ನಾನು ಮೂಲತಃ ಒಬ್ಬ ನಟ. ಮುಖ್ಯವಾಗಿ ಸಿನೆಮಾ ನಟನಾಗಿ ಈ ಪ್ರಪಂಚಕ್ಕೆ ಪರಿಚಿತನಾಗಿದ್ದರೂ, ನನ್ನ ಬೇರುಗಳು ರಂಗಭೂಮಿಯಲ್ಲಿವೆ. 1977ರಿಂದ 2003ರವರೆಗೆ ನಾನು The Wooster Group ಎಂಬ ರಂಗಭೂಮಿ ತಂಡದ ಸದಸ್ಯನಾಗಿದ್ದು, ನ್ಯೂಯಾರ್ಕ್ ನಗರದಲ್ಲಿನ The Performing Garage ನಲ್ಲಿ ಹಲವು ಕೃತಿಗಳನ್ನು ತಂಡವಾಗಿ ರಚಿಸಿ ಪ್ರದರ್ಶಿಸಿದ್ದೆವು ಮತ್ತು ಈ ತಂಡದ ಜೊತೆ ಜಗತ್ತಿನಾದ್ಯಂತ ಪ್ರವಾಸ ಮಾಡಿದ್ದೆವು. ವಿಶ್ವ
– ವಿಲ್ ಯೆಂ ಡೆಫೊ
– ಕನ್ನಡಾನುವಾದ: ಪ್ರಶಾಂತ ಅನಂತಾಡಿ
ನಾನು Richard Foreman, Robert Wilson ಮತ್ತು Romeo Castellucci ಅವರೊಂದಿಗೆ ಸಹ ಕೆಲಸ ಮಾಡಿದ್ದೇನೆ. ಪ್ರಸ್ತುತ, ನಾನು Venice Theatre Biennale ಯ ಕಲಾ ನಿರ್ದೇಶಕನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ನನ್ನದಾದ ಈ ತೊಡಗಿಸಿಕೊಳ್ಳುವಿಕೆ,, ಜಗತ್ತಿನ ವರ್ತಮಾನದ ಆಗುಹೋಗುಗಳು ಹಾಗೂ ಮತ್ತೆ ರಂಗಭೂಮಿಗೆ ಮರಳುವ ನನ್ನ ಆಸೆ-ಇವೆಲ್ಲವು ನನ್ನಲ್ಲಿ ರಂಗಭೂಮಿಯ ಬಗೆಗಿನ ವಿಶಿಷ್ಟ ಸಕಾರಾತ್ಮಕ ಶಕ್ತಿ ಮತ್ತು ಅದರ ಮಹತ್ವದ ಕುರಿತಾದ ನನ್ನ ನಂಬಿಕೆಯನ್ನು ಗಟ್ಟಿಗೊಳಿಸಿವೆ. ವಿಶ್ವ
The Wooster Group ನಲ್ಲಿ ನನ್ನ ವಿನಮ್ರವಾದ ಪ್ರಾರಂಭಿ ಕ ದಿನಗಳಲ್ಲಿ, ನಮ್ಮ ಪ್ರದರ್ಶನಗಳಿಗೆ ಕೆಲವೊಮ್ಮೆ ತುಂಬಾ ಕಡಿಮೆ ಪ್ರೇಕ್ಷಕರು ಮಾತ್ರ ಬರುತ್ತಿದ್ದರು. ಕೆಲವೊಮ್ಮೆ ಕಲಾವಿದರಿಗಿಂತಲೂ ಪ್ರೇಕ್ಷಕರು ಕಡಿಮೆ ಇದ್ದರೆ ಪ್ರದರ್ಶನ ರದ್ದುಪಡಿಸಬಹುದು ಎಂಬ ಅವಕಾಶವಿತ್ತು. ಆದರೆ ನಾವು ಎಂದಿಗೂ ಹಾಗೆ ಮಾಡಲಿಲ್ಲ. ನಮ್ಮ ನಾಟಕ ತಂಡದ ಸದಸ್ಯರಲ್ಲಿ ಹಲವರು ಯಾವುದೇ ರೀತಿಯ ವೃತ್ತಿಪರ ನಾಟಕ ತರಬೇತಿ ಪಡೆದ ರಂಗಭೂಮಿ ಕಲಾವಿದರು ಆಗಿರಲಿಲ್ಲ. ಅವರೆಲ್ಲ ವಿಭಿನ್ನ ಕ್ಷೇತ್ರಗಳಿಗೆ ಸೇರಿದ ರಂಗಭೂಮಿ ಪ್ರೀತಿಯ ಸಮಾನಮನಸ್ಕರಾಗಿದ್ದರು. ವಿಶ್ವ
ಇದನ್ನೂ ಓದಿ: ಬೆಂಗಳೂರು ವಿವಿ| ಯುವತಲೆಮಾರಿಗಾಗಿ ಕುವೆಂಪು ಅಭಿಯಾನ – ಓದು ಕಾರ್ಯಾಗಾರಕ್ಕೆ ಬಂಜಗೆರೆ ಚಾಲನೆ
“ಪ್ರದರ್ಶನ ಮುಂದುವರಿಯಲೇಬೇಕು” ಎಂಬುವುದು ನಮ್ಮ ಮಂತ್ರವಾಗಿರಲಿಲ್ಲವಾದರೂ ಪ್ರೇಕ್ಷಕರೊಂದಿಗೆ ನಮ್ಮ ಮುಖಾಮುಖಿಯು ಮುಂದುವರಿಯಬೇಕೆನ್ನುವುದು ನಮ್ಮ ಆಶಯವಾಗಿತ್ತು. ನಾವು ಹಗಲಿನ ವೇಳೆಯಲ್ಲಿ ನಾಟಕಾಭ್ಯಾಸ ಮಾಡಿ, ಸಂಜೆಗೆ ಅದನ್ನೇ ಇನ್ನೂ ಅಭ್ಯಾಸದಲ್ಲಿರುವ ಕೃತಿ ಎಂದು ಪ್ರದರ್ಶಿಸುತ್ತಿದ್ದೆವು. ಕೆಲವೊಮ್ಮೆ ಒಂದು ಪ್ರದರ್ಶನಕ್ಕಾಗಿ ವರ್ಷಗಳ ಕಾಲ ಕೆಲಸ ಮಾಡುತ್ತಿದ್ದೆವುಮತ್ತು ಜೀವನೋಪಾಯಕ್ಕಾಗಿ ಹಳೆಯ ನಾಟಕಗಳನ್ನು ಪ್ರದರ್ಶಿಸುತ್ತಾ ಪ್ರವಾಸ ಮಾಡುತ್ತಿದ್ದೆವು. ಒಮ್ಮೊಮ್ಮೆ ವರ್ಷಗಳ ಕಾಲ ಒಂದೇ ಕೃತಿಯಲ್ಲಿ ತೊಡಗಿರುವುದು ನಮಗೆ ನೀರಸ ಭಾವನೆ ಮೂಡಿಸುತ್ತಿತ್ತು. ಆದರೆ ಈ ಅಭ್ಯಾಸ ಕೃತಿಯ ಪ್ರದರ್ಶನಗಳು ಸದಾ ಉತ್ಸಾಹ ನೀಡುತ್ತಿದ್ದವು. ಪ್ರೇಕ್ಷಕರ ಸಂಖ್ಯೆ ಕಡಿಮೆಯೆನ್ನುವುದು ಪರಿಗಣಿಸಬೇಕಾದ ವಿಚಾರವಲ್ಲ, ಪ್ರೇಕ್ಷಕರು ಸಾಕ್ಷಿಗಳಾಗಿ ಹಾಜರಾಗುವುದೇ ರಂಗಭೂಮಿಗೆ ನಿಜವಾದ ಅರ್ಥ ಮತ್ತು ಜೀವಂತಿಕೆ ನೀಡುವ ವಿಚಾರ ಎಂಬ ಸತ್ಯ ದರ್ಶನ ನನಗಾದುದು ಇದೇ ಸಂದರ್ಭದಲ್ಲಿ. ವಿಶ್ವ
“ಗೆಲ್ಲಲು ನೀವು ತೊಡಗಿಸಿಕೊಳ್ಳಬೇಕು “ ಎಂಬುದಾಗಿ ಜೂಜಿನ ಕೇಂದ್ರದ ಫಲಕದಲ್ಲಿ ಬರೆದಿರುವಂತೆ ಒಂದು ಸೃಜನಶೀಲ ಕೃತಿಯ ಸೃಷ್ಟಿಯ ಸಂದರ್ಭದಲ್ಲಿ ಹಂಚಿಕೊಳ್ಳುವ ಸೃಜನಾತ್ಮಕ ಅನುಭವ,ಪ್ರತಿ ಬಾರಿಯು ವಿಭಿನ್ನವಾಗಿ ದೊರಕುವ ಅನುಭವಗಳು ರಂಗಭೂಮಿಯ ನಿಜವಾದ ಶಕ್ತಿ. ಸಾಮಾಜಿಕವಾಗಿ, ರಾಜಕೀಯವಾಗಿ ನಮ್ಮನ್ನು ಮತ್ತು ನಮ್ಮ ಜಗತ್ತನ್ನು ಅರಿತುಕೊಳ್ಳಲು ರಂಗಭೂಮಿಯು ಹಿಂದೆಂದು ಕೂಡಾ ಇಂದಿನಷ್ಟು ಮಹತ್ವಪೂರ್ಣ ಮಾಧ್ಯಮವಾಗಿರಲಿಲ್ಲ. ವಿಶ್ವ

ಇದು ಹೇಗೆಂದರೆ ಕೊಠಡಿಯಲ್ಲಿ ಇರುವ ಆನೆಯ ಹಾಗೆ ಅಂದರೆ ಹೊಸ ತಂತ್ರಜ್ಞಾನಗಳು ಮತ್ತು ಸಾಮಾಜಿಕ ಜಾಲತಾಣಗಳು ಪರಸ್ಪರ ಸಂಪರ್ಕದ ಭರವಸೆಯನ್ನು ನೀಡುತ್ತವೆ. ಜೊತೆಯಲ್ಲಿ ಜನರನ್ನು ಒಬ್ಬರಿಗೊಬ್ಬರು ದೂರ ಮಾಡುತ್ತಿರುವಂತೆಯೂ ಕಾಣುತ್ತವೆ
ನಾನು ಪ್ರತಿದಿನ ಕಂಪ್ಯೂಟರ್ ಬಳಸುತ್ತೇನೆ; ಸಾಮಾಜಿಕ ಜಾಲತಾಣಗಳಿಲ್ಲದಾಗಲೂ ನನ್ನ ಬಗ್ಗೆ ಗೂಗಲ್‌ನಲ್ಲಿ ಹುಡುಕಿದ್ದೇನೆ. ಮಾಹಿತಿಗಾಗಿ ಕೃತಕ ಬುದ್ಧಿಮತ್ತೆಯನ್ನೂ ಬಳಕೆ ಮಾಡಿದ್ದೇನೆ. ಆದರೆ ಇಂತಹ ಅತಿರೇಕಗಳು ಉಂಟುಮಾಡುತ್ತಿರುವ ಅಪಾಯಗಳ ಕುರಿತು ಜಾಣ ಕುರುಡುತನವನ್ನು ಪ್ರದರ್ಶಿಸುವುದು ಸರಿಯಲ್ಲ. ಈ ಆಧುನಿಕ ಸಾಧನಗಳ ಮೂಲಕ ಬದಲಾಗುತ್ತಿರುವ ಮಾನವ ಸಂಬಂಧಗಳ ಅಪಾಯದ ಅರಿವೂ ನಮ್ಮಲ್ಲಿರಬೇಕು
ತಂತ್ರಜ್ಞಾನವು ಇಂದು ಬಹುವಾಗಿ ನಮ್ಮ ಸೇವೆಗೆ ಒದಗುತ್ತದೆ. ಆದರೆ ಈ ಸಂಪರ್ಕದ ಮತ್ತೊಂದು ತುದಿಯಲ್ಲಿ ಯಾರು ಇದ್ದಾರೆ ಎಂಬ ಅಸ್ಪಷ್ಟತೆಯ ಸತ್ಯ ಮತ್ತು ವಾಸ್ತವದ ಸಂಕಟವನ್ನು ಗಂಭೀರಗೊಳಿಸುತ್ತದೆ. ಆಧುನಿಕತೆಯ ಈ ಅವಕಾಶಗಳು ನಮಗೆ ಪ್ರಶ್ನೆಗಳನ್ನು, ಮಾಹಿತಿಗಳನ್ನು ಕೊಡಬಹುದು. ಆದರೆ ರಂಗಭೂಮಿಯೆಂಬ ಜೀವಂತಿಕೆಯ ಅವಕಾಶವು ಉಂಟುಮಾಡುವ ಸಂವೇದನಾ ಭಾವವನ್ನು ಅದು ಎಂದಿಗೂ ಕಟ್ಟಿಕೊಡಲಾರದು.
ರಂಗಭೂಮಿಯು ನಮ್ಮಲ್ಲಿ ಅವಧಾನದ ಗುಣ, ನಿರಂತರ ತೊಡಗಿಸಿಕೊಳ್ಳುವಿಕೆಯ ಗುಣವನ್ನು ಬೆಳೆಸುತ್ತದೆ. ಒಬ್ಬ ನಟನಾಗಿ ಮತ್ತು ರಂಗಸೃಷ್ಟಿಕರ್ತನಾಗಿ ನನ್ನ ರಂಗಭೂಮಿಯ ಶಕ್ತಿಯ ಮೇಲೆ ನನಗೆ ಅತೀವ ನಂಬಿಕೆಯಿದೆ. ಯಾಂತ್ರಿಕತೆ, ಪರಸ್ಪರ ಅಪನಂಬಿಕೆ ಮತ್ತು ಹಿಂಸೆಯ ದಿಕ್ಕಿಗೆ ಜಗತ್ತು ಇಂದು ಸಾಗುತ್ತಿರುವಾಗ, ರಂಗಭೂಮಿಯನ್ನು ಕೇವಲ ವ್ಯಾಪಾರಿಕ ಮನರಂಜನೆಗೆ ಅಥವಾ ಪರಂಪರೆಗಳ ಒಣ ಸಂರಕ್ಷಣೆಗೆ ಸೀಮಿತಗೊಳಿಸದೆ, ಜನರು, ಸಮುದಾಯಗಳು ಮತ್ತು ಸಂಸ್ಕೃತಿಗಳನ್ನು ಸಂಪರ್ಕಿಸುವ ಶಕ್ತಿಯನ್ನಾಗಿ ಬೆಳೆಸುವುದು ನಮ್ಮ ಮುಂದಿರುವ ಸವಾಲು. ನಮ್ಮ ಕನಸುಗಳೇನು ಎಂಬುದನ್ನು ಕಲ್ಪಿಸಲು ನಿಜವಾದ ರಂಗಭೂಮಿ ಪ್ರೇರೇಪಿಸುತ್ತದೆ.
ನಾವು ಸಮಾಜ ಜೀವಿಗಳು. ಜಗತ್ತಿನೊಂದಿಗೆ ತೊಡಗಿಸಿಕೊಳ್ಳಲು ಜೀವಶಾಸ್ತ್ರೀಯವಾಗಿ ರೂಪುಗೊಂಡವರು. ನಮ್ಮ ಪ್ರತಿಯೊಂದು ಇಂದ್ರಿಯವೂ ವಿವಿಧ ಅನುಭವಗಳನ್ನು ಪಡೆದುಕೊಳ್ಳಲು ಹೊಂದಿರುವ ಅವಕಾಶ. ಮತ್ತು ಈ ಮೂಲಕ ನಾವು ಈ ಪ್ರಪಂಚದ ಅತಿದೊಡ್ಡ ಜಿಜ್ಞಾಸೆಯಾದ “ ನಾನು ಯಾರು ?” ಎಂಬುವುದಕ್ಕೆ ಉತ್ತರ ಕಂಡುಕೊಳ್ಳಲು ಸಾಧ್ಯವಾಗುವಂಥಾದ್ದು. ಕಥನ, ಸೌಂದರ್ಯಶಾಸ್ತ್ರ, ಭಾಷೆ, ಚಲನ, ದೃಶ್ಯ ವಿನ್ಯಾಸಗಳ ಸಮಗ್ರ ಕಲಾರೂಪವಾದ ಈ ರಂಗಭೂಮಿ ನಮಗೆ “ಹಿಂದೆ ಏನು ಇತ್ತು, ಈಗ ಏನು ಇದೆ, ಮತ್ತು ನಮ್ಮ ಜಗತ್ತು ಹೇಗಿರಲು ಸಾಧ್ಯವಿದೆ ಎಂಬುದನ್ನು ತೋರಿಸುವ ಒಂದು ಅನನ್ಯವಾದ ಚೇತೋಹಾರಿ ಅವಕಾಶ.
ಇದನ್ನೂ ನೋಡಿ: ಗಾಂಧಿ, ನೆಹರೂ ವಿಚಾರಗಳ ಮೇಲೆ ದಾಳಿ: ಉಗ್ರಪ್ಪ ಆರೋಪJanashakthi Media
