ಬೆಂಗಳೂರು: ಚಿಕ್ಕಮಗಳೂರಿನ ಬಾಬಾ ಬುಡನ್‌ಗಿರಿಯ ಸೌಹಾರ್ದ ಪರಂಪರೆಯನ್ನು ಸಂರಕ್ಷಿಸಲು ಹಾಗೂ ಸಂಪ್ರದಾಯದAತೆ ಉರುಸ್ ನಡೆಸಲು ಅವಕಾಶ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ಕಳಿಸಬೇಕು ಎಂದು ಕರ್ನಾಟಕ ಸಮಸ್ತ ಪ್ರಗತಿಪರ ಸೌಹಾರ್ದ ಸಂಘಟನೆಗಳ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಬಹಿರಂಗ ಪತ್ರದ ಮೂಲಕ ಆಗ್ರಹಿಸಿದ್ದಾರೆ.
ಗುರುವಾರ ಈ ಕುರಿತು, ಹಿರಿಯ ಪತ್ರಕರ್ತೆ ಡಾ.ವಿಜಯಮ್ಮ, ನಟ ಪ್ರಕಾಶ್ ರಾಜ್, ಎದ್ದೇಳು ಕರ್ನಾಟಕದ ತಾರಾರಾವ್, ಕರ್ನಾಟಕ ಜನಶಕ್ತಿಯ ನೂರ್ ಶ್ರೀಧರ್, ಕೆ.ಎಲ್.ಅಶೋಕ್, ಶಾಂತಿಗಾಗಿ ನಾಗರಿಕರ ವೇದಿಕೆಯ ನಗರಗೆರೆ ರಮೇಶ್, ಪ್ರೊ.ವಿ.ಎಸ್.ಶ್ರೀಧರ್, ಸಾಹಿತಿ ಬಂಜಗೆರೆ ಜಯಪ್ರಕಾಶ್, ಶಿಕ್ಷಣ ತಜ್ಞರಾದ ಶ್ರೀಪಾದ್ ಭಟ್, ನಿರಂಜನಾರಾಧ್ಯ, ಒಳಮೀಸಲಾತಿ ಹೋರಾಟಗಾರರಾದ ಬಸವರಾಜ್ ಕೌತಾಳ್, ಕರಿಯಪ್ಪ ಗುಡಿಮನಿ, ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಸಿರಿಮನೆ ನಾಗರಾಜ್, ಕುಮಾರ್ ಸಮತಳ, ಸ್ವರಾಜ್ ಇಂಡಿಯಾ ಖಲೀಂಉಲ್ಲಾ, ಹೋರಾಟಗಾರರಾದ ಗೌಸ್ ಮೊಹಿಯುದ್ಧೀನ್ ಸೇರಿದಂತೆ ಹಲವರು ಪತ್ರದಲ್ಲಿ ಸಹಿ ಹಾಕಿದ್ದಾರೆ.
‘ಸೌಹಾರ್ದ ತಾಣವಾದ ಬಾಬಾ ಬುಡನ್‌ಗಿರಿ ಉಳಿವಿಗೋಸ್ಕರ ಕರ್ನಾಟಕದ ಎಲ್ಲ ಪ್ರಗತಿಪರ ಮನಸ್ಸುಗಳು ಅನೇಕ ದಶಕಗಳ ಕಾಲ ಹೋರಾಟ ಮಾಡಿದ್ದ ಇತಿಹಾಸ ನಮಗೆಲ್ಲರಿಗೂ ಗೊತ್ತೇಇದೆ. ಅದರಾಚೆಗೂ ಕೂಡ ಸಂಘಪರಿವಾರದ ಒತ್ತಡಕ್ಕೆ ಮಣಿದ ಕಾಂಗ್ರೆಸ್ ಸರಕಾರ ಒಂದು ರಾಜಿ ಸೂತ್ರವನ್ನು ಮುಂದಿಟ್ಟಿತ್ತು. ಅದರ ಪ್ರಕಾರ ಉರುಸ್ ಹಾಗೂ ದತ್ತಪೂಜೆ ಎರಡನ್ನೂ ನಡೆಸಲು ಅವಕಾಶ ಇರಬೇಕು. ಎರಡನ್ನೂ ಜಿಲ್ಲಾಡಳಿತ ಮೇಲ್ವಿಚಾರಣೆ ಮಾಡಬೇಕು ಎನ್ನುವ ತೀರ್ಮಾನಕ್ಕೆ ಇದಾಗಿತ್ತು’ ಎಂದಿದ್ದಾರೆ. ‘ದತ್ತ ಪೂಜೆಯ ಹೆಸರಿನಲ್ಲಿ ಸಂಘಪರಿವಾರಕ್ಕೆ ಬ್ರಾಹ್ಮಣೀಯ ಆಚರಣೆಯನ್ನು ತುರುಕಲು ಇದು ಅವಕಾಶ ನೀಡುವುದಾಗಿದ್ದರೂ, ಒಂದು ರೀತಿಯಲ್ಲಿ ಈಗಾದರೂ ಈ ಸಂಘರ್ಷ ಮುಕ್ತಾಯಗೊಳ್ಳಲಿ ಎಂದು ಅದನ್ನು ಬೆಂಬಲಿಸಿದ ಜನರೂ ಇದ್ದರು. ಆದರೆ ಇದು ಇಬ್ಬರಿಗೂ ಅವಕಾಶ ಮಾಡಿಕೊಡುವ ಜಾತ್ಯಾತೀತ ನಿಲುವಲ್ಲ. ಸಂಘ ಪರಿವಾರಕ್ಕೆ ಮಣೆ ಹಾಕಿ, ಸೂಫಿ ಪರಂಪರೆಯನ್ನು ನಮ ನಿಶೇಧಿಸುವ ತಂತ್ರಗಾರಿಕೆ ಎಂಬುದು ಬಯಲಾಗಿದೆ’ ಎಂದು ಹೇಳಿದ್ದಾರೆ.
ಇದನ್ನೂ ನೋಡಿ :ಭೂ ಹಕ್ಕಿನ ಹೋರಾಟದ ಧ್ವನಿ | ಮರಕುಂಬಿ ಹೋರಾಟದ ರೂವಾರಿ ನಿತ್ಯಾನಂದ ಸ್ವಾಮಿ Janashakthi Media
ಬ್ರಾಹ್ಮಣೀಯ ರೀತಿಯಲ್ಲಿ ದತ್ತ ಜಯಂತಿ ನಡೆಸಲು ಜಿಲ್ಲಾಡಳಿತ ಸಂಪೂರ್ಣ ಅವಕಾಶ ನೀಡಿತ್ತು. ಬಾಬಾ ಬುಡನ್‌ಗಿರಿಯನ್ನು ಕೇಸರಿಮಯಗೊಳಿಸಿ ಸಂಘಪರಿವಾರದ ನೇತೃತ್ವದಲ್ಲಿ ದತ್ತ ಜಯಂತಿ ನಡೆಯಿತು. ಆದರೆ ಅದೇ ಸಂಧರ್ಭದಲ್ಲಿ ಮಾ.4, ಮಾ.5 ಮತ್ತು ಮಾ.6 ದರ್ಗಾ ಸಮಿತಿ ಕಡೆಯಿಂದ ಉರುಸ್ ಆಯೋಜನೆಗೊಂಡಿತ್ತು. ಆದರೆ ಜಿಲ್ಲಾಡಳಿತ ಉರುಸ್ ನಡೆಯದಂತೆ ತಡೆಯೊಡ್ಡಿದೆ. ಸಜ್ಜಾದೆ ಅವರಿಗೆ ನಿಮಗೆ ಇಲ್ಲಿ ಸಂಪ್ರದಾಯದAತೆ ಗಂಧ ಹಚ್ಚುವ, ಉರುಸ್ ಅನ್ನು ನಡೆಸಿಕೊಡುವ ಹಕ್ಕು ಇಲ್ಲ ಎಂದು ತಡೆ ಹಿಡಿದು, ಗೋರಿಯ ಮೇಲೆ ಹಸಿರು ಚಾದರ್ ಹಾಕುವುದಕ್ಕಾಗಲಿ, ಅವರ ಸಂಪ್ರದಾಯದAತೆ ಉರುಸ್ ನಡೆಸಲಾಗಲಿ ಅವಕಾಶ ಕೊಡದೆ ಅವರನ್ನು ಹೊರಗಿಡಲಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
‘ಈ ಅನ್ಯಾಯವನ್ನು ಖಂಡಿಸಿ ಪ್ರಗತಿಪರ ಸಂಘಟನೆಗಳು ಪ್ರತಿಭಟನೆಗೆ ಕರೆ ನೀಡಿತ್ತು. ಆ ಪ್ರತಿಭಟನೆಗೂ ಅವಕಾಶ ಕೊಡದಂತೆ ಪೊಲೀಸರು ಹೋರಾಟಗಾರರನ್ನು ಎಳೆದಾಡಿ ಅವಮಾನಕಾರಿಯಾಗಿ ನಡೆಸಿಕೊಂಡಿದ್ದಾರೆ. ಇದು ಕಾಂಗ್ರೆಸ್ ಸರಕಾರದ ಹುಸಿ ಜಾತ್ಯಾತೀತ ಹಾಗೂ ದ್ವಂದ್ವ ನೀತಿಯಾಗಿದೆ, ಇದನ್ನು ನಾವು ಖಂಡಿಸುತ್ತಿದ್ದೇವೆ. ತಾವು ಈ ಕೂಡಲೇ ಮಧ್ಯಪ್ರವೇಶ ಮಾಡಿ ಬಾಬಾ ಬುಡನ್‌ಗಿರಿಯಲ್ಲಿ ಸೌಹಾರ್ದ ಪರಂಪರೆಯನ್ನು ಸಂರಕ್ಷಿಸಬೇಕು ಮತ್ತು ಸುಪ್ರೀಂಕೋರ್ಟ್ ತೀರ್ಪಿನ ಆದೇಶದಂತೆ ನಡೆದುಕೊಳ್ಳಬೇಕು. ಉರುಸ್ ನಡೆಸಲು ಸಜ್ಜಾದೆ ಮತ್ತು ಭಕ್ತಾದಿಗಳಿಗೆ ಅವಕಾಶ ನೀಡಬೇಕು. ಈ ನಿಟ್ಟಿನಲ್ಲಿ ಜಿಲ್ಲಾಡಳಿತಕ್ಕೆ ಸೂಕ್ತ ರೀತಿಯಲ್ಲಿ ನಿರ್ದೇಶನ ನೀಡಬೇಕು’ ಎಂದು ಹೋರಾಟಗಾರರು ಆಗ್ರಹಿಸಿದ್ದಾರೆ.
ಇದನ್ನೂ ಓದಿ : AI ಕೃತಕ-ಬುದ್ದಿಮತ್ತೆ : ಡೇಟಾ ಯಾರದ್ದು? ಲಾಭ ಯಾರಿಗೆ?
