17ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ (BIFFes) 2026ರ ಜನವರಿ 29 ರಿಂದ ಫೆಬ್ರವರಿ 6 ರವರೆಗೆ ನಡೆಯುತ್ತಿದೆ. ‘ಸ್ತ್ರೀ ಎಂದರೇ ಅಷ್ಟೇ ಸಾಕೆ’ ಎಂಬ ಮಹಿಳಾ ಸಬಲೀಕರಣದ ಥೀಮ್‌ನೊಂದಿಗೆ, 60ಕ್ಕೂ ಹೆಚ್ಚು ದೇಶಗಳ ಸುಮಾರು 110ಕ್ಕೂ ಹೆಚ್ಚು ಚಿತ್ರಗಳನ್ನು ರಾಜಾಜಿನಗರದ ಲುಲು ಮಾಲ್, ಸುಚಿತ್ರಾ ಫಿಲ್ಮ್ ಸೊಸೈಟಿ ಮತ್ತು ಡಾ. ರಾಜ್‌ಕುಮಾರ್ ಭವನದಲ್ಲಿ ಪ್ರದರ್ಶಿಸಲಾಗುತ್ತಿದೆ. ಕೆಲ ಚಿತ್ರಗಳ ಬಗ್ಗೆ ಸಿನಿಮಾಸಕ್ತರಾದ ಎಂ. ನಾಗರಾಜ ಶೆಟ್ಟಿ ಪರಿಚಯಿಸಿದ್ದಾರೆ.
ಬಾಲ್ಯಾವಸ್ಥೆ ದಾಟುವ ಕಾಲದಲ್ಲಿ ಹೊರ ಜಗತ್ತಿನೊಡನೆ ವರ್ತಿಸುವುದನ್ನು ಕಂಡುಕೊಳ್ಳುವ ಚಿತ್ರ. ಅಪ್ಪನ ವ್ಯಕ್ತಿತ್ವ, ಸಂಸಾರದ ಅವಲಂಬನೆ, ಸ್ವಾರ್ಥವನ್ನು ಮೀರಿ ಮತ್ತೊಬ್ಬರೊಡನೆ ನಡೆದುಕೊಳ್ಳುವ ರೀತಿಗಳನ್ನು ವಿವರಗಳಲ್ಲೇ ವಿವರಿಸಲಾಗಿದೆ. ನೈಜೀರಿಯಾದ ಜನರ ಪ್ರಜಾತಂತ್ರದ ಬಯಕೆಯನ್ನು ಹತ್ತಿಕ್ಕುವ ಮಿಲಿಟರಿ/ ಸರ್ವಾಧಿಕಾರಿ ಆಡಳಿತದ ಧೋರಣೆಯನ್ನು ತೋರಿಸುವ ಮೂಲಕ ಕೇವಲ ಅಪ್ಪ,ಮಕ್ಕಳ ಕಥೆಯಾಗದೆ ರಾಜಕೀಯ ಒಳಸುಳಿಗಳನ್ನು ಒಳಗೊಂಡ ಪ್ರತಿರೋಧವೂ ಇದೆ.
Directior: Akinola Davies Country:UK
A Useful Ghost

ಇದನ್ನೂ ಓದಿ : ಕಲಬುರಗಿ | ಪ್ರಜಾಪ್ರಭುತ್ವದ ದಾರಿ ತೋರಿಸುವ ದೀಪವೇ ಸಂವಿಧಾನ – ಶಶಿಕಾಂತ ಉಡಿಕೇರಿ
ವ್ಯಾಕ್ಯೂಮ್ ಕ್ಲೀನರ್ ಒಳಗೆ ಸೇರಿಕೊಂಡ ಪ್ರೇತ ಗಂಡನ ಮೇಲಿನ ಪ್ರೀತಿಯಿಂದ ಅತೀವ ಪ್ರೀತಿ ತೋರಿಸಿ ಅನುಕೂಲಕಾರಿಯಾಗಿರುತ್ತದೆ. ಫ್ಯಾಕ್ಟರಿಯಲ್ಲಿ ಸತ್ತವನ ಪ್ರೇತವೂ ಉಪಕಾರಿಯಾಗುತ್ತದೆ. ಇವೆಲ್ಲವನ್ನೂ ತಮಾಷೆಯಾಗಿ ರೂಪಿಸುವ ನಿರ್ದೇಶಕರು ಥಾಯ್ಲಂಡಲ್ಲಿ 2010ರಲ್ಲಿ ಪ್ರಭುತ್ವದ ವಿರುದ್ಧ ಪ್ರತಿಭಟನೆಯಲ್ಲಿ ಸತ್ತ ಜನರು ಪ್ರೇತಗಳಾಗಿ ಉಳಿದಿರುವುದನ್ನು ಆಕ್ರೋಶದಿಂದ ಹೇಳುತ್ತಾರೆ.ಪ್ರೇತಗಳು ಪ್ರತಿಭಟಿಸುತ್ತವೆ, ಆದರೆ ವ್ಯವಸ್ಥೆಯನ್ನು ಬದಲಿಸುವ ಸಾಮರ್ಥ್ಯ ಅವಕ್ಕಿಲ್ಲ ಎನ್ನುವುದು ಸಾಮಾಜಿಕ ವಿಮರ್ಶೆಯೂ ಆಗುತ್ತದೆ. ರಾಜಕೀಯ ವಿಡಂಬನೆಯನ್ನು ಎಷ್ಟು ಪರಿಣಾಮಕಾರಿಯಾಗಿ ಮಾಡಬಹುದೆನ್ನುವುದಕ್ಕೆ ಈ ಚಿತ್ರ ನಿದರ್ಶನ. ನೋಡಲೇ ಬೇಕಾದ ಚಿತ್ರ.
Director: RATCHAPOM THAILAND
Sound of Falling

ಬಹಳ ಎಚ್ಚರದಿಂದ ನೋಡಬೇಕಾದ ಸಿನಿಮಾ. ಸುಲಭವಾಗಿ ಅರ್ಥ ಆಗುವುದಿಲ್ಲ. ಪಕ್ಕದಲ್ಲಿ Sripad Bhat ಇದ್ದುದರಿಂದ ಸಾಕಷ್ಟು ಒಳಗೆ ಇಳಿಯಿತು. 20 ನೇ ಶತಮಾನದಿಂದ 21 ನೇ ಶತಮಾನದ ವರೆಗೆ ಚಾಚಿರುವ ಅನನುಕ್ರಮಣಿಕೆಯ ಚಿತ್ರ.ನಾನ್ ಲೀನಿಯರ್ ಎಂದು ಬಾಗಿಲುಗಳು, ದಿರಿಸು, ಊಟದ ಮೇಜು, ಪರಿಕರಗಳು, ಕಟ್ಟಡ ಮುಂತಾದವುಗಳಿಂದ ತಿಳಿದುಕೊಳ್ಳಬೇಕು. ನಾಲ್ಕು ತಲೆಮಾರಿನ ಹೆಣ್ಣು ಮಕ್ಕಳನ್ನು ಕೇಂದ್ರವಾಗಿರಿಸಿಕೊಂಡು ಆ ಸಮಯದ ಪಲ್ಲಟಗಳನ್ನು ನಿರೂಪಿಸುತ್ತದೆ. ಹೆಣ್ಣಿನ ಮೇಲೆ,ಮನೆಕೆಲಸದಾಕೆಯ ಮೇಲೆ ಹೊರಿಸುವ ಜವಾಬ್ದಾರಿಗಳು ವರ್ಷಗಳು ಕಳೆದು ಭೂಮಿ, ಕಟ್ಟೆಗಳಲ್ಲಿ ಬದಲಾವಣೆಗಳಾದರೂ ಹೆಚ್ಚು ಬದಲಾವಣೆ ಕಂಡಿಲ್ಲ ಎನ್ನುವುದನ್ನು ಮತ್ತೆ, ಮತ್ತೆ ಮರುಕಳಿಸುವ ದೃಶ್ಯಗಳು ಹೇಳುತ್ತವೆ.ಚಿತ್ರದಲ್ಲಿ ಸಿನಿಮಾ ಪ್ರೇಮಿಗಳು ಕಲಿತುಕೊಳ್ಳಬೇಕಾದುದು ಬೇಕಾದಷ್ಟಿದೆ.
ಇದನ್ನೂ ನೋಡಿ : ಬೀದಿ ನಾಟಕ | ಒಂದನ್ನಾದರೂ ಒತ್ತಿ ಎರಡನ್ನಾದರೂ ಒತ್ತಿ’ Janashakthi Media
