ವಿಜಯಪುರ: ಭ್ರಷ್ಟಾಚಾರ, ಲಂಚಗುಳಿತ, ಅಧಿಕಾರಿ, ಸಿಬ್ಬಂದಿ ಅದಕ್ಷತೆ, ಪಿತೂರಿ, ಅವ್ಯವಸ್ಥೆ ಜಿಲ್ಲೆಯಲ್ಲಿ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ(ಡಿಡಿಪಿಐ) ಕಚೇರಿಯಲ್ಲಿ ಹದಗೆಟ್ಟಿರುವ ಶೈಕ್ಷಣಿಕ ವ್ಯವಸ್ಥೆ ಬಗ್ಗೆ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕರು, ಸಚಿವರು ಧ್ವನಿ ಎತ್ತಿದರು. ವಿಜಯಪುರ
ಡಿಡಿಪಿಐ ಕಚೇರಿಯಲ್ಲಿ ಕೆಳಗಿನ ಸಿಬ್ಬಂದಿ ಸರಿಯಿಲ್ಲ, ‘ಜಿಲ್ಲೆಯಲ್ಲೇ ಅತ್ಯಂತ ಕೆಟ್ಟ ಇಲಾಖೆ ಎಂದರೆ ಅದು ಶಿಕ್ಷಣ ಇಲಾಖೆ, ಚಲೋ ಡಿಡಿಪಿಐಗಳು ಜಿಲ್ಲೆಗೆ ಬರಲು ಒಪ್ಪತ್ತಿಲ್ಲ, ಕಚೇರಿಯಲ್ಲಿ ತಿಮಿಂಗಲಗಳಿವೆ’ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಆರೋಪಿಸಿದರು.
‘ಡಿಡಿಪಿಐ ಕಚೇರಿ ಸುಧಾರಣೆಗೆ ಜಿಲ್ಲಾ ಉಸ್ತುವಾರಿ ಸಚಿವ, ಡಿಸಿ, ಸಿಇಒ ಅವರು ಆದ್ಯತೆ ನೀಡಬೇಕು, ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
ಇದನ್ನೂ ಓದಿ : ಮೈಸೂರು | ‘ನಿರಂತರ ರಂಗ ಉತ್ಸವ’ಕ್ಕೆ ಮೇರಗು ತಂದ ‘ಕೊಡಲ್ಲ ಅಂದ್ರೆ ಕೊಡಲ್ಲ’ ನಾಟಕ ಪ್ರದರ್ಶನ
ಶಿಕ್ಷಣ ಇಲಾಖೆ ಸುಧಾರಣೆಗೆ ಕ್ರಮಕೈಗೊಳ್ಳಲು ಹಿಂಜರಿಯುವುದಿಲ್ಲ’ ‘ಡಿಡಿಪಿಐ ಕಚೇರಿಯಲ್ಲಿ ಬೇರುಬಿಟ್ಟಿರುವ ತಿಮಿಂಗಲಗಳನ್ನು ಎತ್ತಂಗಡಿ ಮಾಡಿ, ‘ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಪ್ರತಿಕ್ರಿಯಿಸಿದರು.
ವಿಜಯಪುರ ಡಿಡಿಪಿಐ ಕಚೇರಿಯಲ್ಲಿರುವ ಕಡತಗಳು ಕಾಣೆಯಾಗುತ್ತಿವೆ ಎಂಬ ದೂರುಗಳು ಕೇಳಿಬಂದಿವೆ. ‘ಜಿಲ್ಲೆಯಲ್ಲಿ 2025-26ನೇ ಸಾಲಿನಲ್ಲಿ 163 ನೂತನ ಶಾಲೆಗಳ ಆರಂಭಕ್ಕೆ ಅನುಮತಿ ನೀಡಿದ್ದೀರಿ, ರಾಜ್ಯದ ಬೇರಾವ ಜಿಲ್ಲೆಯಲ್ಲೂ ಇಷ್ಟೊಂದು ಸಂಖ್ಯೆಯಲ್ಲಿ ಹೊಸ ಶಾಲೆಗಳ ಆರಂಭಕ್ಕೆ ಅನುಮತಿ ನೀಡಿಲ್ಲ. ಈ ಬಗ್ಗೆ ಯಾವ ಕ್ರಮಕೈಗೊಂಡಿದ್ದೀರಿ’ ಎಂದು ವಿಧಾನ ಪರಿಷತ್ ಸದಸ್ಯ ಕೇಶವ ಪ್ರಸಾದ್ ಪ್ರಶ್ನಿಸಿದರು.
‘ಶಿಕ್ಷಣ ಇಲಾಖೆ ಧಾರವಾಡ ಅಪರ ಆಯುಕ್ತರ ಕಚೇರಿ ಅಧಿಕಾರಿಗಳಿಂದ ಹಾಗೂ ಜಿಲ್ಲಾ ಪಂಚಾಯಿತಿ ಮಟ್ಟದಲ್ಲೂ ತನಿಖೆ ನಡೆಯುತ್ತಿದೆ. ಅಂತಿಮ ವರದಿ ಇನ್ನೂ ಬಂದಿಲ್ಲ, ಬಂದ ತಕ್ಷಣ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗುವುದು’ ಎಂದು ಡಿಡಿಪಿಐ ಹೇಳಿದರು.
ಇದನ್ನೂ ನೋಡಿ : ಪರ್ಯಾಯ ರಾಜಕಾರಣದ ಕಹಳೆ ಮೊಳಗಿಸಿದ ಸಾವಿರಾರು ಜನ Janashakthi Media
