ವಿಧಾನ ಪರಿಷತ್ತಿನಲ್ಲಿ ಎರಡು ಮಹತ್ವದ ತಿದ್ದುಪಡಿ ವಿಧೇಯಕಗಳಿಗೆ ಅನುಮೋದನೆ

ಬೆಳಗಾವಿ :ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ ತಿದ್ದುಪಡಿ ವಿಧೇಯಕ ಹಾಗೂ 2025ನೇ ಸಾಲಿನ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ ಕ್ಷೇಮಾಭಿವೃದ್ಧಿ ತಿದ್ದುಪಡಿ ವಿಧೇಯಕಗಳಿಗೆ ವಿಧಾನ ಪರಿಷತ್‌ನಲ್ಲಿ ಇಂದು ಅನುಮೋದನೆ ದೊರೆಯಿತು.

ವಿಧಾನಸಭೆಯಲ್ಲಿ ಅಂಗೀಕೃತ ರೂಪದಲ್ಲಿದ್ದ ಈ ತಿದ್ದುಪಡಿಗಳನ್ನು ವಿಧಾನ ಪರಿಷತ್‌ನಲ್ಲಿ ಪರ್ಯಾವಲೋಚನೆಗೆ ಮಂಡಿಸಲಾಗಿತ್ತು. ಕಾರ್ಮಿಕ ಸಚಿವರಾದ ಸಂತೋಷ್‌ ಲಾಡ್‌ ಅವರು ಪ್ರಸ್ತಾವವನ್ನು ಮಂಡಿಸಿ ತಿದ್ದುಪಡಿಯ ಅಂಶಗಳನ್ನು ಸದನಕ್ಕೆ ವಿವರಿಸಿದರು.

ಇದನ್ನೂ ಓದಿ : ಆನೇಕಲ್ | ಮಣ್ಣು ಕುಸಿದು ಕಾರ್ಮಿಕನೊಬ್ಬ ಸ್ಥಳದಲ್ಲೇ ಮೃತಪಟ್ಟ ಇಬ್ಬರು ಕಾರ್ಮಿಕರು ದುರ್ಮರಣ

ವಿಧೇಯಕದ ಬಗ್ಗೆ ಅಭಿಪ್ರಾಯ ಮಂಡನೆ: ಪರಿಷತ್‌ ಸದಸ್ಯರಾದ ಕೇಶವ ಪ್ರಸಾದ್‌, ರಮೇಶ್‌ ಬಾಬು, ಐವನ್‌ ಡಿಸೋಜ, ಕೆ.ಎಸ್‌. ನವೀನ್‌, ಡಾ. ಧನಂಜಯ ಸರ್ಜಿ, ಗೋವಿಂದರಾಜು, ಎನ್‌ ರವಿಕುಮಾರ್‌, ಟಿ.ಎ. ಶರವಣ, ಸಿ.ಟಿ. ರವಿ ಅವರು ಮಾತನಾಡಿದರು. ಕೆಲವು ಅಂಶಗಳ ಬಗ್ಗೆ ಸ್ಪಷ್ಟೀಕರಣಗಳ ಅಗತ್ಯವಿದೆ ಎಂದು ಹೇಳಿದರು.

ಇದಕ್ಕೆ ಉತ್ತರಿಸಿದ ಸಚಿವ ಲಾಡ್‌ ಅವರು, ಸದಸ್ಯರ ಅಭಿಪ್ರಾಯಗಳಿಗೆ ಸ್ಪಷ್ಟೀಕರಣ ನೀಡಿ, ಹೆಚ್ಚಿನ ಜನರಿಗೆ ಲಾಭ ಆಗೋ ರೀತಿ ಈ ಮಸೂದೆ ತರಲಾಗಿದೆ ಎಂದು ಸದನಕ್ಕೆ ವಿವರಿಸಿದರು. ನಂತರ ವಿಧೇಯಕವು ಅಂಗೀಕೃತಗೊಂಡಿತು.

ಇದನ್ನೂ ನೋಡಿ : ಧರ್ಮಸ್ಥಳ ಪ್ರಕರಣ | ಎಲ್ಲಾ ಹತ್ಯೆಗಳ ಬಗ್ಗೆ ಸಮಗ್ರ ತನಿಖೆಗೆ ಆಗ್ರಹ Janashakthi Media

 

Donate Janashakthi Media

Leave a Reply

Your email address will not be published. Required fields are marked *