ಚೆನ್ನೈ: ಕಳೆದ ವರ್ಷ ನಡೆದ ಕರೂರ್ ಕಾಲ್ತುಳಿತ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ನಟ ಮತ್ತು ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಅಧ್ಯಕ್ಷ ವಿಜಯ್ ಗೆ ಸಿಬಿಐ (CBI) ಮತ್ತೆ ಸಮನ್ಸ್ ನೀಡಿದ್ದೂ, ಮಾರ್ಚ್ 10ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾಲ್ತುಳಿತ
ಇದನ್ನೂ ಓದಿ: ಪಿರಿಯಾಪಟ್ಟಣ| ರಾಗಿ ಖರೀದಿ ಕೇಂದ್ರದ ಅವ್ಯವಸ್ಥೆ ಖಂಡಿಸಿ ರೈತರು ಪ್ರತಿಭಟನೆ
2025ರ ಸೆಪ್ಟೆಂಬರ್ 27ರಂದು ವಿಜಯ್ ಅವರ ಪಕ್ಷದ ರ್ಯಾಲಿ ವೇಳೆ ನಡೆದ ಭೀಕರ ತುಳಿತದಲ್ಲಿ ಸುಮಾರು 41 ಜನರು ಸಾವನ್ನಪ್ಪಿದ್ದರು.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯ್ ಅವರು ಈಗಾಗಲೇ ಜನವರಿ 12 ಮತ್ತು ಜನವರಿ 19 ರಂದು ಸಿಬಿಐ ಕೇಂದ್ರ ಕಚೇರಿಗೆ ಭೇಟಿ ನೀಡಿ ವಿಚಾರಣೆ ಎದುರಿಸಿದ್ದರು. ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಮಂಗಳವಾರ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತೆ ಸಮನ್ಸ್ ಏಕೆ?:
ಈಗಾಗಲೇ ಎರಡು ಬಾರಿ ವಿಚಾರಣೆ ಎದುರಿಸಿರುವ ನಟ ವಿಜಯ್ ಅವರಿಗೆ, ತನಿಖೆಯ ವೇಳೆ ಲಭ್ಯವಾಗಿರುವ ಹೊಸ ಸಾಕ್ಷ್ಯಗಳ ಆಧಾರದ ಮೇಲೆ ಮತ್ತಷ್ಟು ಪ್ರಶ್ನೆಗಳನ್ನು ಎದುರಿಸಲು ಈ ನೋಟಿಸ್ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. 41 ಜನರ ಜೀವ ಬಲಿಪಡೆದ ಈ ದುರಂತದ ಹೊಣೆಗಾರಿಕೆ ಮತ್ತು ಸುರಕ್ಷತಾ ಲೋಪಗಳ ಕುರಿತು ಸಿಬಿಐ ಆಳವಾದ ತನಿಖೆ ನಡೆಸುತ್ತಿದ್ದು, ನಟನ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಈ ವಿಚಾರಣೆ ಅತ್ಯಂತ ಕುತೂಹಲ ಕೆರಳಿಸಿದೆ.
ಇದನ್ನೂ ನೋಡಿ: ಭೂ ಹಕ್ಕಿನ ಹೋರಾಟದ ಧ್ವನಿ | ಮರಕುಂಬಿ ಹೋರಾಟದ ರೂವಾರಿ ನಿತ್ಯಾನಂದ ಸ್ವಾಮಿ Janashakthi Media
