ಕೋಗಿಲು ಮನೆಗಳ ತೆರವು ಪ್ರಕರಣ | ನಿರಾಶ್ರಿತರ ಪರ ಹೋರಾಡಿದ್ದ ಹೋರಾಟಗಾರರ ಮೇಲೆ ಎಫ್‌ಐಆರ್‌

ಬೆಂಗಳೂರು : ಬೆಂಗಳೂರಿನ ಯಲಹಂಕ ಸಮೀಪದ ಕೋಗಿಲು  ನಿವಾಸಿಗಳ ತೆರವು ಘಟನೆ ಖಂಡಿಸಿ ಹೋರಾಟ ನಡೆಸಿದ್ದ ಹೋರಾಟಗಾರರ ಮೇಲೆ ಎಫ್‌ಐಆರ್‌ ದಾಖಲಾಗಿದೆ.

ಜನಪರ ವೇದಿಕೆಯ ಮುಖಂಡರಾದ ಗೌರಮ್ಮ, ಮನೋಹರ್, ದಲಿತ ಸಂಘಟನೆಯ ಮುಖಂಡ ಮರಿಯಪ್ಪ, ದುಡಿಯುವ ಜನರ ಪರ ವೇದಿಕೆ ಮುಖಂಡ ಇಸಾಕ್‌ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಮೂಲಗಳು ಹೇಳಿವೆ.

ಇದನ್ನೂ ಓದಿ : ಬಿಕ್ಲು ಶಿವ ಪ್ರಕರಣ: ಬೈರತಿ ಬಸವರಾಜ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ – ಸರ್ಕಾರ ಹೈಕೋರ್ಟ್‌ಗೆ ಮನವಿ

ಕಾರ್ಯಾಚರಣೆ ವೇಳೆ  ಅನಧಿಕೃತವಾಗಿ ನಿರ್ಮಿಸಿದ್ದ ಮನೆ ತೆರವು ಸ್ಥಳಕ್ಕೆ ಬಂದು, ಹೋರಾಟವನ್ನು ನಡೆಸಿ ಬಿಗುವಿನ ವಾತಾವರಣ ಸೃಷ್ಟಿಸಿದ್ದ ಆರೋಪದಡಿ ನಾಲ್ವರ ವಿರುದ್ಧ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

 

ಬೆಂಗಳೂರು | ಏಕಾಏಕಿ ಸ್ಥಳಕ್ಕೆ ಬಂದು ಬಿಗುವಿನ ವಾತಾವರಣ ಸೃಷ್ಟಿ : ನಾಲ್ವರ ವಿರುದ್ಧ ಎಫ್‌ಐಆರ್ ದಾಖಲು

ಡಿ.20 ಬೆಳಿಗ್ಗೆ 11.30ರ ಸುಮಾರಿಗೆ ಏಕಾಏಕಿ ಸ್ಥಳಕ್ಕೆ ಬಂದಿದ್ದ ನಾಲ್ವರು, ಸ್ಥಳದಲ್ಲಿದ್ದವರನ್ನು ಶಾಲಾ ಆವರಣಕ್ಕೆ ಕರೆದೊಯ್ದು ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಸಿದ್ದರು ಎಂದು ಹೆಡ್‌ ಕಾನ್‌ಸ್ಟೆಬಲ್‌ ಶಂಕರ್‌ನಾಯ್ಕ್‌ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಲಾಗಿದೆ ಸರ್ವೆ ನಂ. 99ರಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ಮನೆಗಳು ತೆರವು ಕಾರ್ಯಾಚರಣೆ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ಸ್ಥಳದಲ್ಲಿ ಬಂದೋಬಸ್ತ್‌ ಕೆಲಸಕ್ಕೆ ನನ್ನನ್ನು ನೇಮಿಸಲಾಗಿತ್ತು, ಗೌರಮ್ಮ ಮತ್ತು ಮನೋಹರ್‌ ಅವರು ಬಂದು ಇಲ್ಲಿನ ಜನರನ್ನು ಸೇರಿಸಿ ಹೋರಾಟವನ್ನು ನಡೆಸಿದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಬಡವರನ್ನು ಬೀದಿಗೆ ತಂದಿರುವ ಸರಕಾರದ ನಡೆಯನ್ನು ಖಂಡಿಸಿ ಪ್ರತಿಭಟನೆ ಮಾಡಿದರೆ, ನಿವೇಶನ ನೀಡಿ ಎಂದು ಕೇಳಿದರೆ ದೂರು ದಾಖಲಿಸುವ ಸರಕಾರದ ನಡೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಹೋರಾಟಗಾರರ ಕತ್ತನ್ನು ಹಿಸುಕುವ ಕ್ರಮ ಎಂದು ಜನಪರ ಸಂಘಟನೆಗಳು ಆರೋಪಿಸಿವೆ.

ಇದನ್ನೂ ನೋಡಿ : ಬಿಗ್ ಡಿಬೇಟ್ : ಕೋಗಿಲು ಪ್ರಕರಣ | ವಾಸವಿದ್ದವರು ಯಾರು? ಹೊರ ರಾಜ್ಯದವರೇ? ಹೊರ ದೇಶದವರೇ?Janashakthi Media

Donate Janashakthi Media

Leave a Reply

Your email address will not be published. Required fields are marked *