ಬೆಂಗಳೂರು: ನನ್ನ ಆಹಾರ ನನ್ನ ಆಯ್ಕೆ. ನಾನು ನಾನ್‌ವೆಜ್ ತಿನ್ನುವುದು ನನ್ನ ವೈಯಕ್ತಿಕ ವಿಚಾರ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಾಂಸಾಹಾರ ಸೇವಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಹುಟ್ಟಿಕೊಂಡಿರುವ ವಿವಾದದ ಕುರಿತು ನಟ ಡಾಲಿ ಧನಂಜಯ್ ಸ್ಪಷ್ಟನೆ ನೀಡಿದ್ದಾರೆ.
ಅದರ ಮಧ್ಯೆ ಜಾತಿ, ಸಮುದಾಯಗಳನ್ನು ಎಳೆದು ತರುವುದು ನನಗೆ ತುಂಬಾ ಬೇಜಾರಾಯ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ : ಬಲವಂತದ ಹೆಚ್ಚುವರಿ ಸಮಯ – ಗುಪ್ತ ಶೋಷಣೆ ವಿರುದ್ಧ ಎಂಟಿಎಂ ಸ್ವಯಂಸೇವಕರ ಪ್ರತಿಭಟನೆ
ಇದು ಸಂಪೂರ್ಣವಾಗಿ ಅನಾವಶ್ಯಕ ಚರ್ಚೆ ನಾನು ನಾನ್‌ವೆಜ್ ತಿನ್ನುತ್ತೇನೆ ಅಂದ್ರೆ ಅದರಲ್ಲಿ ಸಮಸ್ಯೆ ಏನು? ಅದರ ಜೊತೆ ಬೇರೆ ಕಲಾವಿದರ ಹೆಸರನ್ನು ಜೋಡಿಸಿ, ಬೇರೆ ಬೇರೆ ಆಂಗಲ್ ಕೊಡೋದು ಸರಿಯಲ್ಲ. ನಾನು ಆಗಾಗ ಪಾರ್ಟಿ ಮಾಡುತ್ತಿದ್ದೆ, ಸ್ಮೋಕಿಂಗ್ ಮಾಡುತ್ತಿದ್ದೆ, ಈಗ ಅದನ್ನೆಲ್ಲ ನಿಲ್ಲಿಸಿದ್ದೀನಿ. ನನಗೆ ಸೀ-ಫುಡ್ ಇಷ್ಟ. ಅದು ನನ್ನ ವೈಯಕ್ತಿಕ ಆಯ್ಕೆ ಎಂದು ಧನಂಜಯ್ ಸ್ಪಷ್ಟಪಡಿಸಿದರು.
ನಾನು 10 ರಿಂದ 15 ಬಿರಿಯಾನಿ ಶಾಪ್‌ಗಳನ್ನು ಆರಂಭಿಸಿದ್ದೇನೆ. ಈ ವಿಷಯ ಇಷ್ಟೊಂದು ದೊಡ್ಡ ಚರ್ಚೆಗೆ ಕಾರಣವಾಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ನನ್ನ ಆಹಾರ ಪದ್ಧತಿ ಬಗ್ಗೆ ಮಾತನಾಡುವ ಉದ್ದೇಶ ನನಗಿಲ್ಲ. ನಾನು ಬಹಳ ಸರಳವಾಗಿ ನನ್ನ ಗೆಳೆಯನ ಹೋಟೆಲ್‌ಗೆ ಹೋಗಿ ಪ್ರೀತಿಯಿಂದ ಊಟ ಮಾಡಿ ಬಂದೆ. ಡಿಸ್ಕಷನ್ ನೋಡಿದಾಗ ಶಾಕ್ ಆಯ್ತು ಎಂದು ಹೇಳಿದ್ದಾರೆ.
ನಾನು ಯಾವ ಸ್ಥಳದಲ್ಲಿ, ಯಾವ ಮಾಂಸ ತಿಂದೆ ಎಂಬುದನ್ನು ಹೇಳಲು ಹೋಗಲ್ಲ. ಚರ್ಚೆ ಆರಂಭಿಸಿದವರಿಗೆ ಉತ್ತರ ಕೊಟ್ಟಂತೆ ಆಗುತ್ತೆ. ಅದು ನನಗೆ ಇಷ್ಟ ಇಲ್ಲ. ನಾನು ಯಾವತ್ತೂ ಲಿಂಗ ಹಾಕಿಕೊಂಡು ಊಟ ಮಾಡುವವನಲ್ಲ. ನಾನು ಏನೇ ಮಾಡಿದರೂ ಪ್ರಶ್ನೆಗಳು ಬರುತ್ತವೆ. ಅದರಲ್ಲಿ ನನಗೆ ಖುಷಿಯೂ ಇದೆ ಎಂದು ಹೇಳಿದ್ದಾರೆ.
ನಟನಾಗಿ ಮಾತ್ರವಲ್ಲ, ನಿರ್ಮಾಪಕನಾಗಿ ನಾನು ಚಿತ್ರರಂಗಕ್ಕಾಗಿ ಕೆಲಸ ಮಾಡುತ್ತಿದ್ದೇನೆ. ನಾನು ನೂರಾರು ಕೋಟಿ ವ್ಯಾಪಾರ ಮಾಡಿದ ದೊಡ್ಡ ಪ್ರೊಡ್ಯೂಸರ್ ಅಲ್ಲ. ಆದರೆ ಸಿನಿಮಾಗಳಿಗಾಗಿ ನಿರಂತರವಾಗಿ ಶ್ರಮಿಸುತ್ತಿದ್ದೇನೆ. ಅದರ ಬಗ್ಗೆ ಯಾಕೆ ಚರ್ಚೆ ಆಗುತ್ತಿಲ್ಲ? ನನ್ನ ಊಟದ ವಿಚಾರವೇ ಯಾಕೆ ಚರ್ಚೆ? ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ನೋಡಿ : ಬೀದಿ ನಾಟಕ | ಫಾರ್ ಸೇಲ್ – ರಚನೆ,ನಿರ್ದೇಶನ:ಡಾ.ಟಿ ಎಚ್ ಲವಕುಮಾರ್Janashakthi Media
