕ್ರೋಶವನ್ನು ಶಮನ ಮಾಡಲು ತಮ್ಮ ‘ಕೈಲಾದುದೆಲ್ಲವನ್ನೂ’ ಮಾಡುತ್ತಿದ್ದಾರೆ. ಒಂದೆರಡು ಸ್ಯಾಂಪಲ್‍ ಇಲ್ಲಿವೆ:

 

ಹಳೆಯ “ನಮಸ್ತೆ ಟ್ರಂಪ್’ ಪೋಸ್ಟರಿನಲ್ಲಿ “ನಮಸ್ತೆ” ಜಾಗದಲ್ಲಿ “ಥ್ಯಾಂಕ್ಯು’ ಎಂದು ಬರೆಸಿ” ಎಂಬುದು ಇಂತಹ ಒಂದು ಸಲಹೆ!

         ಕೃಪೆ: ಕೀರ್ತಿಶ್, ಬಿಬಿಸಿ ಹಿಂದಿ

***

ಈ ವ್ಯಂಗ್ಯಚಿತ್ರಕಾರರು ಇದನ್ನೇ ಬೇರೆ ರೀತಿಯಲ್ಲಿ ಹೇಗೆ ಹೇಳುತ್ತಾರೆ ನೋಡಿ:

“ಮೇಡ್ ಇನ್‍ ಯುಎಸ್‍ಎ” ( ಯುಎಸ್‍ನಲ್ಲಿ ಮಾಡಿದ್ದು) ಬದಲು “ಅಲೌಡ್‍ ಬೈ ಯುಎಸ್‍ಎ“( ಯುಎಸ್‍ಎ ಅನುಮತಿಸಿದ್ದು) ಎಂಬ ಆಯ್ಕೆಯನ್ನು ಟ್ರಂಪ್ ಕೊಟ್ಟಿದ್ದಾರೆ.

ಈ ರೀತಿ ಆಯ್ಕೆ ಕೊಟ್ಟಿರುವುದು ಕೆಟ್ಟ ಸಂಗತಿಯೇನು ಎಂದು ಅವರು  ಕೇಳುತ್ತಾರೆ.

ಕೃಪೆ: ಇ.ಪಿ.ಉನ್ನಿ, ಇಂಡಿಯನ್‍ ಎಕ್ಸ್ ಪ್ರೆಸ್

***

ಆದರೆ, ಎರಡು ದಿನಗಳ ನಂತರ,  “ರಷ್ಯನ್‍ ತೈಲ ಖರೀದಿಸಲು ಭಾರತಕ್ಕೆ ಯಾರ ಅನುಮತಿಯೂ ಬೇಕಿಲ್ಲ  ಎಂದು ಅಧಿಕಾರಿಗಳು ಹೇಳುತ್ತಾರೆ” ಎಂದು ಸರಕಾರದ ಮೂಲಗಳಿಂದ  ತಿಳಿದು ಬಂದಿದೆ” ಎಂದು ಮಾಧ್ಯಮಗಳು ವರದಿ ಮಾಡಿವೆ. ಭಾರತದ ಇಂಧನ ಖರೀದಿ  ಧೋರಣೆ ‘ರಾಷ್ಟ್ರೀಯ ಹಿತಾಸಕ್ತಿ’ಯನ್ನು ಆಧರಿಸಿದೆ ಎಂದು ಈ ಮೂಲಗಳು ಹೇಳಿವೆಯಂತೆ.

ಇಲ್ಲಿ ಇನ್ನೊಂದು ‘ಆದರೆ’ ಯೂ ಇದೆ. 30 ದಿನಗಳ ವಿನಾಯ್ತಿಯ ಯುಎಸ್‍ನ ಹಣಕಾಸು ಇಲಾಖೆಯ ಅಧಿಕೃತ ಪ್ರಕಟಣೆಗೆ ಭಾರತ ಸರಕಾರ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ, ಇದನ್ನು ಒಪ್ಪಿಕೊಂಡಿಲ್ಲ, ಅಥವ ತಿರಸ್ಕರಿಸಿಯೂ ಇಲ್ಲ ಎಂದೂ ಕೆಲವು ಮಾಧ್ಯಮಗಳು ಗಮನಿಸಿವೆ. ಬಹಳಷ್ಟು ಮಂದಿ ಈ “ಮೂಲ”ಗಳನ್ನು ಅಷ್ಟಾಗಿ ನಂಬಿರುವಂತೆ ಕಾಣುತ್ತಿಲ್ಲ.

ಹೆಚ್ಚೆಂದರೆ, ಈ ವ್ಯಂಗ್ಯಚಿತ್ರಕಾರರು ಸೂಚಿಸುವಂತೆ, ಬಹುಶ: ಟ್ರಂಪ್‍ ಆದೇಶಗಳನ್ನು ಮೋದಿ ಸರಕಾರ ಪಾಲಿಸುತ್ತ ಬಂದಿದೆ, ಆದ್ದರಿಂದ “ನಾನು ನಿಮಗೆ 30 ದಿನ ರಷ್ಯನ್‍ ತೈಲ ಖರೀದಿಸಲು ಬಿಡುತ್ತೇನೆ” ಎಂಬ ಇಂತಹ ಟ್ರಂಪ್  ಭಂಡತನ  ಎಂದು  ಪ್ರತಿಪಕ್ಷಗಳು ಹೇಳಿದರೆ, ಬಿಜೆಪಿ ಈ ಒಟ್ಟು ಸುದ್ದಿಯನ್ನು, ಟ್ರಂಪ್ ವಿನೀತರಾಗಿ “ಅಡಚಣೆಗಾಗಿ ಕ್ಷಮಿಸಿ, 30ದಿನ ದಯವಿಟ್ಟು ರಷ್ಯನ್‍ ತೈಲ ಖರೀದಿಸಿ” ಎಂದು ಹೇಳಿರುವುದಾಗಿ ವ್ಯಾಖ್ಯಾನಿಸಬಹುದು, ಅಷ್ಟೇ.

ಕೃಪೆ: ಪೊನ್ನಪ್ಪ, ದಿ ಫೆಡರಲ್‍.ಕಾಂ

***

 ಟ್ರಂಪ್‍ ಆಡಳಿತದ ಅಧಿಕಾರಿಗಳ (ಮೇಲೆ ಉಲ್ಲೇಖಿಸಿದ) ಮಾತುಗಳು ಅವರ, ಅಂದರೆ ಯುಎಸ್‍ನ  ಜನಗಳಿಗಾಗಿ ಹೇಳಿದ ಮಾತುಗಳು ಎಂದೂ  “ಸರಕಾರದ ಮೂಲಗಳು” ಹೇಳಿರುವುದಾಗಿಯೂ ವರದಿಯಾಗಿದೆ.  ಆದರೆ ಇಂತಹ ಅಧಿಕೃತ  ‘ಟಿಪ್ಪಣಿ’ಯಂತೂ ಇದುವರೆಗೆ ಬಂದಿಲ್ಲ. ನಿಜ, ಈ ಕೆಳಗಿನ ‘ಟಿಪ್ಪಣಿ’ಯನ್ನು ಕೂಡ ವ್ಯಂಗ್ಯಚಿತ್ರಕಾರಷ್ಟೇ ನಿರೀಕ್ಷಿಸಬಹುದು!

“ನಮ್ಮ ಸಿದ್ಧಾಂತ ಸ್ಪಷ್ಟ- ದುರ್ಬಲರ ಮುಂದೆ 56 ಅಂಗುಲ ಮತ್ತು ಬಲಿಷ್ಟರ ಮುಂದೆ….

56 ಮಿಲಿಮೀಟರ್?”      “ಅಲ್ಲ, ಸ್ವಲ್ಪ ಕಡಿಮೆ!”

ಕೃಪೆ: ರಾಜೇಂದ್ರ ದೋಢಪ್‍ಕರ್ @ ಫೇಸ್‍ಬುಕ್

***

ಹಿಂದೂ ಮಹಾಸಾಗರದಲ್ಲಿ  “ಸದ್ದಿಲ್ಲದ ಸಾವು”

ಆರಂಭದಲ್ಲಿ ಹೇಳಿದಂತೆ, ಮಾರ್ಚ್‍ 4ರಂದು ಇರಾನಿನ ಯುದ್ಧಹಡಗಿಗೆ ಭಾರತ ಮತ್ತು ಶ್ರೀಲಂಕಾದ ಬಳಿ ಹಿಂದೂ ಮಹಾಸಾಗರದಲ್ಲಿ ಯುಎಸ್‍ ಸಬ್‍ಮೆರಿನ್ ದಾಳಿ ನಡೆಸಿ ಮುಳುಗಿಸಿರುವುದು ಟ್ರಂಪ್‍-ನೆತನ್ಯಾಹುಗಳ ಇರಾನ್‍ ಯುದ್ಧದ ಇನ್ನೊಂದು ಪ್ರಮುಖ ಸುದ್ದಿ.

ವಿಶೇಷವೆಂದರೆ, ಈ ಹಡಗು , ಭಾರತದ ಆಹ್ವಾನದ ಮೇಲೆ, ಇತರ ಎರಡು ತರಬೇತಿ ಹಡಗುಗಳೊಂದಿಗೆ ವಿಶಾಖಪಟ್ಟಣದಲ್ಲಿ ನೌಕಾ ಕವಾಯತಿನಲ್ಲಿ ಭಾಗವಹಿಸಲು ಬಂದಿದ್ದದ್ದು, ಕವಾಯತಿನ ನಂತರ ಹಿಂತಿರುಗುತ್ತಿತ್ತು. ಆದರೂ ಭಾರತದಿಂದ ಈ ಬಗ್ಗೆ ಖಂಡನೆಯ ಮಾತಿರಲಿ, ಸಂತಾಪದ ಮಾತೂ ಬರಲಿಲ್ಲ, ಯಥಾಪ್ರಕಾರ….

“ಅತಿಥಿ ದೇವೋಭವ”

ಕೃಪೆ: ಸತೀಶ ಆಚಾರ್ಯ @ ಫೇಸ್‍ಬುಕ್

***

ಯುಎಸ್‍ ದಾಳಿಗೆ ಬಲಿಯಾದ ಈ ಹಡಗಿನಿಂದ ಶ್ರೀಲಂಕಾದ ನೌಕಾಪಡೆ  32 ಇರಾನೀ ನಾವಿಕರ ಜೀವ ಉಳಿಸಿದೆ,  ಮತ್ತು 83 ದೇಹಗಳನ್ನು ಹೊರ ತೆಗೆದಿದೆ. ಇನ್ನೂ ಹಲವು ನಾವಿಕರು ಪತ್ತೆಯಾಗಿಲ್ಲ.ಯುಎಸ್‍ ನ ಯುದ್ಧ ಕಾರ್ಯದರ್ಶಿ ಅದನ್ನು ಮುಳುಗಿಸಿದ್ದು, “ಸದ್ದಿಲ್ಲದೆ ಸಾವು” ಉಂಟುಮಾಡಿದ್ದು ತಮ್ಮ ದೇಶವೇ  ಎಂದು ಹೆಮ್ಮೆಯಿಂದ ಹೇಳಿಕೊಂಡರೂ ಶ್ರೀಲಂಕಾ ಈ ಬಗ್ಗೆ ಟಿಪ್ಪಣಿ ಮಾಡದೆ ವೈಷಮ್ಯಗಳು ಈ ರೀತಿ ವಿಸ್ತರಿಸಿರುವುದಕ್ಕೆ ಆಳವಾದ ದು:ಖ ವ್ಯಕ್ತಪಡಿಸುತ್ತ , ಸಂಬಂಧಪಟ್ಟ ಎಲ್ಲರೂ ಸಂಯಮದಿಂದ ವರ್ತಿಸಬೇಕು, ಉದ್ವಿಗ್ನತೆಗಳು ಹರಡದಂತೆ ನಿರ್ಣಾಯಕ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿತು.

ಆದರೆ ಭಾರತದ ನೌಕಾಪಡೆ ಹಿಂದೂ ಮಹಾಸಾಗರದ ರಕ್ಷಕ (ಗಾರ್ಡಿಯನ್) ಎಂದು ಕೆಲವೇ ತಿಂಗಳ ಹಿಂದಷ್ಟೇ ನಮ್ಮ ಘೋಷಿಸಿದ್ದ ಪ್ರಧಾನ ಮಂತ್ರಿಗಳ ನೇತೃತ್ವದ ಸರಕಾರದಿಂದ   ಇಂತಹ ಪ್ರತಿಕ್ರಿಯೆಯೂ ಬರಲಿಲ್ಲ.  ಈ  ಘಟನೆ ನಡೆದ ಸ್ಥಳ ಭಾರತದ ಜಲಪ್ರದೇಶದಿಂದ ಬಹಳ ದೂರವೇನೂ  ಇಲ್ಲ. ಅದಕ್ಕಿಂತಲೂ ಹೆಚ್ಚಾಗಿ, ಈ ಜಲಪ್ರದೇಶದಲ್ಲಿ ಭಾರತದ ನೇತೃತ್ವಕ್ಕಾಗಿ ‘ಸಾಗರ’ ಮತ್ತು ‘ಮಹಾಸಾಗರ’ ಯೋಜನೆಗಳನ್ನು ರೂಪಿಸಿರುವಾಗ, ಹಿಂದೂ ಮಹಾಸಾಗರದಲ್ಲಿ ಯುಎಸ್‍ ಸಬ್‍ಮೆರಿನ್‍ ಒಂದು ಬೇಟೆಗೆ ಕಾದಿತ್ತು ಎಂಬುದು ಭಾರತದ ನೌಕಾಪಡೆಯ ಗಮನಕ್ಕೆ ಬಾರದೆ ಹೇಗೆ ಹೋಯಿತು ಎಂದು ಸಾಮರಿಕ ತಜ್ಞರು, ನಮ್ಮ ನೌಕಾ ಪಡೆಯ ಸಾಮರ್ಥ್ಯವನ್ನು ಪ್ರಶ್ನಿಸುವಂತಾಗಿದೆ. ಭಾರತ ತನ್ನ ಆಯಕಟ್ಟಿನ ಪಾಲುದಾರ ಎನ್ನುವ ಯುಎಸ್ ಈ ಬಗ್ಗೆ ಟೊರ್ಪೆಡೋ ಪ್ರಹಾರದ ಮೊದಲಾಗಲೀ, ನಂತರವಾಗಲೀ ಸೂಚನೆ ನೀಡಿತ್ತೇ, ನೀಡಿರದಿದ್ದರೆ ಏಕೆ ಎಂದೂ ಕೆಲವರು ಪ್ರಶ್ನಿಸಿದ್ದಾರೆ. ಅಂತರರಾಷ್ಟ್ರೀಯ ಜಲಪ್ರದೇಶದಲ್ಲಿ ಯಾವುದೇ ಯುದ್ಧದಲ್ಲಿ ಭಾಗಿಯಾಗದ ಹಡಗಿನ ಮೇಲೆ ದಾಳಿ ಮಾಡಿ 87 ಕ್ಕೂ ಹೆಚ್ಚು ನಾವಿಕರನ್ನು ಸಾಯಿಸುವುದು ಅಂತರರಾಷ್ಟ್ರೀಯ ಅಪರಾಧ. ಇದು ವಿಶ್ವಸಂಸ್ಥೆಯ ಚಾರ್ಟರ್ ಮತ್ತು ಸಮುದ್ರ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದೂ ಪರಿಣಿತರು ಹೇಳುತ್ತಾರೆ.

“ಇರಾನಿನ ತಟದಿಂದ 2000 ಮೈಲಿಗಳಾಚೆ ಯುಎಸ್ ಒಂದು ಅತ್ಯಾಚಾರ ಎಸಗಿದೆ. ಭಾರತೀಯ ನೌಕಾಪಡೆಯ ಅತಿಥಿಯಾಗಿದ್ದ, ಸುಮಾರು 130 ನಾವಿಕರನ್ನು ಒಯ್ಯುತ್ತಿದ್ದ  ಯುದ್ಧಹಡಗು ದೇನ ದ ಮೇಲೆ ಅಂತರ್ರಾಷ್ಟ್ರೀಯ ಜಲಪ್ರದೇಶದಲ್ಲಿ ಮುನ್ನೆಚ್ಚರಿಕೆ ನೀಡದೆ ಪ್ರಹಾರ ನಡೆಸಲಾಗಿದೆ. ನನ್ನ ಈ ಮಾತನ್ನು ನೆನಪಿನಲ್ಲಿಡಿ:ತನ್ನ  ನಡವಳಿಕೆಗೆ ಯುಎಸ್‍ ಬಹಳವಾಗಿ ಖೇದ ಪಡಬೇಕಾಗಿ ಬರುತ್ತದೆ” ಎಂಬ ಇರಾನಿನ ವಿದೇಶ ಮಂತ್ರಿಗಳ ಟಿಪ್ಪಣಿ ಈ ಘಟನೆಯ ಆಳವನ್ನು ತೋರಿಸುತ್ತದೆ. ಇಂತಹ ಸಂದರ್ಭದಲ್ಲಿ ಆತಿಥೇಯ ಭಾರತದಿಂದ ಖಂಡನೆ ಸಾಧ್ಯವಾಗದಿದ್ದರೂ, ಸಂತಾಪವನ್ನಂತೂ  ನಿರೀಕ್ಷಿಸಲಾಗಿತ್ತು.

ಏನೇ ಇರಲಿ, ಇದು ಭಾರತಕ್ಕೆ ಒಂದು “ಸಾಮರಿಕ ಮುಜುಗರ”ದ ವಿಷಯ,  “ಸಾಗರ ಯುದ್ಧವನ್ನು ನಮ್ಮ ಮನೆ ಬಾಗಿಲಿಗೆ ತಂದದ್ದಕ್ಕೆ  ನಮ್ಮ ಆಳವಾದ ಆತಂಕ ಮತ್ತು ಅಸಂತೋಷವನ್ನಾದರೂ ವ್ಯಕ್ತಪಡಿಸಬೇಕಾಗಿತ್ತು” ಎಂದು ಈ ಹಿಂದೆ ನೌಕಾಪಡೆಯ ಮುಖ್ಯಸ್ಥರಾಗಿದ್ದವರು ಸೇರಿದಂತೆ ನಿವೃತ್ತ ಸೇನಾಧಿಕಾರಿಗಳು, ರಾಜತಾಂತ್ರಿಕರು ಅಸಮಾಧಾನ ವ್ಯಕ್ತಪಡಿಸಿರುವುದಾಗಿ ವರದಿಯಾಗಿದೆ.

“ಸಬ್‍ಮೆರಿನ್‍ ಗಳನ್ನು ಪತ್ತೆ ಮಾಡುವ ಸೀಮಿತ ಹರವಿನೊಂದಿಗೆ”

ಕೃಪೆ: ಸಜಿತ್‍ ಕುಮಾರ್, ಡೆಕ್ಕನ್‍ ಹೆರಾಲ್ಡ್

***

ಈ ಘಟನೆಯ ನಂತರ ಶ್ರೀಲಂಕಾ ಮತ್ತೊಂದು ಇರಾನೀ ಹಡಗಿನ ಎಲ್ಲ ಸಿಬ್ಬಂದಿಯನ್ನು ರಕ್ಷಿಸಿ ಅದಕ್ಕೆ ತನ್ನ ಒಂದು ಬಂದರಿನಲ್ಲಿ  ತಂಗಲು ಮಾನವೀಯ ದೃಷ್ಟಿಯಿಂದ  ಅನುಮತಿ ಕೊಟ್ಟಿರುವುದಾಗಿ ತಿಳಿಸಿತು.

ನಂತರ ಭಾರತವೂ ಮತ್ತೊಂದು ಇರಾನೀ ಹಡಗಿಗೆ ಅದರ ಕೋರಿಕೆಯ ಮೇರೆಗೆ ಕೊಚ್ಚಿಯಲ್ಲಿ ತಂಗಲು ಅನುಮತಿ ಕೊಟ್ಟಿರುವುದಾಗಿ ಪ್ರಕಟಿಸಿತು.

ಇದನ್ನೂ ನೋಡಿ: ದೇಹ ರಾಜಕಾರಣ ಮತ್ತು ಲೈಂಗಿಕ ದೌರ್ಜನ್ಯ – ಡಾ. ವಿನಯಾ ಒಕ್ಕುಂದ Janashakthi Media

ಅದರೆ, ಸ್ವತಃ ನಮ್ಮ ವಿದೇಶಾಂಗ ಮಂತ್ರಿಗಳೇ   ಮಾರ್ಚ್‍ 9ರಂದು ಸಂಸತ್ತಿಗೆ ತಿಳಿಸಿದ ಪ್ರಕಾರ ಇರಾನ್ ಫೆಬ್ರುವರಿ 28 ರಂದೇ, ಅಂದರೆ ಯುಎಸ್‍-ಇಸ್ರೇಲ್‍ ದಾಳಿಯ ಮೊದಲ ದಿನವೇ ತನ್ನ  ಮೂರೂ ಹಡಗುಗಳಿಗೆ, ಅಂದರೆ ಮುಂದೆ ಕೊಚ್ಚಿಯಲ್ಲಿ ಲಂಗರು ಹಾಕಿದ ‘ಲವಣ್’ , ಮುಂದೆ ಶ್ರೀಲಂಕಾದಲ್ಲಿ ಲಂಗರು ಹಾಕಿದ “ಬುಶೆಹರ್” ಮತ್ತು ಯುಎಸ್‍ ಮುಳುಗಿಸಿರುವ ‘ದೆನಾ’  ಹಡಗಿಗೆ ಭಾರತದಲ್ಲಿ  ತಂಗಲು ಅನುಮತಿ ಕೇಳಿತ್ತು. ಇಸ್ರೇಲ್‍

ಮರುದಿನವೇ ಭಾರತ ಅನುಮತಿ ನೀಡಿತ್ತು. ಆದರೆ ಈ ಹೇಳಿಕೆಯಲ್ಲಿಯೂ ಅವರು ಯುಎಸ್‍ ಸಬ್‍ಮೆರಿನ್ ದೆನಾ ಹಡಗನ್ನು ಮುಳುಗಿಸಿದ ಬಗ್ಗೆ  ಏನೂ ಹೇಳಲಿಲ್ಲ. ಅಷ್ಟೇ ಅಲ್ಲ,  ಇರಾನಿನ ಅತ್ಯುನ್ನತ ಮುಖಂಡನೆನಿಸಿದ್ದ ಅಯತೊಲ್ಲ ಅಲಿ ಖಾಮೆನೆಯ್‍ ಯುಎಸ್‍-ಇಸ್ರೆಲ್ ದಾಳಿಯಲ್ಲಿ ಹತರಾಗಿರುವ ಬಗ್ಗೆಯೂ  ನೇರ ಉಲ್ಲೇಖ  ಇಲ್ಲ ಎಂದೂ ವರದಿಯಾಗಿದೆ. (ದಿ ವೈರ್, ಮಾರ್ಚ್‍ 9)

***

ಈ ಮೊದಲು, ಮಾರ್ಚ್‍ 5ರಂದು  ಭಾರತದ ವಿದೇಶಾಂಗ ಕಾರ್ಯದರ್ಶಿಗಳು ದಿಲ್ಲಿಯಲ್ಲಿ ಇರಾನೀ ರಾಯಭಾರಿ ಕಚೇರಿಗೆ ಭೇಟಿ ನೀಡಿ ಕೊನೆಗೂ ಅಯತೊಲ್ಲ ಖಾಮೆನೆಯ್‍ ರವರ ಸಾವಿಗೆ ಸಂತಾಪದ ಪುಸ್ತಕಕ್ಕೆ ಸಹಿ ಹಾಕಿ ಬಂದಿದ್ದಾರೆ ಎಂದು ವರದಿಯಾಗಿತ್ತು.  ಮಿತ್ರದೇಶಗಳ ನಡುವಿನ ಈ ವಿಧಿಯನ್ನು ಪೂರೈಸಲು ಕೂಡ ಭಾರತ ಸರಕಾರಕ್ಕೆ ನಾಲ್ಕು ದಿನಗಳು ಬೇಕಾದವು ಎನ್ನುತ್ತಾರೆ ರಾಜಕೀಯ ವೀಕ್ಷಕರು. ಇಸ್ರೇಲ್‍

ಆದರೆ ಹತ್ತು ವರ್ಷಗಳ ಹಿಂದೆ ನಮ್ಮ ಪ್ರಧಾನ ಮಂತ್ರಿಗಳೇ “ಭಾರತ-ಇರಾನ್ ದೋಸ್ತಿ ಚರಿತ್ರೆಯಷ್ಟೇ ಹಳೆಯದು” ಎಂದು ಬಾಯಿತುಂಬಾ ಹೊಗಳಿದ್ದರು ಎಂಬುದನ್ನು ಇರಾನ್‍ ಮೇಲೆ ಯುಎಸ್-ಇಸ್ರೇಲ್‍ ದಾಳಿಯ ಪ್ರಸ್ತುತ ದಿವ್ಯ ಮೌನದ ಸಂದರ್ಭದಲ್ಲಿ ಹಲವರು ನೆನಪಿಸಿಕೊಳ್ಳುವಂತಾಗಿದೆ.

ಕೃಪೆ: ಸತೀಶ ಆಚಾರ್ಯ, ಸೌತ್‍ ಫಸ್ಟ್

***

ಮತ್ತು ಈ ದಾಳಿಯ ಮೂರು ದಿನಗಳ ಹಿಂದೆಯಷ್ಟೇ, ಇಸ್ರೇಲಿಗೆ ಭೇಟಿ ನೀಡಿದ್ದು, ಅಲ್ಲಿನ ಪಾರ್ಲಿಮೆಂಟಿನಲ್ಲಿ ಇಸ್ರೇಲ್‍ ಫಾದರ್ ಲ್ಯಾಂಡ್ (ಪಿತೃಭೂಮಿ), ಭಾರತ ಮದರ್‍ ಲ್ಯಾಂಡ್‍(ಮಾತೃಭೂಮಿ) ಎಂದೆಲ್ಲ  ಹೇಳಿರುವುದನ್ನೂ ಪ್ರಸ್ತುತ ಯುದ್ಧದ ಸಂದರ್ಭದಲ್ಲಿ ನೆನಪಿಸಿಕೊಳ್ಳಲಾಗುತ್ತಿದೆ. ಇಸ್ರೇಲ್‍

ಕೃಪೆ: ಪಿ.ಮಹಮ್ಮದ್ @ ಫೇಸ್‍ಬುಕ್

***

ಈ ನಡುವೆ, ಅಡುಗೆ ಅನಿಲದ ಬೆಲೆಯಲ್ಲಿ 60ರೂ. ಏರಿಕೆಯಾಗಿದೆ. ಮತ್ತು ವಾಣಿಜ್ಯ ಸಿಲಿಂಡರ್ ‍ಬೆಲೆಯಲ್ಲಿ ರೂ. 114.50  ಏರಿಕೆಯಾಗಿದೆ. ಇವೆರಡರ ಹೊರೆಯನ್ನೂ ಹೊರಬೇಕಾದವರು ಮಧ್ಯಮ ವರ್ಗದವರು ಮತ್ತು ದುಡಿಯುವ ಜನವಿಭಾಗಗಳು ಎಂದು ಬೇರೆ ಹೇಳಬೇಕಾಗಿಲ್ಲ.ಮತ್ತು  ಇದು ಟ್ರಂಪ್‍-ನೆತನ್ಯಾಹುಗಳ ಇರಾನ್‍ ಯುದ್ಧದ ಪ್ರತಿಫಲ ಎಂಬುದನ್ನು ಕೂಡ ಯಾರೂ ನಿರಾಕರಿಸಲಾರರು- ಫೆಬ್ರುವರಿ 28ರಿಂದ “ದೇವರ ದಯೆ, ನಾವು ಸೇಫ್” ಎಂದು  ಗೋದಿಮೀಡಿಯಾದಲ್ಲಿ ಟ್ರಂಪ್‍-ನೆತನ್ಯಾಹು ಪ್ರತಾಪಗಳನ್ನು ಆನಂದಿಸುತ್ತಿದ್ದವರು ಕೂಡ.

ಕೃಪೆ: ಮಂಜುಲ್ @ ಫೇಸ್‍ಬುಕ್

Donate Janashakthi Media

Leave a Reply

Your email address will not be published. Required fields are marked *