ನವದೆಹಲಿ :ಕಾಮಿಡಿಯನ್ ಕುನಾಲ್ ಕಾಮ್ರಾ ಅವರು 2023 ರಲ್ಲಿ ಬರೋಬ್ಬರಿ 22,000 ಮಂದಿ ರೈಲು ಅಪಘಾತಗಳಲ್ಲಿ ಸಾವನ್ನಪ್ಪಿದ್ದಾರೆ ಎಂದು ಹೇಳಿಕೆ ಕೊಟ್ಟಿದ್ದರು. ಈ ಸಂಬಂಧ ಭಾರತೀಯ ರೈಲ್ವೆ ಅಧಿಕೃತವಾಗಿ Fact Check ಮಾಡಿದೆ.
ಅಲ್ಲದೇ ಕಾಮ್ರಾ ಅವರ ವೈರಲ್ ಆಗಿರುವ ವಿಡಿಯೋದಲ್ಲಿ ದಾರಿ ತಪ್ಪಿಸುವ ಮಾಹಿತಿಗೆ ಇದೆ. ಇಂತಹ ಮಾಹಿತಿಗಳನ್ನು ಯಾರೂ ಶೇರ್ ಮಾಡಿಕೊಳ್ಳಬೇಡಿ ಎಂದು ಮನವಿ ಮಾಡಿದೆ.
ರೈಲ್ವೆಯ ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಕಾಮ್ರಾ, ತಾವು ಮಾಡಿದ ಹೇಳಿಕೆಗಳಲ್ಲಿ ನಿಖರವಾಗಿ ಯಾವ ಅಂಶಗಳು ತಪ್ಪು ಎಂಬುದಕ್ಕೆ ವಿವರಣೆ ಕೇಳಿದರು. ಇದಕ್ಕೆ ರೈಲ್ವೆ ನೀಡಿದ Fact Checkನಲ್ಲಿ 2023ರಲ್ಲಿ “ಸುಮಾರು 25,000 ಅಪಘಾತಗಳು” ಸಂಭವಿಸಿವೆ ಎಂಬ ಕಾಮ್ರಾ ಹೇಳಿಕೆಯನ್ನು ತಪ್ಪೆಂದು ತಳ್ಳಿಹಾಕಿದೆ. ಅಲ್ಲದೇ ವಾಸ್ತವ ಸಂಖ್ಯೆ 24,678 ಎಂದು ತಿಳಿಸಿದೆ. ಹಾಗೆಯೇ ಕಾಮ್ರಾ ಅವರ “ಸುಮಾರು 22,000 ಸಾವುಗಳು” ಎನ್ನುವ ಹೇಳಿಕೆಗೆ ವಿರುದ್ಧವಾಗಿ, 21,803 ಸಾವುಗಳು ನಡೆದಿವೆ ಎಂದು ರೈಲ್ವೆ ಸ್ಪಷ್ಟಪಡಿಸಿದೆ.
ಪ್ರತಿ ವರ್ಷ 400 ಟ್ರ್ಯಾಕ್ಮೆನ್ ಸಾವನ್ನಪ್ಪುತ್ತಾರೆ ಎನ್ನುವ ಅಂಕಿಯೂ ಒಂದು ವರ್ಷದದ್ದಲ್ಲ, ಹಲವು ವರ್ಷಗಳ ಒಟ್ಟಾರೆ ಸಂಖ್ಯೆ ಎಂದು ತಿಳಿಸಿದೆ.
ಸಿಗ್ನಲ್ ವೈಫಲ್ಯದಿಂದ ಅಪಘಾತಗಳು ಹೆಚ್ಚಿವೆ ಎನ್ನುವ ಹೇಳಿಕೆಗೂ ರೈಲ್ವೆ ತಿರುಗೇಟು ನೀಡಿದ್ದು, 2004-14ರ ಅವಧಿಯಲ್ಲಿ 1,711 ಪ್ರಕರಣಗಳು ದಾಖಲಾಗಿದ್ದರೂ, 2023ರಲ್ಲಿ 34 ಕ್ಕೆ ಮತ್ತು ಈ ವರ್ಷ ಇದುವರೆಗೂ 10 ಕ್ಕೆ ಇಳಿದಿವೆ ಎಂದು ವಿವರಿಸಿದೆ.
ಹೊಸ ಹಳಿಗಳ ನಿರ್ಮಾಣಕ್ಕೆ ಬಜೆಟ್ ನಲ್ಲಿ ಕಡಿಮೆ ಮೊತ್ತ ನಿಗದಿ ಮಾಡಲಾಗಿದೆ ಎಂಬ ಆರೋಪಕ್ಕೂ ಉತ್ತರ ನೀಡಿದ ರೈಲ್ವೆ, 2017-18ರ 8,884 ಕೋಟಿ ರೂಪಾಯಿಯಿಂದ 2022-23ರಲ್ಲಿ 16,558 ಕೋಟಿ ರೂಪಾಯಿಗೆ ಬಜೆಟ್ ಏರಿಕೆಯಾಗಿದೆ ಹಾಗು 2023-24ರಲ್ಲಿ 5,950 ಕಿ.ಮೀ. ಹೊಸ ಹಳಿಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದೆ.
ಕಾಮ್ರಾ-ರೈಲ್ವೆ ನಡುವಿನ ಈ ‘Fact Check ‘ ಬಗ್ಗೆ ಸಾಮಾಜಿಕ ಜಾಲಾತಾಣದಲ್ಲಿ ದೊಡ್ಡ ಚರ್ಚೆ ಆಗುತ್ತುದೆ, ಜನರು ಇದಕ್ಕೆ ವ್ಯಂಗ್ಯಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.
