ದಾವಣಗೆರೆ | ಮಣ್ಣಿನ pH ಅರಿವು ಮೂಲಕ ಕೃಷಿಗೆ ಹೊಸ ದಾರಿ: ಗ್ರಾಮೀಣ ಪ್ರತಿಭೆಗೆ ರಾಷ್ಟ್ರ ಪ್ರಶಸ್ತಿಯ ಗರಿ!

ದಾವಣಗೆರೆ: ತೆಲಗಾಂಣದಲ್ಲಿ ನಡೆದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ಭಾಗವಹಿಸಿ ರಾಷ್ಟ್ರ ಮಟ್ಟದ ಪ್ರಶಸ್ತಿ ಪಡೆದು ದಾವಣಗೆರೆಗೆ ಮತ್ತು ರಾಜ್ಯಕ್ಕೆ ಕೀರ್ತಿ ತಂದಿದ್ದಾಳೆ. ಮಣ್ಣಿನಲ್ಲಿ ಪಿಹೆಚ್ ಎಷ್ಟಿರಬೇಕೆಂದು ರೈತರಿಗೆ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಮನವರಿಕೆ‌ ಮಾಡಿ ಸೈ ಎನಿಸಿಕೊಂಡಿದ್ದಾಳೆ. ಇದನ್ನು ಸ್ಥಳೀಯವಾಗಿ ಪ್ರಾತ್ಯಕ್ಷಿಕೆ ಮಾಡಿದ್ದ ವಿದ್ಯಾರ್ಥಿನಿ ಚಿನ್ಮಯಿ ರಾಷ್ಟ್ರ ಮಟ್ಟದಲ್ಲಿ ಯಶಸ್ವಿಯಾಗಿದ್ದಾಳೆ. ವಿದ್ಯಾರ್ಥಿನಿಯ ಈ ಸಾಧನೆಯ ಹಿಂದೆ ಶಾಲಾ ಸಿಬ್ಬಂದಿ ಹಾಗೂ ವಿಜ್ಞಾನ ವಿಷಯದ ಶಿಕ್ಷಕಿ ಶಿಲ್ಪಾ ಜೋಶಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.

ಅದೆಷ್ಟೋ ರೈತರು ಬೆಳೆ ಬೆಳೆಯುವ ಮಣ್ಣಿನಲ್ಲಿ ಪಿಹೆಚ್ (ಪೊಟೆನ್ಶಿಯಲ್ ಆಫ್ ಹೈಡ್ರೋಜನ್) ಎಷ್ಟಿರಬೇಕು, ಇದೆಯೋ ಇಲ್ಲವೋ, ಇಲ್ಲವೇ ತಟಸ್ಥವಾಗಿದೆಯಾ ಎಂದು ತಿಳಿಯದೇ ಬೆಳೆಗಳನ್ನು ಬೆಳೆದು ಕೈ ಸುಟ್ಟುಕೊಳ್ಳುತ್ತಾರೆ. ಈ ರೀತಿ ರೈತರು ಸಂಕಷ್ಟಕ್ಕೆ ಸಿಲುಕಬಾರದು ಎಂದು ದಾವಣಗೆರೆ ತಾಲೂಕಿನ ದೊಡ್ಡರಂಗವ್ವನ ಗ್ರಾಮದಲ್ಲಿರುವ ಶ್ರೀ ಸ್ವಾಮಿ ವಿವೇಕಾನಂದ ಪ್ರೌಢ (ಅನುದಾನಿತ) ಶಾಲೆಯ ವಿದ್ಯಾರ್ಥಿನಿ ಚಿನ್ಮಯಿ ಕೆ. ಇದೇ ವಿಚಾರವಾಗಿ ರಾಷ್ಟ್ರ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ತನ್ನ ಪ್ರಾಜೆಕ್ಟ್ ಪ್ರದರ್ಶನ ಮಾಡಿ ರೈತರಿಗೆ ಸಹಕಾರಿಯಾಗಿದ್ದಾಳೆ.

ಪಿಹೆಚ್ (ಪೊಟೆನ್ಶಿಯಲ್ ಆಫ್ ಹೈಡ್ರೋಜನ್ ) ಬಳಸಿ ಆಹಾರ ಸಂಪನ್ಮೂಲ ವೃದ್ಧಿಸುವ ವಿಷಯದ ಮೇಲೆ ವಿದ್ಯಾರ್ಥಿನಿ ಚಿನ್ಮಯಿ ತೆಲಂಗಾಣದ ಹೈದರಾಬಾದ್​​ನಲ್ಲಿ ನಡೆದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಪ್ರಾಜೆಕ್ಟ್ ಮಾಡಿದ್ದರು.

ಇದನ್ನೂ ಓದಿ : ಬೆಂಗಳೂರು| ಜಂಟಿ ಅಧಿವೇಶನ ಫೆ. 4ರ ವರೆಗೆ ವಿಸ್ತರಣೆ

ವಿದ್ಯಾರ್ಥಿನಿ ಚಿನ್ಮಯಿ ತಮ್ಮ ಹೊಲದಲ್ಲಿ ಮೊದಲ ಪ್ರಯೋಗ ಮಾಡಿ ಮಣ್ಣಿನಲ್ಲಿ ಈ ಪಿಹೆಚ್ ಹೆಚ್ಚು ಕಡಿಮೆ ಇರಬಾರದು ಬದಲಿಗೆ ತಟಸ್ಥವಾಗಿರಬೇಕೆಂದು ರೈತರಿಗೆ ಮನವರಿಕೆ ಮಾಡುವಲ್ಲಿ ಯಶಸ್ವಿಯಾದರು. ಪೊಟೆನ್ಶಿಯಲ್ ಆಫ್ ಹೈಡ್ರೋಜನ್ ಎಂದರೆ ಆಮ್ಲೀಯತೆ – ಪ್ರತ್ಯಾಮ್ಲೀಯತೆ ತೋರಿಸುವ ಮಾಪಕ ಆಗಿತ್ತು. ಈ ಪೊಟೆನ್ಶಿಯಲ್ ಆಫ್ ಹೈಡ್ರೋಜನ್ ಮಣ್ಣಿನಲ್ಲಿ ಎಷ್ಟಿದೆ ಎಂದು ತೋರಿಸಿಕೊಡಲಿದೆ. ದುರಂತ ಎಂದರೇ ಪಿಹೆಚ್ ಎಂದರೇನು ಎಂದು ರೈತರಿಗೆ ಗೊತ್ತಿರಲಿಲ್ಲ ಎಂದರು.

ವಿದ್ಯಾರ್ಥಿನಿ ಹಾಗೂ ವಿಜ್ಞಾನ ವಿಷಯದ ಶಿಕ್ಷಕಿ ಶಿಲ್ಪಾ ಜೋಶಿ ಅವರು ಮೊದಲಿಗೆ ದಾಸವಾಳ ಹೂವು, ಶಂಕಪುಷ್ಪ ಹೂವು, ಕೆಂಪು ಎಲೆ ಕೋಸು, ಬೀಟ್ರೂಟ್ ಉಪಯೋಗಿಸಿ ನೈಸರ್ಗಿಕವಾಗಿ ಸೂಚಕಗಳನ್ನು ತಯಾರು ಮಾಡಿ, ಪಿಹೆಚ್ ಸ್ಟ್ರಿಪ್ (ಗಾಜಿನ ಸ್ಟ್ರೀಪ್) ಗಳಲ್ಲಿ ಮಣ್ಣಿನ‌ ಸಮೇತ ಪ್ರಯೋಗ ಮಾಡಿದಾಗ ಮಣ್ಣಿನಲ್ಲಿರುವ ಆಮ್ಲೀಯತೆ – ಪ್ರತ್ಯಾಮ್ಲೀಯತೆ ಕಂಡು ಹಿಡಿಯಲು ಸಹಕಾರಿ ಆಗಿದೆ. ಬಳಿಕ ರೈತರಿಗೆ ಮಣ್ಣಿನ ಗುಣಗಳ ಬಗ್ಗೆ ತಿಳಿಸಿದ್ದಾರೆ.

ಈ ಪೊಟೆನ್ಶಿಯಲ್ ಆಫ್ ಹೈಡ್ರೋಜನ್ ಮಣ್ಣಿನಲ್ಲಿ ಎಷ್ಟಿದೆ, ಆಮ್ಲೀಯತೆ – ಪ್ರತ್ಯಾಮ್ಲೀಯತೆ ಎಷ್ಟಿದೆ, ಅದು ತಟಸ್ಥವಾಗಿದೆಯೇ ಎಂಬುದನ್ನು ತೋರಿಸಿಕೊಡಲಿದೆ ವಿದ್ಯಾರ್ಥಿನಿ ಚಿನ್ಮಯಿ ಮಾತನಾಡಿ, ಪೊಟೆನ್ಶಿಯಲ್ ಆಫ್ ಹೈಡ್ರೋಜನ್ ಎಂದರೆ ಆಮ್ಲೀಯತೆ – ಪ್ರತ್ಯಾಮ್ಲೀಯತೆ ತೋರಿಸುವ ಮಾಪಕ ಆಗಿತ್ತು ಎಂದರು.

Chinmayi K won national award

ಹೀಗೆ ನೈಸರ್ಗಿಕವಾಗಿ ಮಣ್ಣಿನಲ್ಲಿ ಪಿಹೆಚ್ ಇದೆಯೋ ಇಲ್ಲವೋ ಎಂದು ಕಂಡುಹಿಡಿಯಬಹುದು. ಇದನ್ನು ತೆಲಗಾಂಣದಲ್ಲಿ ಪ್ರಾತ್ಯಕ್ಷಿಕೆ ಮಾಡಿದ ತೋರಿಸಿದ್ದಕ್ಕಾಗಿ ರಾಷ್ಟ್ರ ಮಟ್ಟದ‌ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ರಾಷ್ಟ್ರ ಮಟ್ಟದ ಪ್ರಶಸ್ತಿ ಸಿಕ್ಕಿದೆ ದಾಸವಾಳದ ರಸವನ್ನು ಮಣ್ಣಿನಲ್ಲಿ ಬೆರೆಸಿದಾಗ ಆಮ್ಲೀಯತೆ ಇದ್ದರೆ ಕೆಂಪು ಬಣ್ಣಕ್ಕೆ ತಿರುಗುತ್ತದೆ, ಪ್ರತ್ಯಾಮ್ಲೀಯತೆ ಇದ್ದರೆ ಹಳದಿ ಇಲ್ಲ, ಹಸಿರು ಬಣ್ಣಕ್ಕೆ ತಿರುಗುತ್ತದೆ. ತಟಸ್ಥ ಎಂದರೇ ಯಾವುದೇ ಬಣ ಬದಲಾಗಲ್ಲ ಎಂದು ಹೇಳಿದರು.

ಪಿಹೆಚ್ ಎಂದರೇನು ಎಂದು ಕೆಲ ರೈತರಿಗೆ ಗೊತ್ತಿರಲಿಲ್ಲ, ನಾವು ಅದನ್ನು ತಿಳಿಸಿಕೊಡುವ ಕೆಲಸ ಮಾಡಿದ್ದೇವೆ.‌ ಪ್ರದರ್ಶನದಲ್ಲಿ ತೆಲಂಗಾಣ, ಆಂಧ್ರ ಪ್ರದೇಶ, ಕರ್ನಾಟಕ, ಕೇರಳ ಸೇರಿದಂತೆ ಆರು ರಾಜ್ಯಗಳಿಂದ ಒಟ್ಟು 210 ಜನ ಸ್ಫರ್ಧಿಗಳು ಭಾಗವಹಿಸಿದ್ದರು ಎಂದರು. ಪ್ರದರ್ಶನದಲ್ಲಿ ‌ದಿನಕ್ಕೆ 15 ಸಾವಿರ ರೈತರು ಮಕ್ಕಳು ಆಗಮಿಸುತ್ತಿದ್ದರು, ಅವರು ನಮ್ಮ ಪ್ರಾಜೆಕ್ಟ್ ನೋಡಿ ನಮ್ಮಿಂದ ಮಾಹಿತಿ ಪಡೆದು ಪ್ರಯೋಗ ಮಾಡಿದ್ದಾರೆ.

ತಮ್ಮ ಹೊಲದ ಮಣ್ಣು ಪ್ರಯೋಗ ಮಾಡಿದ್ದ ವಿದ್ಯಾರ್ಥಿನಿ ಚಿನ್ಮಯಿ ಮಣ್ಣು ಪರೀಕ್ಷಿಸಿ ಹೆಚ್ಚಿನ ಮಾಹಿತಿ ಪಡೆಯುವಂತೆ ತನ್ನ ತಂದೆಯನ್ನು ಕೃಷಿ ವಿಜ್ಞಾನ ಕೇಂದ್ರಕ್ಕೆ (ಕೆವಿಕೆ) ಕಳಿಸಿದ್ದರು.‌

ಕೆಲ ರೈತರಿಗೆ ಮಣ್ಣನ್ನು ಪರೀಕ್ಷಿಸಿ ಬೆಳೆ ಬೆಳೆಯುವುದು ಗೊತ್ತಿರಲಿಲ್ಲ. ಇದಕ್ಕೆ ನಾವು ನೈಸರ್ಗಿಕವಾಗಿ ಪರಿಹಾರ ಕಂಡುಹಿಡಿದಿದ್ದೇವೆ. “ಸರಿಯಾಗಿ ಪಿಹೆಚ್ (ಪೊಟೆನ್ಶಿಯಲ್ ಆಫ್ ಹೈಡ್ರೋಜನ್) ಬಳಸಿ ಆಹಾರ ಸಂಪನ್ಮೂಲ ವೃದ್ಧಿಸುವ ವಿಷಯದ ಮೇಲೆ ಪ್ರಯೋಗ ಮಾಡಿದ್ದೇವೆ. ಜಮೀನಿನ ಮಣ್ಣಿನಲ್ಲಿ ಪಿಹೆಚ್ ತಿಳಿದು ಬೆಳೆ ಬೆಳೆಯಿರಿ ಎಂದು ರೈತರಿಗೆ ಅರ್ಥ ಮಾಡಿಸುವ ಹಿನ್ನೆಲೆಯಲ್ಲಿ ಈ ವಿಷಯವನ್ನು ತೆಗೆದುಕೊಂಡಿದ್ದೆವು ಎಂದು ತಿಳಿಸಿದರು.

ಚಿನ್ಮಯಿ ದಾವಣಗೆರೆಯಲ್ಲಿ ನಡೆದ ತಾಲೂಕು ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ಮೊದಲ ಸ್ಥಾನ, ದಾವಣಗೆರೆಯಲ್ಲಿ ನಡೆದ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಮೊದಲ ಸ್ಥಾನ. ಮೊದಲಿಗೆ ನಮ್ಮ ಹೊಲದ ಮಣ್ಣು ಪರೀಕ್ಷೆ ಮಾಡಿಸಿ ಬೆಳೆ ಬೆಳೆಯಲು ಅಲ್ಲಿಂದಲೇ ಶುರು ಮಾಡಿದ್ದು, ಮಣ್ಣಿನಲ್ಲಿ ವ್ಯತ್ಯಾಸ ಇರುವ ಕಾರಣ ತಂದೆಯನ್ನು ಕೆವಿಕೆಗೆ ಕಳಿಸಿದ್ದರು.  ಧಾರವಾಡದಲ್ಲಿ ನಡೆದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಇದೀಗ ತೆಲಗಾಂಣ ರಾಜ್ಯದ ಹೈದರಾಬಾದ್ ನಲ್ಲಿ ನಡೆದ ದಕ್ಷಿಣ ಭಾರತದ ನ್ಯಾಷನಲ್ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ದ್ವೀತಿಯ ಸ್ಥಾನ ಪಡೆದಿದ್ದಾರೆ.

ಶಿಕ್ಷಕಿ ಶಿಲ್ಪಾ ಜೋಶಿ ಮಾತನಾಡಿ, ಸರ್ಕಾರದ ವತಿಯಿಂದ ವಿಜ್ಞಾನ ವಸ್ತು ಪ್ರದರ್ಶನ ನಡೆಸಲಾಗುತ್ತದೆ. ಅಲ್ಲಿ ಪ್ರತಿ ವರ್ಷ ನಾವು ಭಾಗವಹಿಸುತ್ತೇವೆ. ತಂತ್ರಜ್ಞಾನ ವಿಷಯ ಬದಲು ಮಣ್ಣನ್ನು ಆಧಾರವಾಗಿಟ್ಟುಕೊಂಡು ಪ್ರಾಜೆಕ್ಟ್ ಮಾಡಿದ್ವಿ, ಮಣ್ಣಿನ ಗುಣವನ್ನು ಅರಿಯಲು ಕೆಲ ರೈತರಿಗೆ ಅರಿವು ಇರಲ್ಲ, ಆದ್ದರಿಂದ ನಾವು ದಾಸವಾಳ ಹೂವು, ಶಂಕಪುಷ್ಪ ಹೂವು, ಕೆಂಪು ಎಲೆ ಕೋಸು, ಬೀಟ್ರೂಟ್ ಉಪಯೋಗಿಸಿ ನಾವು ನೈಸರ್ಗಿಕವಾಗಿ ಸೂಚಕಗಳನ್ನು ತಯಾರು ಮಾಡಿದ್ದೆವು ಎಂದರು.

ಹೈಡ್ರೋಜಿಯಸ್ ಎಂಬ ಹೂವು ಮಣ್ಣಿನಆಮ್ಲೀಯತೆ – ಪ್ರತ್ಯಾಮ್ಲೀಯತೆ ಗುಣಕ್ಕೆ ತಕ್ಕಂತೆ ತನ್ನ ಹೂವಿನ ಬಣ್ಣವನ್ನು ಬದಲಾಯಿಸುತ್ತದೆ. ಅಂದರೆ ಬಣ್ಣಕ್ಕೆ ತಕ್ಕಂತೆ ಹೂವು ಬಿಡುತ್ತದೇ ಎಂಬ ವಿಚಾರ ಇದರಿಂದ ಗೊತ್ತಾಯಿತು. ಈ ಎಲ್ಲವನ್ನು ಪ್ರದರ್ಶನದಲ್ಲಿ ಪ್ರದರ್ಶನ ಮಾಡಿದ್ದೆವು. ಅಲ್ಲದೆ ರಾಜ್ಯದ ಪ್ರತಿ ಜಿಲ್ಲೆಗಳಿಂದ ಮಣ್ಣು ಸಂಗ್ರಹ ಮಾಡಿ ತಮ್ಮ ಪ್ರತಿ ಬೆಳೆಗಳಿಗೆ ಬೇರೆ ಪಿಹೆಚ್ ಬೇಕಾಗುತ್ತದೆ ಎಂದು ರೈತರಿಗೆ ಮನವರಿಕೆ ಮಾಡಿ ಕೊಟ್ಟೆವು ಪಿಹೆಚ್ ಸ್ಟ್ರಿಪ್​​ಗಳಲ್ಲಿ ಪ್ರಯೋಗ ಮಾಡಿದಾಗ ಮಣ್ಣಿನಲ್ಲಿ ಇರುವ ಆಮ್ಲೀಯತೆ – ಪ್ರತ್ಯಾಮ್ಲೀಯತೆ ಕಂಡು ಹಿಡಿಯಲು ಸಹಕಾರಿಯಾಯಿತು. ಬಳಿಕ ರೈತರಿಗೆ ಮಣ್ಣಿನ ಗುಣಗಳ ಬಗ್ಗೆ ತಿಳಿಸಿದಾಗ ಕೆವಿಕೆಗೆ ತೆರಳಲು ಮನವಿ ಮಾಡಿದ್ವಿ. ಅಲ್ಲಿ ಮಾಹಿತಿ ಪಡೆದರೆ ಉತ್ತಮ ಬೆಳೆ ಬೆಳೆದು ಲಾಭ ಗಳಿಸಬಹುದು ಎಂದು ಮನವರಿಕೆ ಮಾಡಿದ್ವಿ. ನಮಗೆ ಎರಡನೇ ಸ್ಥಾನ ದೊರೆತಿದೆ ಎಂದು ಸಂತಸ ವ್ಯಕ್ತಪಡಿಸಿದರು.

ವಿದ್ಯಾರ್ಥಿನಿ ದಾವಣಗೆರೆ ತಾಲೂಕಿನ ಹೊಸ ಬುಳ್ಳಾಪುರ ಗ್ರಾಮದ ನಿವಾಸಿಯಾಗಿದ್ದಾಳೆ.‌ ತಂದೆ ಕೂಡ ರೈತರಾಗಿದ್ದು, ತನ್ನ ಹೊಲದಿಂದಲೇ ಈ ಪ್ರಾತ್ಯಕ್ಷಿಕೆ ಮಾಡಿದ್ದು ವಿಶೇಷ.‌ ರೈತರ ಜಮೀನಿನ ಮಣ್ಣಿನಲ್ಲಿ ಪೊಟೆನ್ಶಿಯಲ್ ಆಫ್ ಹೈಡ್ರೋಜನ್ ತಟಸ್ಥವಾಗಿರಬೇಕು, ಹೆಚ್ಚು ಕಡಿಮೆ ಇದ್ದರೆ ರೈತ ಬೆಳೆದ ಬೆಳೆ ನೆಲಕಚ್ಚುವ ಸಾಧ್ಯತೆ ಹೆಚ್ಚಿರಲಿದೆ ಎಂದು ಈ ಪ್ರಾತ್ಯಕ್ಷಿಕೆಯಿಂದ ತಿಳಿದು ಬಂದಿದೆ. ಪೊಟೆನ್ಶಿಯಲ್ ಆಫ್ ಹೈಡ್ರೋಜನ್ ಇದೆಯೋ ಇಲ್ಲವೋ ಎಂದು ರೈತರು ಅರಿತು ಬೆಳೆಗಳನ್ನು ಬೆಳೆಯುವುದು ಉತ್ತಮ. ದೊಡ್ಡರಂಗವ್ವನಹಳ್ಳಿರುವ ವಿವೇಕಾನಂದ ಪ್ರೌಢ ಶಾಲೆಗೆ, ಇಡೀ ಜಿಲ್ಲೆಗೆ ಕೀರ್ತಿ ತಂದ ಚಿನ್ಮಯಿಗೆ ಶಿಕ್ಷಣ ಇಲಾಖೆ ಶಬ್ಬಾಶ್ ಗಿರಿ ಕೊಟ್ಟಿದೆ. ಇತ್ತ ಚಿನ್ಮಯಿ ಹೆತ್ತವರು ಹರ್ಷ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ನೋಡಿ : ಬೆಂಗಳೂರು ಚಲನಚಿತ್ರೋತ್ಸವ| ಪ್ಯಾಲೆಸ್ತೀನ್‌ ಸಿನಿಮಾಗಳಿಗೆ ನಿರ್ಬಂಧ – ಪ್ರಕಾಶ್ ರಾಜ್ ಆಕ್ರೋಶ Janashakthi Media

Donate Janashakthi Media

Leave a Reply

Your email address will not be published. Required fields are marked *