ಅಕ್ರಮ ಮರಳು ದಾಸ್ತಾನು: ಭೂ ವಿಜ್ಞಾನ ಅಧಿಕಾರಿಗಳು ದಾಳಿ; ವಶ

ಹೂವಿನಹಡಗಲಿ: ನವೆಂಬರ್‌ 29ರಂದು ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳು ತಾಲ್ಲೂಕಿನ ಕುರುವತ್ತಿ ಬಳಿ ದಾಳಿ ನಡೆಸಿ, ತುಂಗಭದ್ರಾ ನದಿ ತೀರದಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಮರಳನ್ನು ವಶಪಡಿಸಿಕೊಂಡಿದ್ದಾರೆ.

ದಂಧೆಕೋರರು ನದಿ ತೀರದಲ್ಲಿ ಮರಳನ್ನು ಅಕ್ರಮವಾಗಿ ಸಂಗ್ರಹಿಸಿ ಮಾರಾಟಕ್ಕೆ ಕಳಿಸುತ್ತಿದ್ದ ಮಾಹಿತಿ ಆಧರಿಸಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಲ್ಲಿ ಸಂಗ್ರಹವಿದ್ದ ಮರಳನ್ನು ಮೈಲಾರ ಪ್ರವಾಸಿ ಮಂದಿರ ಆವರಣಕ್ಕೆ ಸಾಗಣೆ ಮಾಡಿ ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು | ಹಾಸ್ಯ ನಟ ಉಮೇಶ್ ನಿಧನ : ಅಂತಿಮ ದರ್ಶನಕ್ಕೆ | ರವೀಂದ್ರ ಕಲಾಕ್ಷೇತ್ರದಲ್ಲಿ ವ್ಯವಸ್ಥೆ

ದಂಧೆಕೋರರು ಮರಳು ಸಾಗಣೆಗಾಗಿ ನದಿ ಪಾತ್ರದಲ್ಲಿ ಅನಧಿಕೃತವಾಗಿ ರಸ್ತೆ ನಿರ್ಮಿಸಿಕೊಂಡಿರುವುದನ್ನು ಪತ್ತೆ ಹಚ್ಚಿದ ಅಧಿಕಾರಿಗಳು ಜೆಸಿಬಿ ಯಂತ್ರದಿಂದ ಕಂದಕ ತೋಡಿ ರಸ್ತೆಯನ್ನು ನಾಶಪಡಿಸಿದ್ದಾರೆ.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಚಾಲಿತ ದಳದ ಕೀರ್ತಿ ಕುಮಾರ, ಭೂ ವಿಜ್ಞಾನಿ ಮಲ್ಲಯ್ಯ ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದರು.

ಇದನ್ನೂ ನೋಡಿ: ವಿದೇಶಿಗರಿಗೆ ಸ್ವಾಗತ.. ಸ್ವದೇಶಿ ರೈತ, ಕಾರ್ಮಿಕರಿಗೆ ಅನ್ಯಾಯ – ಮೀನಾಕ್ಷಿ ಸುಂದರಂ Janashakthi Media

Donate Janashakthi Media

Leave a Reply

Your email address will not be published. Required fields are marked *