ಮಂಗಳೂರು: ನಾಲ್ವರು ಯುವಕರು ಕೂಲಿ ಕೆಲಸಕ್ಕಾಗಿ ಜಾರ್ಖಂಡದಿಂದ ಬಂದಿದ್ದ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸಿದ ಸಂಬಂಧ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುಳೂರಿನ ಸಾಗರ್, ಧನುಷ್, ರತೀಶ್, ಮೋಹನ್ ಆರೋಪಿಗಳು ಎಂದು ಗುರುತಿಸಲಾಗಿದೆ.
ಜಾರ್ಖಂಡದ ದಿಲ್ ಜಾನ್ ಅನ್ಸಾರಿ ಎಂಬ ವ್ಯಕ್ತಿ ಕಳೆದ 10-15 ವರ್ಷಗಳಿಂದ ವರ್ಷದಲ್ಲಿ ಐದಾರು ತಿಂಗಳು ಕೂಲಿ ಕೆಲಸ ಮಾಡಲು ಮಂಗಳೂರಿಗೆ ಬರುತ್ತಿದ್ದರು.
ಇದನ್ನೂ ಓದಿ: ಇಂದೋರ್ ಸಾವುಗಳು ಮತ್ತು ಆಳುವ ಪಕ್ಷದ ನಾಚಿಕೆಗೇಡಿತನ
ನಾಲ್ವರು ಯುವಕರು ಅವರನ್ನು ತಡೆದು ‘ನೀನು ಬಾಂಗ್ಲಾದೇಶದ ಪ್ರಜೆ, ನಿನ್ನ ಬಳಿ ಇರುವ ದಾಖಲೆ ತೋರಿಸು’ ಎಂದು ಆರೋಪಿಸಿದ್ದಾರೆ. ಆ ವ್ಯಕ್ತಿಯನ್ನು ಕೆಟ್ಟ ಪದಗಳಲ್ಲಿ ಟೀಕಿಸಿ, ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಸ್ಥಳೀಯ ಒಬ್ಬ ಮಹಿಳೆ ಬಂದು ಆ ವ್ಯಕ್ತಿಯ ರಕ್ಷಣೆ ಮಾಡಿದ್ದಾರೆ. ವಲಸೆ ಕಾರ್ಮಿಕ ಭಯದಿಂದ ದೂರು ನೀಡಲು ಹಿಂದೇಟು ಹಾಕಿ, ಊರಿಗೆ ತೆರಳಿದ್ದು, ಸ್ಥಳೀಯರು ಈ ವಿಷಯವನ್ನು ಪೊಲೀಸರ ಗಮನಕ್ಕೆ ತಂದಿದ್ದಾರೆ.
ದಿಲ್ ಜಾನ್ ವಿವರ ಕಲೆ ಹಾಕಿದ್ದು, ಅವರು ಭಾರತೀಯ ಎಂಬುದು ದೃಢಪಟ್ಟಿದೆ. ಆರೋಪಿಗಳ ವಿರುದ್ಧ ಕಲಂ 307 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಶೀಘ್ರ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ನೋಡಿ: ಸದಾಚಾರ ಅಂದ್ರೆ ರೇಪ್ ಆ್ಯಂಡ್ ಮರ್ಡರ್ ಮಾಡಿದವರಿಗೆ ಹೂ ಹಾರ ಹಾಕುವುದೇ? – ಎಂ.ಜಿ.ಹೆಗಡೆ Janashakthi Media
