ಇರಾನ್ ದಾಳಿಗೆ ತೀವ್ರ ವಿರೋಧ; ಭಾರತ ಸರ್ಕಾರ ಖಂಡನೆ ವ್ಯಕ್ತಪಡಿಸಲಿ: ಜಾಗೃತ ನಾಗರಿಕರು

ಬೆಂಗಳೂರು: ಯುಎಸ್ ಮತ್ತು ಇಸ್ರೇಲ್ ಏಕಪಕ್ಷೀಯವಾಗಿ ಇರಾನ್ ಮೇಲೆ ನಡೆಸಿರುವ ಬಾಂಬ್ ಮತ್ತು ಕ್ಷಿಪಣಿ ದಾಳಿಯನ್ನು ಖಂಡಿಸುತ್ತೇವೆ. ಇದು ಇರಾನ್‌ನ ಸಾರ್ವಭೌಮತ್ವ ಮತ್ತು ಸ್ವಾತಂತ್ರ್ಯದ ಮೇಲೆ ನಡೆದ ದಾಳಿಯಾಗಿದೆ. ಭಾರತ

ಯುಎಸ್ ಮತ್ತು ಇಸ್ರೇಲ್ ನ ಯುದ್ಧದಾಹಿತನ ಅನಗತ್ಯವಾಗಿ ಅಮಾಯಕರ ಸಾವಿಗೆ ಕಾರಣವಾಗಿದೆ. ಯುಎಸ್‍ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ನೇತನ್ಯಾಹುಯವರ ಪ್ರತಿಯೊಂದು ಹೇಳಿಕೆ ಅನಾಗರಿಕತೆ ಮತ್ತು ‌ಸಾಮ್ರಾಜ್ಯಶಾಹಿ ಧೋರಣೆಯ ಪ್ರತೀಕವಾಗಿದೆ.

ಅಮೆರಿಕಾ ಮತ್ತು ‌ಇರಾನ್ ಮಧ್ಯೆ ಶಾಂತಿ ಮಾತುಕತೆ‌ ನಡೆಯುತ್ತಿರುವಾಗ ನಡೆಸಿದ ಇವರಿಬ್ಬರ ಈ ಪುಂಡಾಟಿಕೆ ಜಾಗತಿಕವಾಗಿ ತೀವ್ರವಾದ ಸಂಘರ್ಷ ಸೃಷ್ಟಿಸುತ್ತಿದೆ.
ನಾಗರಿಕರ ನೆಲೆಗಳನ್ನು ಗುರಿಯಾಗಿರಿಸಿ ಬಾಂಬ್ ದಾಳಿ ಮಾಡಿ 165 ಜನ ಮಕ್ಕಳನ್ನು ಕೊಂದ ಘಟನೆಯು ಇವರ ದಾಳಿಯ ಹಿಂದಿರುವ ಜನಾಂಗ ನಾಶದ ದುಷ್ಟ ಸಂಚನ್ನೂ ಬಯಲಿಗೆಳೆದಿದೆ.

ಇದನ್ನೂ ಓದಿ: ಸಿಪಿಎಂ ಹಿರಿಯ‌ ಮುಖಂಡ ನಿತ್ಯಾನಂದಸ್ವಾಮಿ ನಿಧನ; ಮಾ. 3ರಂದು ಅಂತಿಮ ಗೌರವ ಸಲ್ಲಿಕೆ

ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೆಲವು ದಿನಗಳ ಹಿಂದಷ್ಟೇ ಇಸ್ರೇಲ್‌ ಗೆ ಭೇಟಿ ನೀಡಿ ನೇತಾನಾಹ್ಯು ಅವರ ಜೊತೆ ಕೈ ಕುಲಕಿದ್ದರು. ಇದಾದ ಕೂಡಲೇ ಇರಾನ್ ಮೇಲಿನ ಈ ದಾಳಿ ನಡೆದಿದೆ.

ಹಾಗಿದ್ದರೆ ನಮ್ಮ ಪ್ರಧಾನಿಯವರಿಗೆ ಈ ದಾಳಿಯ ಮುನ್ಸೂಚನೆ ಇರಲಿಲ್ಲವೇ ಎನ್ನುವ ಪ್ರಶ್ನೆ ಕಾಡುತ್ತದೆ. ಭಾರತ ಸರ್ಕಾರವು ಇರಾನ್ ಮೇಲಿನ ದಾಳಿಯನ್ನು ಖಂಡಿಸಬೇಕು ಮತ್ತು ಯುದ್ಧವನ್ನು ತಕ್ಷಣವೇ ನಿಲ್ಲಿಸಬೇಕೆಂದು ಆಗ್ರಹಿಸಬೇಕು ಎಂದು ಕೋರುತ್ತೇವೆ.

ಈ ಹೇಳಿಕೆಯನ್ನು ಜಾಗೃತ ನಾಗರಿಕರು ಕರ್ನಾಟಕದ ಡಾ. ಕೆ.ಮರುಳ ಸಿದ್ದಪ್ಪ, ಡಾ. ಜಿ.ರಾಮಕೃಷ್ಣ, ಡಾ.ವಿಜಯಾ, ಪ್ರೊ.ಎಸ್.ಜಿ.ಸಿದ್ದರಾಮಯ್ಯ, ವಿಮಲಾ.ಕೆ.ಎಸ್., ಬಿ. ಶ್ರೀಪಾದ ಭಟ್, ಡಾ.ಬಂಜಗೆರೆ ಜಯಪ್ರಕಾಶ್, ಟಿ.ಸುರೇಂದ್ರ ರಾವ್, ಡಾ.ವಸುಂಧರಾ ‌ಭೂಪತಿ, ಡಾ.ಎನ್. ಗಾಯತ್ರಿ, ಮಾವಳ್ಳಿ ಶಂಕರ್‌, ಜಾಣಗೆರೆ ವೆಂಕಟರಾಮಯ್ಯ, ರುದ್ರಪ್ಪ‌ ಹುನಗವಾಡಿ, ಡಾ.ಮೀನಾಕ್ಷಿ ಬಾಳಿ, ಇಂದಿರಾ ಕೃಷ್ಣಪ್ಪ, ವಾಸುದೇವ ಉಚ್ಚಿಲ, ಎನ್.ಕೆ.ವಸಂತ‌ರಾಜ್, ಡಾ.ಬಿ.ಆರ್‌.‌ಮಂಜುನಾಥ್., ಡಾ. ಎಚ್. ಜಿ. ಜಯಲಕ್ಷ್ಮಿ ನೀಡಿದ್ದಾರೆ.

ಇದನ್ನೂ ನೋಡಿ: ಪಿಚ್ಚರ್‌ ಪಯಣ – 168 | ವಯಸ್ಕರಿಗೂ ಪ್ರಿಯವಾಗುವ ಮಕ್ಕಳ ಕಿರುಚಿತ್ರ `ದಿ ರೆಡ್‌ ಬಲೂನ್‌’ | ಮ ಶ್ರಿ ಮುರಳಿ ಕೃಷ್ಣ

Donate Janashakthi Media

Leave a Reply

Your email address will not be published. Required fields are marked *