ಬೆಂಗಳೂರು: ನಗರದ ಮಡಿವಾಳದ ಸಂಧ್ಯಾ ಥಿಯೇಟರ್ನಲ್ಲಿ ಮಹಿಳಾ ಶೌಚಾಲಯದಲ್ಲಿ ಯುವಕನೊಬ್ಬ ರಹಸ್ಯ ಕ್ಯಾಮರಾ ಇಟ್ಟಿರುವ ಆಘಾತಕಾರಿ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.
ಶೌಚಾಲಯಕ್ಕೆ ತೆರಳಿದ್ದ ಮಹಿಳೆಯರು ಮತ್ತು ಯುವತಿಯರು ಕ್ಯಾಮರಾ ಕಂಡು ಆಘಾತಕ್ಕೊಳಗಾಗಿದ್ದಾರೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಸ್ಥಳೀಯರು ಕ್ಯಾಮರಾ ಇಟ್ಟಿದ್ದ ಆರೋಪಿಯನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಇದನ್ನೂ ಓದಿ: ಆರೋಗ್ಯದ ವ್ಯಾಪಾರೀಕರಣದ ವಿರುದ್ದ ಜನತೆ ಸಂಘಟಿತರಾಗಬೇಕು : ಮುನೀರ್ ಕಾಟಿಪಳ್ಳ
ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದು, ತನಿಖೆಯನ್ನು ಪ್ರಾರಂಭಿಸಿದ್ದಾರೆ. ಯುವಕ ಯಾರು..?ಈ ಕೃತ್ಯದ ಹಿಂದಿನ ಉದ್ದೇಶವೇನು, ಈ ಹಿಂದೆ ಇಂತಹ ಕೃತ್ಯಗಳನ್ನು ನಡೆಸಿದ್ದಾನೆಯೇ ಅಥವಾ ಇದು ಮೊದಲ ಬಾರಿಯೇ ಎಂಬುದರ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೆ ಬೇರೆಡೆಯೂ ಈ ರೀತಿ ಕೃತ್ಯವೆಸಗಿದ್ದಾನಾ ಎಂಬುದರ ಕುರಿತು ತನಿಖೆ ನಡೆಸುತ್ತಿದ್ದಾರೆ.
ಮೊದಲಿಗೆ ಯುವತಿಯೊಬ್ಬಳು ಕ್ಯಾಮರಾ ಇರೋದನ್ನು ಗಮನಿಸಿದ್ದಾಳೆ. ನಂತರ ಸಿಬ್ಬಂದಿಗೂ ವಿಚಾರ ಗೊತ್ತಾಗಿದೆ. ಎಲ್ಲರೂ ಸೇರಿ ಪೊಲೀಸರಿಗೆ ವಿಷಯ ತಿಳಿಸಿ ಯುವಕನ ಮೇಲೆ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ನೋಡಿ: ಸಾವಿತ್ರಿಬಾಯಿ ಫುಲೆ ಹುಟ್ಟಿದ ದಿನ : ಅವ್ವ ಕವಿತೆ | ಕವಿ : ಆದಿತ್ಯ , ವಾಚನ : ರಾಗಿಣಿ ಮಾಲೂರು Janashakthi Media
