ಕಾಫಿ ಫಾರ್ಮರ್ಸ್ ಫೆಡರೇಷನ್ ರಾಷ್ಟ್ರಾಧ್ಯಕ್ಷರಾಗಿ ಎಚ್.ಆರ್. ನವೀನ್ ಕುಮಾರ್ ಆಯ್ಕೆ

ಬೆಂಗಳೂರು: ಕಾಫಿ ಫಾರ್ಮರ್ಸ್ ಫೆಡರೇಷನ್ ಆಫ್ ಇಂಡಿಯಾ (CFFI) ನ ಅಖಿಲ ಭಾರತ ಅಧ್ಯಕ್ಷರಾಗಿ ಎಚ್.ಆರ್. ನವೀನಕುಮಾರ್ ಆಯ್ಕೆಯಾಗಿದ್ದಾರೆ.

ಕಾಫಿ ಫಾರ್ಮರ್ಸ್ ಫೆಡರೇಷನ್ ಆಫ್ ಇಂಡಿಯಾ CFFI ನ ಕೇಂದ್ರ ಸಮಿತಿ ಸಭೆಯು ಬೆಂಗಳೂರಿನಲ್ಲಿ ನಡೆಯಿತು. ಈ ಸಭೆಯಲ್ಲಿ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ.

ಸಭೆಯಲ್ಲಿ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ರಸಾದ್, ಉಪಾಧ್ಯಕ್ಷರಾದ ಡಿ.ರವೀಂದ್ರನ್, ಕೇರಳ ರೈತ ಸಂಘದ ಪ್ರಧಾನ ಕಾರ್ಯದರ್ಶಿ ವಲ್ಸನ್ ಪನೋಳಿ, ತಮಿಳುನಾಡು ಕಾಫಿ ಬೆಳೆಗಾರರ ಸಂಘದ ಅಧ್ಉಕ್ಷರಾದ ಚಲ್ಲಯ್ಯ ಮತ್ತು ಕಾರ್ಯದರ್ಶಿ ಯೋಹನನ್, ಅರಕುವ್ಯಾಲಿ ಆದಿವಾಸಿ ಕಾಫಿ ಬೆಳೆಗಾರರ ಸಂಘದ ಚಿನ್ನಬಾಬು ಹಾಗು ಕರ್ನಾಟಕಪ್ರಾಂತ ರೈತ ಸಂಘದ ಅಧ್ಯಕ್ಷರಾದ ಯು.ಬಸವರಾಜ, ಪ್ರಧಾನ ಕಾರ್ಯದರ್ಶಿ ಟಿ.ಯಶವಂತ ಕರ್ನಾಟಕ ಕಾಫಿ ರೈತರ ಸಂಘದ ಡಾ.ದುರ್ಗಪ್ರಸಾದ್ ಮುಂತಾದವರು ಉಪಸ್ಥಿತರಿದ್ದರು. ಸಭೆಯ ಅಧ್ಯಕ್ಷತೆಯನ್ನು ಡಿ.ರವೀಂದ್ರನ್ ವಹಿಸಿದ್ದರು.

ಈ ಸಭೆಯಲ್ಲಿ ಕಾಫಿ ಬೆಳೆಗಾರರ ಸಮಸ್ಯೆಗಳ ಕುರಿತು ಚರ್ಚಿಸಿ, ಹಲವು ಹಂತಗಳ ಹೋರಾಟಗಳು ಮತ್ತು ಕಾರ್ಯಕ್ರಮಗಳನ್ನು ರೂಪಿಸಲು ತೀರ್ಮಾನಿಸಲಾಗಿದೆ ಎಂದು ಪ್ರಧಾನ ಕಾರ್ಯದರ್ಶಿ ಕೃಷ್ಣಪ್ರಸಾದ್ ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *