ಹಾವೇರಿ : ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯಿದೆ-೨೦೦೫ ((MGNREGA) ಮರುಸ್ಥಾಪಿಸಿ ಬಲವರ್ಧನೆಗೊಳಿಸಲು ಆಗ್ರಹಿಸಿ ಹಾಗೂ ವಿಕಸಿತ ಭಾರತ-ಗ್ಯಾರಂಟಿ ಫಾರ್ ರೋಜಗಾರ್ ಅ್ಯಂಡ್ ಆಜೀವಿಕ ಮಿಷನ್ (ಗ್ರಾಮೀಣ) ಕಾಯಿದೆ-೨೦೨೫ (VB-GRAMG) ರದ್ದುಗೊಳಿಸಲು ಒತ್ತಾಯಿಸಿ ಇಂದು ದಿನಾಂಕ: 29.12.2025 ರಂದು ಹಾವೇರಿ ನಗರದ ಶ್ರೀ ಮುರುಘರಾಜೇಂದ್ರ ಮಠದ ಆವರಣದಿಂದ ಮೆರವಣಿಗೆ ನಡೆಸಿ ಮಾನ್ಯ ಸಂಸದರಾದ ಶ್ರೀಯುತ ಬಸವರಾಜ ಬೊಮ್ಮಾಯಿ ಅವರ ಜನಸಂಪರ್ಕ ಕಛೇರಿಯಲ್ಲಿ ಆಪ್ತ ಕಾರ್ಯದರ್ಶಿಗಳ ಮೂಲಕ ಭಾರತ ಸರಕಾರಕ್ಕೆ ಮನವಿ ಕೊಡಲಾಯಿತು.
ಇದನ್ನೂ ಓದಿ : ಬೆಂಗಳೂರು | ಕೋಗಿಲು ಲೇ ಔಟ್ ಸ್ಲಂ ಮನೆಗಳಿಗೆ ಸೂಕ್ತ ಪುನರ್ವಸತಿ ಕಲ್ಪಿಸಿ – ಎ.ಎ.ರಹೀಮ್
ನಂತರ ಜಿಲ್ಲಾಡಳಿತ ಭವನದ ಎದುರು ಧರಣಿ ಸತ್ಯಾಗ್ರಹ ನಡೆಸಿ ಮಾನ್ಯ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀಮತಿ ರುಚಿ ಬಿಂದಲ್ ಹಾಗೂ ಮಾನ್ಯ ಹೆಚ್ಚವರಿ ಜಿಲ್ಲಾಧಿಕಾರಿಗಳಾದ ಡಾ. ಎಲ್ ನಾಗರಾಜ್ ಅವರ ಮೂಲಕ ಮಾನ್ಯ ರಾಷ್ಟ್ರಾಧ್ಯಕ್ಷರು ಮತ್ತು ಮಾನ್ಯ ಪ್ರಧಾನಮಂತ್ರಿಗಳಿಗೆ ಮನವಿ ಕೊಡಲಾಯ್ತು.

ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದ ಪ್ರತಿಭಟನಾಕಾರರನ್ನುದ್ದೇಶಿಸಿ ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ, ಕರ್ನಾಟಕ ರಾಜ್ಯ ರೈತ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ಸಾಮಾಜಿಕ ಹೋರಾಟಗಾರರಾದ ಮಂಜುನಾಥ ಕರ್ಜಗಿ, ನರೇಗಾ ಕೂಲಿಕಾರ್ಮಿಕ ಸಂಘಟನೆಯ ಜಿಲ್ಲಾ ಮುಖಂಡರಾದ ದಾದಾಪೀರ್ ತಿಳವಳ್ಳಿ, ಚನಬಸಪ್ಪ ಕೊಂಬಳಿ, ಗುತ್ತೆಮ್ಮ ಸುಣಗಾರ, ಕವಿತಾ ದುಂಡಸಿ, ಲಲಿತಮ್ಮ ಮಠದ, ನಾಗರಾಜ ಹಾವನೂರು ಮಾತನಾಡಿದರು.
ಪ್ರತಿಭಟನೆಯ ನೇತೃತ್ವವನ್ನು ಎಸ್ಎಫ್ಐ ಜಿಲ್ಲಾ ಅಧ್ಯಕ್ಷರಾದ ಬಸವರಾಜ ಎಸ್, ನರೇಗಾ ಕೂಲಿಕಾರ್ಮಿಕ ಸಂಘಟನೆಯ ಜಿಲ್ಲಾ ಮುಖಂಡರಾದ ಮಾಲತೇಶ ಕಮಾಟಿ, ಸಚಿನ್ ಬೂದಿಹಾಳ, ನಾಗರಾಜ ಬಿದರಿ, ಮಂಜುನಾಥ ಸಣ್ಣಿಂಗಣ್ಣವರ, ನಾಗರಾಜ ಮಳ್ಳೂರ, ನಾಗಮ್ಮ ಮಲ್ಲಳ್ಳಿ, ಗುಡ್ಡಪ್ಪ ಬೆನ್ನೂರು, ಭೀಮಪ್ಪ ದೊಣ್ಣೇರ, ಚನ್ನಬಸಪ್ಪ ಮಲ್ಲಾಪೂರ, ಕುಬೇರಪ್ಪ ಕಚವಿ, ಹನುಮಂತಪ್ಪ ಪೂಜಾರ ವಹಿಸಿದ್ದರು. ಜಿಲ್ಲೆಯ ವಿವಿಧ ತಾಲೂಕುಗಳಿಂದ ಸಾವಿರಾರು ಜನ ನರೇಗಾ ಕೂಲಿಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ನೋಡಿ : ಉದ್ಯೋಗ ಖಾತ್ರಿ | ಮನರೇಗಾ ಬದಲು ‘ವಿ.ಬಿ-ಜಿ ರಾಮ್ ಜಿ’ ಯಾಕೆ? 125 ದಿನ ಕೆಲಸ ಸಾಧ್ಯವೆ? Janashakthi Media
