ಅವರು “ಅಸ್ಪೃಶ್ಯರು” ಎಂದು ಕರೆದವರು ನಿಜವಾಗಲೂ “ಅಸ್ಪೃಶ್ಯರೇ”…?

“ಅಸ್ಪೃಶ್ಯತೆ” ಆಚರಣೆಯಿಂದ ಸ್ವ-ಘೋಷಿತ “ಸ್ಪೃಶ್ಯ” ಭಾರತೀಯ ಮನಸ್ಸಿನವರು ಹೊರಬರಲು ಏಕೆ ಮುಂದಾಗುತ್ತಿಲ್ಲ…?
ಇಂದು ನಮ್ಮ ನೆರೆಗೆ ಮಧ್ಯಪ್ರಾಚ್ಯ ರಾಷ್ಟ್ರಗಳಾದ ಇರಾನ್ ಮತ್ತು ಇಸ್ರೇಲ್ ಗಳ ನಡುವೆ ವಿವಿಧ ಕಾರಣಗಳಿಗಾಗಿ ಯುದ್ಧ ನಡೆಯುತ್ತಿದೆ. ಈ ಯುದ್ಧ ಭೌತಿಕವಾದದ್ದು. ಇಷ್ಟರಲ್ಲಿ ಬೌದ್ಧಿಕ ಚಿಂತನೆ ಮೂಲಕ ಅದು ಕೊನೆಗೊಳ್ಳುತ್ತದೆ. ಇದು ಸತ್ಯ. ಅಸ್ಪೃಶ್ಯರು
– ಎನ್ ಚಿನ್ನಸ್ವಾಮಿ ಸೋಸಲೆ

ಆದರೆ, ಭಾರತದಲ್ಲಿ ಶತಶತಮಾನಗಳಿಂದ ಅಸ್ಪೃಶ್ಯತೆ ಆಚರಣೆ ಎಂಬ” ಅಬೌದ್ಧಿಕ ” ಶಾಶ್ವತ ಯುದ್ಧಕ್ಕೆ ಮಾತ್ರ ಕೊನೆಗಾಣಿಸಲು ಸಾಧ್ಯವಾಗುತ್ತಿಲ್ಲ. ಇದೂಸಹ ಸತ್ಯ. ಅಸ್ಪೃಶ್ಯತೆ ಆಚರಣೆ ಮಾಡುತ್ತಿರುವವರ ನಿರಂತರ ಯುದ್ಧಕ್ಕೆ ಯಾವುದೇ ಭೌತಿಕ ಶಶಸ್ತ್ರಗಳಿಲ್ಲದೆ ಕೇವಲ ದೇವರು ದೇವಸ್ಥಾನದ ಹಿನ್ನೆಲೆಯಿಂದ ಈ ನೆಲದ ಮಾನವ ಕುಲದಲ್ಲಿ ನಾವು ಮಾತ್ರ ಶ್ರೇಷ್ಠತೆ ಹಾಗೂ ಸ್ಪೃಶ್ಯರು ಎಂದು ಗುರುತಿಸಿಕೊಂಡವರು ತಮ್ಮಲ್ಲಿ ಪಿತ್ರಾರ್ಜಿತವಾಗಿ ಮನೆ ಮಾಡಿಕೊಂಡ ಮಾನಸಿಕ ಕೊಚ್ಚಿ ಕೊಲ್ಲುತ್ತಿರುವ ಪ್ರಬಲ ಅಸ್ತ್ರದಿಂದಲೇ ನಿರಂತರವಾಗಿ ಮಾಡುತ್ತಿರುವ ಯುದ್ಧದ. ಈ ಮಾನಸಿಕ ಯುದ್ಧಕ್ಕೆ ಮಾತ್ರ ಈ ನೆಲದಲ್ಲಿ ಕೊನೆಯಾಗುವ ಲಕ್ಷಣಗಳೇ ಕಾಣುತ್ತಿಲ್ಲ. ಅಸ್ಪೃಶ್ಯರು

ಈ ವಿಷಯದಲ್ಲಿ ಮಾತ್ರ ಭಾರತ ದಿನನಿತ್ಯ ಯುದ್ಧವನ್ನು ಮಾಡುತ್ತಲೇ ಇದೆ. ಆದರೆ ಈ ಮಾನಸಿಕ ಯುದ್ಧದಿಂದ ಯಾವುದೇ ಕಟ್ಟಡಗಳು ಬೀಳುತ್ತಿಲ್ಲ – ಯಾವುದೇ ನಗರಗಳು ನಾಶವಾಗುತ್ತಿಲ್ಲ – ಯಾವುದೇ ಆಣೆಕಟ್ಟುಗಳು ನಾಶವಾಗುತ್ತಿಲ್ಲ. ಆದರೆ, ಪ್ರತಿಯೊಬ್ಬರ ಮನಸ್ಸಿನಲ್ಲಿ ಮಾತ್ರ ನಾನು ಸ್ಪೃಶ್ಯ – ನೀನು ಅಸ್ಪೃಶ್ಯ ಎಂಬ ಬಹುದೊಡ್ಡ ಅಣುಬಾಂಬುಗಳನ್ನು ಮಾತ್ರ ಇರಿಸಿಕೊಂಡಿರುವ ಕಾರಣದಿಂದಾಗಿ ಇವರಿಂದ ನೀವು ಅಸ್ಪೃಶ್ಯರು ಎಂದು ಕರೆಸಿಕೊಂಡಿರುವವರ ಮನೆ ಹಾಗೂ ಮನೆಗಳು ಮಾತ್ರ ಬೌದ್ಧಿಕ ಹಾಗೂ ಭೌತಿಕವಾಗಿ ಶತಶತಮಾನಗಳಿಂದ ಹಾಗೂ ಸಮಕಾಲಿನವರೆಗೂ ನಿರಂತರವಾಗಿ ಸಾಮಾಜಿಕ ಹಾಗೂ ಸಾಂಸ್ಕೃತಿಕವಾಗಿ ಹಾಳಾಗಿವೆ ಹಾಗೂ ಇಂದಿಗೂ ಸಹ ಹಾಳಾಗುತ್ತಿವೆ. ಅಸ್ಪೃಶ್ಯರು

ಇದನ್ನೂ ಓದಿ: ಹಿಟ್ನಾಳ್‌ ಸಹೋದರರ ಹೋಳಿ ಸಂಭ್ರಮ | ಪರೀಕ್ಷೆಯಿಂದ ಹೊರಗುಳಿದ ಮುಸ್ಲಿಂ ವಿದ್ಯಾರ್ಥಿನಿ

ಈ ಅಣು ಬಾಂಬುಗಳು ಭಾರತದ ನೆಲದಲ್ಲಿ ಪ್ರತಿನಿತ್ಯ ಸಿಡಿಸುತ್ತಿರುವ ಮಾದರಿ ಎರಡನೇ ಮಹಾಯುದ್ಧದಲ್ಲಿ ಇದೇ ಅಮೆರಿಕ ಹಾಗೂ ರಷ್ಯಾ ದೇಶಗಳು ಹಾಕಿದ ಮಾನವ ಸಂಕುಲನವನ್ನೇ “ಭೌತಿಕ” ವಾಗಿ ನಾಶಪಡಿಸುವ ಅಣುಬಾಂಬ್ಗೆ ತುತ್ತಾಗಿ ನಾಶವಾದ ಹಿರೋಶಿಂಹ – ನಾಗಸಾಕಿ ಎಂಬ ಜಪಾನಿನ ಎರಡು ನಗರಗಳು ನಾಶವಾದುದುಕ್ಕಿಂತಲೂ ಅಪಾಯಕಾರಿಯಾಗಿದೆ. ಅಂದು ಅಣುಬಾಂಬ್ಗೆ ತುತ್ತಾಗಿ ನಾಶವಾದ ಈ ನಗರಗಳು ಇಂದು ಸಮೃದ್ಧವಾಗಿ ಬೆಳೆದು ನಿಂತಿವೆ, ಆದರೆ ಶತಶತಮಾನಗಳಿಂದ ಈ ಭಾರತದ ನೆಲದಲ್ಲಿ ಬಹುಸಂಖ್ಯಾತ ಜನ ಸ್ಪೃಶ್ಯತೆ ಹಾಗೂ ಅಸ್ಪೃಶ್ಯತೆ ಎಂಬ ಮಾನಸಿಕ ಅಣುಬಾಂಬ್ಗೆ ಒಳಗಾಗಿ ಸಾಂಸ್ಕೃತಿಕವಾಗಿ ನಾಶವಾಗಿರುವ ಮನಸ್ಸುಗಳನ್ನು ಮಾತ್ರ ಸಮೃದ್ಧವಾಗಿ ಬಿಸಿಯಲು ಸಾಧ್ಯವೇಯಾಗುತ್ತಿಲ್ಲ. ಇದಕ್ಕೆ ಉತ್ತರ ಹೀರೋಶಿಂಮ -ನಾಗಸಾಕಿ ಮೇಲೆ ವಿರೋಧಿ ರಾಷ್ಟ್ರಗಳು ಹಾಕಿದ್ದು ಭೌತಿಕ ಅಣುಬಾಂಬ್ ಅಷ್ಟೇ. ಆದರೆ ಭಾರತದಲ್ಲಿ ನಿರಂತರವಾಗಿ ಹಾಕುತ್ತಿರುವುದು ಬೌದ್ಧಿಕ ಅಜ್ಞಾನದ ಅಣುಬಾಂಬ್.

ಬುದ್ಧನಿಂದ ಮುದಲ್ಗೊಂಡು ಅಂಬೇಡ್ಕರ್ ವರೆಗೂ ಕಾಲಕಾಲಕ್ಕೆ ಅಸ್ಪೃಶ್ಯ ಮುಕ್ತಾಯಕ್ಕಾಗಿ “ಬೌದ್ಧಿಕ” ಯುದ್ಧಕ್ಕೆ ಪ್ರತಿರೋಧದ ಯುದ್ಧ ಮಾಡಿದ ಭಾರತ, ಅಸ್ಪೃಶ್ಯತೆ ಮುಕ್ತ ರಾಷ್ಟ್ರವಾಯಿತೆ ಅಥವಾ ಏಕೆ ಆಗಲಿಲ್ಲ ಎಂಬ ಪ್ರಶ್ನೆ ಪ್ರತಿಯೊಬ್ಬ ಪ್ರಜ್ಞಾವಂತರಲ್ಲೂ ಕಾಡುತ್ತದೆ. ಇಂತಹ ಮೂಲಭೂತ ಪ್ರಶ್ನೆ ಯುಗಯುಗಗಳಿಂದಲೂ ನಮ್ಮ ದೇಶದ ಜನರ ಸಂಸ್ಕೃತಿ ಹಾಗೂ ಚರಿತ್ರೆ ಭವ್ಯ- ಅಮೋಘ ಎಂದು ಹೇಳಿಕೊಳ್ಳುವ ಪ್ರತಿಯೊಬ್ಬ ಭಾರತೀಯರ ‘ ಮನ ‘ ಹಾಗೂ
‘ ಮನೆ ‘ ಗಳಲ್ಲಿ ಕಾಡಲೆಬೇಕಾದ ವಸ್ತುನಿಷ್ಠ ಪ್ರಶ್ನೆಯಾಗಿದೆ. ಅಸ್ಪೃಶ್ಯರು

ಇಂತಹ ವಸ್ತುನಿಷ್ಠ ಪ್ರಶ್ನೆಗೆ ಸ್ಪಷ್ಟವಾದ ಉತ್ತರ ಅವರ ‘ ಮನ ‘ ಹಾಗೂ ‘ ಮನೆ ‘ ಯಲ್ಲಿಯೇ ಶಾಶ್ವತ ರೂಪದಲ್ಲಿ ನಿಷ್ಠೂರಕರವಾಗಿಯೇ ಇದೆ. ಈ ಸತ್ಯವನ್ನು ಕಂಡುಕೊಳ್ಳದೆ ‘ ಸ್ಪೃಶ್ಯ ‘ ಭಾರತೀಯರು ಬೀದಿಗೆ ಬಂದು ‘ ಅಸ್ಪೃಶ್ಯತೆ ‘ ನಿವಾರಣೆ ಬಗ್ಗೆ ಪೂಖಾನು- ಪುಂಖವಾಗಿ ಮಾತನಾಡುವುದು – ಅಸ್ಪೃಶ್ಯತೆ ಆಚರಣೆಗೆ ದಾಖಲೆಯನ್ನು ಹುಡುಕುತ್ತಿರುವುದು ಭಾರತ ಶಾಶ್ವತವಾಗಿ ‘ಸ್ಪೃಶ್ಯತೆ ‘ ಯ ಹಿನ್ನೆಲೆಯಿಂದಲೇ ಮಾನಸಿಕವಾಗಿ ಶಾಶ್ವತ ‘ಅಸ್ಪೃಶ್ಯತೆಯ’ ರಾಷ್ಟ್ರವಾಗಲೂ ಕಾರಣವಾಗಿದೆ. ಅಸ್ಪೃಶ್ಯರು

ಏಕೆಂದರೆ, ತಮಗೆ ತಾವೇ ‘ ನಾವು ಸ್ಪೃಶ್ಯರು ‘ ಎಂದು ತಾವೇ ಸೃಷ್ಟಿಸಿದ ವೇದ – ಪುರಾಣಗಳ ಹಿನ್ನೆಲೆಯ ಏಕಮುಖ ಚಿಂತನೆಯ ಧರ್ಮರೂಪಿತ (ಅಧರ್ಮ ರೂಪಿತ) ದೇವಾಲಯಗಳ ಹಿನ್ನಲೆಯಿಂದ ಕರೆದುಕೊಂಡ ಒಂದಷ್ಟು ಜನ ವರ್ಗ , ತಮ್ಮ ಶ್ರೇಷ್ಠತೆಯ ಅಹಂನಿಂದಾಗಿ ಇವರೇ ಇನ್ನೊಬ್ಬರನ್ನು ಕರೆದದ್ದು ‘ನೀವು ಅಸ್ಪೃಶ್ಯರು’ ಎಂದು. ಈ ಹಿನ್ನೆಲೆಯಿಂದ ಇವತ್ತು ಅಸ್ಪೃಶ್ಯತೆಯ ಕಳಂಕಕ್ಕೆ ಒಳಗಾಗಿರುವವರು ನಿಜವಾಗಲೂ ಅಸ್ಪೃಶ್ಯರಲ್ಲ, ಇವರು ಸ್ವ-ಘೋಷಿತ “ಸ್ಪೃಶ್ಯ” ರಿಂದ ನೀವು ಸೇವಿಸುವ ಆಹಾರ, ಪೂಜಿಸುವ ದೇವರು, ವಾಸಿಸುವ ಸ್ಥಳ ಹಾಗೂ ಮಾಡುವ ವೃತ್ತಿ ಆಧಾರದ ಮೇಲೆ ನೀವು ಧಾರ್ಮಿಕ ಹಾಗೂ ಸಾಮಾಜಿಕ ಹಿನ್ನೆಲೆಯಿಂದ ನಮಗೆ ನೀವು ” ಅಸ್ಪೃಶ್ಯರು ” ಎಂದು ಕರೆದುಕೊಂಡವರಿಂದ – ಕರೆಸಿಕೊಂಡವರು ಎಂಬುದನ್ನು ಮರೆಯಬಾರದು. ಅಸ್ಪೃಶ್ಯರು

ಈ ಹಿನ್ನೆಲೆಯಿಂದ ಪ್ರತಿಯೊಬ್ಬರು ಸಹ ಚಾರಿತ್ರಿಕ ಹಾಗೂ ಸಾಮಾಜಿಕ ಹಿನ್ನೆಲೆಯಿಂದ ಅರ್ಥಮಾಡಿಕೊಳ್ಳಬೇಕಾದ ವಿಷಯವೆಂದರೆ “ಮಾನಸಿಕ ಹಾಗೂ ಅಬೌದ್ಧಿಕವಾಗಿ ಇವರನ್ನು ತಮ್ಮ ಸ್ವಾರ್ಥ ಸಾಧನೆಯಾ ಶ್ರೇಷ್ಠತೆಯ ಅಹಂಗಾಗಿ ಅಸ್ಪೃಶ್ಯರು ಎಂದು ಕರೆದವರೇ ನಿಜವಾದ ಶತಶತಮಾನಗಳಿಂದಲೂ ಶಾಶ್ವತ ಮಾನಸಿಕ ಅಸ್ಪೃಶ್ಯರು” ಆಗಿರುವುದು ಎಂಬುದು ಸ್ಪಷ್ಟವಾಗುತ್ತದೆ. ಭಾರತದಲ್ಲಿ ಬೌದ್ಧಿಕ ಅಸ್ಪೃಶ್ಯತೆಗೆ ಬದಲಾವಣೆಯಿದೆ, ಇದು ಅಂಬೇಡ್ಕರ್ ಭಾರತದಲ್ಲಿ ಸತ್ಯವೂ ಆಗಿದೆ.

ಆದರೆ ಮನು ಕೇಂದ್ರಿತ ಅಬೌದ್ಧಿಕ ಪರಂಪರೆಕಾರರ ಶಾಶ್ವತ ಹಿನ್ನೆಲೆಗೆ ಮಾನಸಿಕ ಅಸ್ಪೃಶ್ಯತೆಗೆ ಪಿತ್ರಾರ್ಜಿತ ಪರಂಪರೆ ಇದೆ. ಇದು ಯಾವುದೇ ಸಂದರ್ಭದಲ್ಲಿಯೂ ಸುಳ್ಳಾಗಲು ಸಾಧ್ಯವಾಗುತ್ತಿಲ್ಲ. ಸಾವಿರಾರು ವರ್ಷಗಳ ಈ ಸುಳ್ಳನ್ನೆ ಇಂದು ಸತ್ಯ ಮಾಡಲು ಹೋಗುತ್ತಿರುವ ಯಾವುದಾದರೂ ದೇಶ ಈ ನೆಲದಲ್ಲಿ ಇದ್ದರೆ ಅದು ಭಾರತ ಮಾತ್ರ. ಈ ಹಿನ್ನೆಲೆ ಶತಶತಮಾನಗಳಿಂದಲೂ ಒಂದಷ್ಟು ಜನ ವರ್ಗ ಅಬೌದ್ಧಿಕವಾಗಿ ತಮ್ಮನ್ನು ತಾವೇ “ನಾವು ಸ್ಪೃಶ್ಯರು ” ಎಂಬ ಬಹುದೊಡ್ಡ ಮಾನಸಿಕ ಕಳಂಕ ಭಾರತೀಯರ ಮನಸ್ಸಿನಲ್ಲಿ ಶಾಶ್ವತವಾಗಿದೆ. ಈ ವಿಷಯದಲ್ಲಿ ಮಾತ್ರ ನಾವು ಸ್ಪೃಶ್ಯರು ಎಂದು ಹೇಳಿಕೊಳ್ಳುತ್ತಿರುವವರು ಕಳಂಕ ರಹಿತರಾಗಲು ಸಾಧ್ಯವೇ ಆಗಿಲ್ಲ.

ಭಾರತದಲ್ಲಿ ‘ಅಸ್ಪೃಶ್ಯತೆ’ಯ ತೀವ್ರತೆ ಹೇಗಿದೆ ಎಂದರೆ ‘ಅಸ್ಪೃಶ್ಯತೆ’ ಕುರಿತು ಅಧ್ಯಯನ- ಬರವಣಿಗೆ- ಸಂವಿಧಾನ ಬದ್ಧವಾಗಿ ಮಾತನಾಡುವವರು ಸಹ
‘ಅಸ್ಪೃಶ್ಯತೆ’ ಯ ಶಾಶ್ವತ ಕಳಂಕಕ್ಕೆ ಒಳಗಾಗುತ್ತಿರುವುದು ಸಹಜ ಪ್ರಕ್ರಿಯೆ ಎಂಥಾಗಿದೆ . ‘ಅಸ್ಪೃಶ್ಯತೆ ‘ಯ ಕುರಿತು ‘ಸ್ಪೃಶ್ಯ’ ರೆ ಮಾತನಾಡಿದರೂ ಸಹ ಅವರನ್ನು ಪಾರಂಪರಿಕ ಅಸ್ಪೃಶ್ಯ ಮನಸ್ಸುಗಳು ” ಶಾಶ್ವತ ಗಂಜಿಗಿರಾಕಿಗಳು ” ಎಂದು ಕರೆದುಬಿಡುತ್ತಾರೆ. ಮುಂದುವರೆದು ಅವರಿಗೆ ಸಮಾಜ ಹಾಗೂ ಧರ್ಮ ದ್ರೋಹಿ ಎಂಬ ಪಟ್ಟವನ್ನು ಕಟ್ಟಿ ಬಿಡುತ್ತಾರೆ. ಮುಂದುವರೆದು ಮಾತನಾಡಿದರೆ ಅವರಿಗೆ ರಾಷ್ಟ್ರ ದ್ರೋಹಿ ಎಂಬ ಪಟ್ಟವನ್ನು ಲೀಲಾಜಾಲವಾಗಿ ಕೊಡುತ್ತಾರೆ.

ಅದೇ ತಮ್ಮ ಪಾರಂಪರಿಕ ಪಿತ್ರಾರ್ಜಿತ ಆಸ್ತಿಯ ರೀತಿಯಲ್ಲಿ ಹೊಂದಿರುವ ಶಾಶ್ವತ ‘ಅಸ್ಪೃಶ್ಯ’ (‘ಅಸ್ಪೃಶ್ಯ’ ಮನಸ್ಸುಗಳು ಅಂತ ಹೇಳುತ್ತಿರುವುದು ಶತಶತಮಾನಗಳಿಂದ ತಮಗೆ ತಾವೇ ಸ್ವ ಘೋಷಿಸಿಕೊಂಡಿರುವ ಶಾಶ್ವತ ಮಾನಸಿಕ ‘ಸ್ಪೃಶ್ಯರ’ ಕುರಿತು) ಮನಸ್ಸುಗಳು ಭಾರತದಲ್ಲಿ ಅಸ್ಪೃಶ್ಯತೆಯೇ ಇಲ್ಲ, ಇಂದು ಜಾರಿಯಲ್ಲಿರುವ ಅಸ್ಪೃಶ್ಯತೆಯನ್ನು ಬ್ರಿಟಿಷರು ಭಾರತಕ್ಕೆ ಬಂದ ಮೇಲೆ ಪರಿಚಯಿಸಿದ ಬಹುದೊಡ್ಡ ಕಳಂಕವೇ ಈ ಅಸ್ಪೃಶ್ಯತೆ ಎಂದು ಸೂರ್ಯ- ಚಂದ್ರ ನೇಡೆಗೆ ನಡೆದುಕೊಂಡೆ ಹೋಗಿ ಬಂದಷ್ಟು ಲೀಲಾಜಾಲವಾಗಿ ಬೊಗಳೆ ಬಿಡುವವರು, ಸಹಜವಾಗಿಯೇ ಧಾರ್ಮಿಕ ಹಾಗೂ ಸಾಂಪ್ರದಾಯಿಕ ಸಾಮಾಜಿಕ ಹಿನ್ನೆಲೆಯಿಂದ ಬಹುದೊಡ್ಡ ” ರಾಷ್ಟ್ರಭಕ್ತಿ” ವ್ಯಕ್ತಪಡಿಸುವ ಗಿರಾಕಿಗಳಾಗಿ ಬಿಡುತ್ತಾರೆ. ಇವರಿಗೆ ರಾಷ್ಟ್ರ ಎಂಬುವುದರ ಅರ್ಥವೇ ತಿಳಿದಿಲ್ಲ.

ರಾಷ್ಟ್ರ ಅಂದರೆ ಏನು ಎಂಬುದನ್ನು ಸ್ಪಷ್ಟವಾಗಿ ಪ್ರತಿಪಾದನೆ ಮಾಡಿದ ಬುದ್ಧ – ಬಸವ – ಅಲ್ಲಮ -ಅಂಬೇಡ್ಕರ್ ಅವರ ಅರಿವೇ ಇವರಿಗೆ ಬೇಕಾಗಿಲ್ಲ. ಇಂತಹ ಸಮಸಮಾಜ ಪ್ರತಿಪಾದನೆ ಮೂಲಕ ರಾಷ್ಟ್ರವನ್ನು ಕಟ್ಟಲು ಮುಂದಾದ ನಿಜ ರಾಷ್ಟ್ರೀಯವಾದಿಗಳನ್ನು ಕಂಡರೆ ಇವರಿಗೆ ಆಗುವುದಿಲ್ಲ. ಇವರ ನಿಜವಾದ ರಾಷ್ಟ್ರೀಯವಾದಿಗಳು ಅಸಮಾಜ ಹಾಗು ದೇವರ ಕೇಂದ್ರಿತ ಅಧರ್ಮ ನೀತಿಯನ್ನೇ ಪ್ರತಿಪಾದನೆ ಮಾಡಿದವರು ಹಾಗೂ ಮಾಡುತ್ತಿರುವವರೇ ನಿಜವಾದ ರಾಷ್ಟ್ರೀಯವಾದಿಗಳಾಗಿದ್ದಾರೆ. ನನ್ನ ಪ್ರಕಾರ ಇವರು ರಾಷ್ಟ್ರೀಯವಾದಿಗಳಲ್ಲ. ಜಾತಿ ಸೃಷ್ಟಿ ಹಾಗೂ ಪೋಷಕ ವಾದಿಗಳು ಎಂದು ಸ್ಪಷ್ಟವಾಗಿ ಹೇಳಬೇಕಾಗುತ್ತದೆ.

“ಅಸ್ಪೃಶ್ಯತೆ ನಿವಾರಣೆ ಕುರಿತು ಸಂವಿಧಾನ ಪದ್ಧವಾಗಿ ಮಾತನಾಡಿರುವ ವ್ಯಕ್ತಿಗಳನ್ನೇ ಅಸ್ಪೃಶ್ಯತೆಗೆ ಒಳಪಡಿಸುವ ದೇಶ ಈ ಪ್ರಪಂಚದಲ್ಲಿ ಇದ್ದರೆ ಅದು ಭಾರತ ಮಾತ್ರ ” . ಈ ವಿಷಯದಲ್ಲಿ ಮಾತ್ರ ಭಾರತಕ್ಕೆ ಸುದೀರ್ಘವಾದ ಪಾರಂಪರಿಕ ಚರಿತ್ರೆ ಇದೆ. ಬುದ್ಧ ಬಸವ ಅಂಬೇಡ್ಕರ್ ಅವರು ಶಾಶ್ವತ ಅಸ್ಪೃಶ್ಯತೆಗೆ ಒಳಗಾಗಿದ್ದು ಸಹ ಈ ಕಾರಣದಿಂದಾಗಿಯೇ.

ಅಸ್ಪೃಶ್ಯತೆಯನ್ನು ಶಾಶ್ವತವಾಗಿ ಭಾರತದ ಜನರ ಮನ ಹಾಗೂ ಮನೆಯಿಂದ ನಿರ್ಮೂಲನೆ ಮಾಡಬೇಕೆಂದು ಈ ನೆಲದ ವಾರಸುದಾರರಾಗಿ ಭಾರತೀಯತೆ ದೃಷ್ಟಿಯಿಂದ ಹೋರಾಟ ಮಾಡಿದ ಅಂಬೇಡ್ಕರ್ ಅವರು ಈ ವಿಷಯದಲ್ಲಿ ಅಸ್ಪೃಶ್ಯತೆಯನ್ನು ಕಾಪಾಡಿಕೊಳ್ಳುವ ಮೂಲಭೂತ ವಾದಿಗಳಿಗೆ ಧರ್ಮ ಹಾಗೂ ರಾಷ್ಟ್ರ ಧ್ರೋಹಿಗಳಾಗುತ್ತಾರೆ .

ಆದರೆ ಅಸ್ಪೃಶ್ಯತೆಯನ್ನು ಶಾಶ್ವತವಾಗಿ ಹೋಗಲಾಡಿಸಲು ಯಾವುದೇ ತೀರ್ಮಾನಕ್ಕೂ ಬಾರದೆ , ಆದರೂ ಇವರನ್ನು ಉದ್ಧಾರ ಮಾಡಲು ತಾವು ನಂಬಿದ್ದ ಧರ್ಮದ ಉಳಿವಿಗಾಗಿ ‘ಅಡ್ಡ ಗೂಡೆಯಲ್ಲಿ ದೀಪ ಇಟ್ಟಂತೆ ‘ ಮತ್ತದೆ ಪುರಾಣದ ಮೊರೆಹೋಗಿ ಇವರನ್ನು ” ಹರಿಜನ ” ಎಂದು ಕರೆದ ಗಾಂಧೀಜಿ ಅವರು ಒಂದಷ್ಟು ಇಂತಹ ಮನಸ್ಸುಗಳಿಗೆ ಧರ್ಮ ಹಾಗೂ ರಾಷ್ಟ್ರ ಪ್ರೇಮಿಗಳಾಗುತ್ತಾರೆ. ಇದಕ್ಕೆಲ್ಲ ಕಾರಣ ಭಾರತವೇ ಶಾಶ್ವತ ಅಸ್ಪೃಶ್ಯತೆಗೆ ಒಳಗಾಗಿರುವುದು. ನಿಜ ಅರ್ಥದಲ್ಲಿ ಭಾರತವೇ ಒಂದು ಅಸ್ಪೃಶ್ಯತೆಯಿಂದ ತುಂಬಿರುವ ರಾಷ್ಟ್ರ.

ಪ್ರಪಂಚದಲ್ಲಿ ಅತ್ಯಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಭಾರತ ದೇಶ ತನ್ನ ಒಡಲ್ಲಿ ಆಚರಣೆ ಮಾಡಿಕೊಳ್ಳುತ್ತಿರುವ ಅಸ್ಪೃಶ್ಯತೆ ಎಂಬ ಕಳಂಕದಿಂದ ಶತಶತಮಾನಗಳಿಂದಲೂ ಕಳೆದುಕೊಂಡದ್ದು ಅಪಾರ – ಪಡೆದುಕೊಂಡದ್ದು ಅಲ್ಪ.

ಆದರೆ , ಸ್ಪೃಶ್ಯ ಹಾಗೂ ಅಸ್ಪೃಶ್ಯತೆಯ ಹಿನ್ನೆಲೆಯಿಂದ ಏನೆಲ್ಲಾ ಅಪಾರವಾಗಿ ಕಳೆದುಕೊಳ್ಳಲು ಸಿದ್ಧವಾಗಿರುವ ಭಾರತ, ಅಸ್ಪೃಶ್ಯತೆಯ ಕೊಳಕಿನಿಂದ ಯಾವುದೇ ಕಾರಣಕ್ಕೂ ಹೊರಬರಲು ಮಾತ್ರ ಸಿದ್ಧವಿಲ್ಲ.

ಆ ವಿಷಯದಲ್ಲಿ ಮಾತ್ರ ಕಾಲಕಾಲಕ್ಕೆ ಇನ್ನೂ ಹೆಚ್ಚು ಹೆಚ್ಚು ಪಡೆದುಕೊಳ್ಳುತ್ತಿದೆ. ಆ ಮೂಲಕ ಶಾಶ್ವತವಾಗಿ ಸೊರಗುತ್ತಿದೆ. ಅಸ್ಪೃಶ್ಯತೆಯನ್ನು ತೊಲಗಿಸುವ ನಿರ್ಧಾರಕ್ಕೆ ಮಾತ್ರ ಭಾರತದ ಸ್ಪೃಶ್ಯ ಮನುಷ್ಯರ ಮನ – ಅವರು ವಾಸಿಸುವ ನೆಲೆ- ಪೂಜಿಸುವ ದೇವರು- ಆಚರಿಸುವ ಸಂಪ್ರದಾಯಗಳು ಹಾಗೂ ಮನೆಗಳು ಇಂದಿಗೂ ಸಹ ಮುಕ್ತವಾಗಿ ಬರಲು ಸಾಧ್ಯವೇ ಆಗುತ್ತಿಲ್ಲ. ಏಕೆಂದರೆ ಭಾರತೀಯರಿಗೆ ಇತಿಹಾಸದ ಬಹುದೊಡ್ಡ ಪರಂಪರೆ ಹೇಗಿದಿಯೋ… ಅದಕ್ಕಿಂತಲೂ ಹೆಚ್ಚಿನ ಸಂಸ್ಕೃತಿಯ ಪರಂಪರೆ ಜ್ಞಾನದಿಂದ ಇರುವುದು ಮಾತ್ರ ” ನೀನು ಅಸ್ಪೃಶ್ಯ – ನಾನು ಸ್ಪೃಶ್ಯ” ಎಂಬ ಬಹುದೊಡ್ಡ ಮಾನವ ವಿರೋಧಿ ಬದುಕಿನ ಸಿದ್ಧಾಂತ.

ಈ ಹಿನ್ನೆಲೆಯಿಂದ ಬಹುದೊಡ್ಡ ಮಾನವ ಸಂಪತ್ತನ್ನು ಹೊಂದಿರುವ ಭಾರತ ಪಾರಂಪರಿಕವಾಗಿ ಕಳೆದುಕೊಂಡಿದ್ದೇ ಹೆಚ್ಚು. ಹೀಗೆ ಶತಶತ ಮಾಲ್ ಗಳಿಂದ ಕಳೆದುಕೊಂಡ ಅಮೂಲ್ಯ ಬೌದ್ಧಿಕತೆಯನ್ನು ಹಿಂದಿನ ಪ್ರಜಾಪ್ರಭುತ್ವ ಭಾರತದಲ್ಲಿಯೂ ಪಡೆದುಕೊಳ್ಳುವ ಹಾಗೆ ಮಾಡುತ್ತಿರುವುದೇ ಭಾರತದ ಸಂಸ್ಕೃತಿಯಾಗಿದೆ.

ವಿಶೇಷವೆಂದರೆ, ಭಾರತದಲ್ಲಿ ಅಸ್ಪೃಶ್ಯತೆಯ ವಿರುದ್ಧ ಅಂಬೇಡ್ಕರ್ ಅವರು ಬರೆದು, ಈ ದೇಶಕ್ಕೆ ಅರ್ಪಿಸಿ, ಪ್ರಜಾಪ್ರಭುತ್ವ ಭಾರತದ ಆಧಾರ ಸ್ತಂಭವಾಗಿ ಆಳ್ವಿಕೆ ಮಾಡುತ್ತಿರುವ ಸಂವಿಧಾನದ ಆಧಾರದ ಮೇಲೆ ಅಸ್ಪೃಶ್ಯತೆಯ ವಿರುದ್ಧ ಮಾತನಾಡುವವರು ಶಾಶ್ವತವಾಗಿ ಮಾನಸಿಕ ಅಸ್ಪೃಶ್ಯತೆಗೆ ಒಳಗಾಗಿರುವವರ ಪಾರಂಪರಿಕ ಅಜ್ಞಾನದ ಶಾಶ್ವತ ಬಲೆಗೆ ಸಿಲುಕಿ – ಆ ಬಲೆಯಿಂದ ಹೊರಬರಲಾಗದೆ ಮೂಲೆಗುಂಪಾದರು.

ಮುಂದುವರೆದು ಅವರು ಪಾರಂಪರಿಕವಾಗಿ ಪ್ರತಿಪಾದನೆ ಮಾಡಿಕೊಂಡೇ ಬರುತ್ತಿರುವ ಅಧರ್ಮವನ್ನೇ ಧರ್ಮವೆಂದು ಪ್ರತಿಪಾದನೆ ಮಾಡುವವರ ಅಜ್ಞಾನದೊಳಗೆ ಸಿಲುಕಿ ಧರ್ಮ ದ್ರೋಹಿಗಳೂ ಆದರು. ಈ ಹಂತದಲ್ಲಿಯೂ ಇವರ ಶಾಶ್ವತ ಅಸ್ಪೃಶ್ಯತೆ ಆಚರಣೆ ಮಾಡುವ ಮನಸ್ಸು ನಮ್ಮದು ಈ ಹಂತದಲ್ಲಿ ನಿಜವಾಗಲೂ ‘ ಧರ್ಮ ದ್ರೋಹ” ಎಂದು ಹೇಳಲೇ ಇಲ್ಲ. ಏಕೆಂದರೆ ಇವರಿಗೆ ನಿಜ ಮನುಷ್ಯತ್ವದ ಧರ್ಮದ ಸ್ಪಷ್ಟ ಪರಿಕಲ್ಪನೆಯೇ ಗೊತ್ತಿಲ್ಲ.

ಆದರೆ, ದೇವರು ಕೇಂದ್ರಿತ ಧರ್ಮ ಹಾಗೂ ಧಾರ್ಮಿಕ ಕೇಂದ್ರಿತ ಪುರಾಣದ ಹಿನ್ನೆಲೆಯಿಂದ ಅಸ್ಪೃಶ್ಯತೆಯನ್ನು ಸಮರ್ಥನೆ ಮಾಡಿಕೊಂಡವರು ದೇವರುಗಳಾಗಿ ಮೆರೆದಾಡಿದರು. ಇದೆ ಭಾರತದ ಶಾಶ್ವತ ಅಸ್ಪೃಶ್ಯತೆಯ ವಾಸ್ತವದ ಚಿತ್ರಣ. “ಅಸ್ಪೃಶ್ಯತೆ” ಆಚರಣೆಗೆ” ದೇವರು ಹಾಗೂ ದೇವಾಲಯ” ಯಾವಾಗ ಅಜ್ಞಾನದಿಂದ ಪ್ರವೇಶ ಪಡೆಯಿತೋ ಅಂದಿನಿಂದಲೇ ಅಸ್ಪೃಶ್ಯತೆ ಹಾಗೂ ಅಸ್ಪೃಶ್ಯತೆ ಆಚರಣೆ ಪ್ರಶ್ನಾತೀತವಾಯಿತು.

” ಭಾರತ ” ಕಾಯಕ” “ಸಮಸಮಾಜ ” ಧರ್ಮದಲ್ಲಿ ಪಡೆದುಕೊಂಡದ್ದು ಅಲ್ಪ – ಕಳೆದುಕೊಂಡದ್ದು ಅಪಾರ. ಆದರೆ , ಭಾರತ “ಧಾರ್ಮಿಕ ಹಿನ್ನೆಲೆ ಅಧರ್ಮನೀತಿ ಹಾಗೂ ಅಸಮಾಜ ” ಪ್ರತಿಪಾದನೆಯಿಂದ ಪಡೆದುಕೊಂಡಿದ್ದು ಅಲ್ಪ – ಕಳೆದುಕೊಂಡದ್ದು ಅಪಾರ- ಅಪಾರ “. ಈ ಕಳೆದುಕೊಳ್ಳುವ ಪ್ರಕ್ರಿಯೆ ಇಂದಿಗೂ ಸಹ ಹೆಚ್ಚು ಹೆಚ್ಚು ಚಾಲ್ತಿಯಲ್ಲಿದೆ. ಅಸ್ಪೃಶ್ಯರು

ಭಾರತದ ಸಂವಿಧಾನದ ಆದಾರದ ಮೇಲೆ ಅಸ್ಪೃಶ್ಯತೆಯನ್ನು ಸಂವಿಧಾನಾತ್ಮಕ ಹಿನ್ನೆಲೆಯು ರೂಪಿಸಿದ ಕಾನೂನುಗಳ ಆಧಾರದ ಮೇಲೆ ಸಂಪೂರ್ಣವಾಗಿ ನಾಶಪಡಿಸಿ – ಮಾನಸಿಕವಾದ ಸದೃಢ ಹಿನ್ನೆಲೆಯ ಭಾರತ ಹಾಗೂ ಭಾರತೀಯರನ್ನಾಗಿಸಲು ಸಮಸ್ತ ಭಾರತೀಯರಿಗೂ ಸಮನದ ಹಕ್ಕನ್ನು ನೀಡಿ ಎಲ್ಲರನ್ನೂ ದೈಹಿಕ ಹಾಗೂ ಮಾನಸಿಕ ಹಿನ್ನೆಲೆಯಿಂದ ಸದೃಢ ಸ್ಪೃಶ್ಯವನ್ನಾಗಿಸಿದ್ದು ಬಾಬಾಸಾಹೇಬ್ ಅಂಬೇಡ್ಕರ್ ಅವರು ಒಡಲಾಳದಿಂದ ಬರೆದ ನಮ್ಮ ಭಾರತ ಸಂವಿಧಾನ ಮಾತ್ರ. ಅಸ್ಪೃಶ್ಯರು

ಇಂತಹ ಸ್ವಾತಂತ್ರ್ಯ ಸಮಾನತೆ ಹಾಗೂ ಭಾದೃತ್ವವನ್ನು ಪ್ರತಿಯೊಬ್ಬ ಪ್ರಜೆಯಲ್ಲಿಯೂ ಅಪೇಕ್ಷೆ ಪಡುವ ನಮ್ಮ ದೇಶದ ಲಿಖಿತ ಸಂವಿಧಾನದ ಭಾರತವನ್ನು ಸಮಗ್ರ ಐಕ್ಯತೆಯ ಹಿನ್ನೆಲೆಯಿಂದ ನಾವೆಲ್ಲರೂ ಒಗ್ಗಟ್ಟಿನಿಂದ ಭಾರತೀಯರು ಎಂಬ ಮನೋಭಾವನೆಯಿಂದ ಬೌದ್ಧಿಕವಾಗಿ ಕಟ್ಟಬೇಕಾಗಿದೆ. ಪ್ರಪಂಚದ ಇತರ ರಾಷ್ಟ್ರಗಳಿಗೆ ಭಾರತ ಆ ಮೂಲಕ ತನ್ನ ಗಟ್ಟಿತನದ ಸ್ಪೃಶ್ಯತೆ ಹಾಗೂ ಶ್ರೇಷ್ಠತೆಯನ್ನು ಪ್ರಸರಿಸಬೇಕಾಗಿದೆ. ಇದೇ ಬುದ್ಧ- ಬಸವ- ಅಲ್ಲಮ- ಅಂಬೇಡ್ಕರ್ ಅವರುಗಳು ಗ್ರಹಿಸಿದ ನಿಜ ಧರ್ಮದ ಭಾರತ.

ಅಸ್ಪೃಶ್ಯತೆ ಶಾಶ್ವತವಾಗಿ ಭಾರತದಲ್ಲಿ ನಿರ್ಮೂಲನೆ ಆಗದ ಹೊರತು ಭಾರತ ಶ್ರೇಷ್ಠ ಅಥವಾ ಭವ್ಯ- ಸಂಸ್ಕೃತಿಯ ರಾಷ್ಟ್ರ ಎಂದು ಕರೆಸಿಕೊಳ್ಳಲು ಸಾಧ್ಯವಿಲ್ಲ. ಇದನ್ನು ಹೊರತುಪಡಿಸಿ ನಮಗೆ ನಾವೇ ನಮ್ಮ ಸಂಸ್ಕೃತಿ ಭವ್ಯ – ಸುಂದರ- ಪ್ರಪಂಚಕ್ಕೆ ಮಾದರಿ – ಎಂದು ಕರೆದುಕೊಂಡರೆ ಅದು ನೀರಿನ ಮೇಲಿನ ಗುಳ್ಳೆಯೇ ಹೊರತು ಬೇರೇನೂ ಅಲ್ಲ. ಜೊತೆಗೆ ನಮಗೆ ನಾವೇ ಮಾಡಿಕೊಳ್ಳುತ್ತಿರುವ ಆತ್ಮ ವಂಚನೆ ಆ ಮೂಲಕ ಮಾಡುತ್ತಿರುವ ಧರ್ಮ ಹಾಗೂ ರಾಷ್ಟ್ರ ದ್ರೋಹದ ಶಾಶ್ವತ ಕೆಲಸ.

ಭಾರತ ಅಸ್ಪೃಶ್ಯ ಮುಕ್ತ ರಾಷ್ಟ್ರವಾಗುವವರೆಗೂ ಇದನ್ನು ಸಂಸ್ಕೃತಿವಂತ ರಾಷ್ಟ್ರವನ್ನಾಗಿಸಲು ಸಾಧ್ಯವಿಲ್ಲ.

ಇದನ್ನೂ ನೋಡಿ: “ಸಂಘಟನೆ ಹಕ್ಕಿಗೆ ಕೈ ಹಾಕಿದರೆ ಹೋರಾಟ ತೀವ್ರ: ಮೀನಾಕ್ಷಿ ಸುಂದರಂ ಎಚ್ಚರಿಕೆ” Janashakthi Media

Donate Janashakthi Media

Leave a Reply

Your email address will not be published. Required fields are marked *