ಹುಬ್ಬಳ್ಳಿ | ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಾಲ್ಕು ದಿನ ಕ್ರಿಕೆಟ್‌ ಕಲರವ

ಹುಬ್ಬಳ್ಳಿ: ಭಾನುವಾರದಿಂದ ನಾಲ್ಕು ದಿನ ಇಲ್ಲಿನ ರಾಜನಗರದಲ್ಲಿನ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ (ಕೆಎಸ್‌ಸಿಎ) ಕ್ರೀಡಾಂಗಣದಲ್ಲಿ ಕ್ರಿಕೆಟ್‌ ಕಲರವ ಏರ್ಪಡಲಿದೆ.

ಕರ್ನಾಟಕ ಮತ್ತು ಚಂಡೀಗಡ ತಂಡಗಳ ನಡುವೆ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ‘ಬಿ’ ಗುಂಪಿನ ಪಂದ್ಯ ಇಲ್ಲಿ ನಡೆಯಲಿದ್ದು, ಪಂದ್ಯಕ್ಕೆ ಸಕಲ ಸಿದ್ಧತೆ ಪೂರ್ಣಗೊಂಡಿದೆ. ಉಭಯ ತಂಡಗಳು ಶುಕ್ರವಾರವೇ ನಗರಕ್ಕೆ ಆಗಮಿಸಿವೆ. ಶುಕ್ರವಾರ ಮಧ್ಯಾಹ್ನ ಅಭ್ಯಾಸ ಮಾಡಿದ್ದ ಆಟಗಾರರು ಶನಿವಾರ ಬೆಳಿಗ್ಗೆಯೂ ಸುಮಾರು ಎರಡು ಗಂಟೆ ನೆಟ್ಸ್‌ನಲ್ಲಿ ಬೆವರು ಹರಿಸಿದರು.

ಇದನ್ನೂ ಓದಿ : ಪ್ರಭುತ್ವ ಯಂತ್ರ ಮತ್ತು ಅಪಾರ ಹಣ ಬಳಸಿ ಜನತೆಯ ಪ್ರಶ್ನೆಗಳನ್ನು ಮುಳುಗಿಸಿಬಿಡಲಾಗಿದೆ-ಬಿಹಾರ ಚುನಾವಣಾ ಫಲಿತಾಂಶಗಳ ಬಗ್ಗೆ ಸಿಪಿಐ(ಎಂ)

ಸ್ಥಳೀಯ ಕ್ಲಬ್‌ಗಳ ಆಟಗಾರರು, ಕ್ರಿಕೆಟ್‌ ಪ್ರೇಮಿಗಳಿಗೆ ರಾಜ್ಯ ತಂಡದಲ್ಲಿರುವ ತಾರಾ ವರ್ಚಸ್ಸಿನ ಆಟಗಾರರಾದ ಮಯಂಕ್‌ ಅಗರವಾಲ್‌, ಕರುಣ್‌ ನಾಯರ್‌, ಶ್ರೇಯಸ್ ಗೋಪಾಲ್ ಸೇರಿ ಇತರ ಆಟಗಾರರನ್ನು ಹತ್ತಿರದಿಂದ ಕಣ್ತುಂಬಿಕೊಳ್ಳಬಹುದು. ಪಂದ್ಯ ವೀಕ್ಷಣೆಗೆ ಬರುವ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಕ್ರೀಡಾಂಗಣದ ಮೂರನೇ ಪ್ರವೇಶದ್ವಾರದ ಮೂಲಕ ಉಚಿತ ಪ್ರವೇಶ ಇರುತ್ತದೆ. ಶಾಮಿಯಾನ ಹಾಕಿ, ಆಸನಗಳನ್ನು ಅಳವಡಿಸಲಾಗಿದೆ.

ಇಲ್ಲಿನ ಕ್ರೀಡಾಂಗಣದಲ್ಲಿ 2012ರಿಂದ 2024ರವರೆಗೆ ಒಟ್ಟು ಎಂಟು ರಣಜಿ ಪಂದ್ಯಗಳು ನಡೆದಿದ್ದು, ಇದು ಇಲ್ಲಿ ನಡೆಯುತ್ತಿರುವ ಒಂಬತ್ತನೇ ರಣಜಿ ಪಂದ್ಯವಾಗಿದೆ.  2024ರ ಜನವರಿ ನಡೆದಿದ್ದ ಪಂಜಾಬ್‌ ಎದುರಿನ ಪಂದ್ಯದಲ್ಲಿ ಕರ್ನಾಟಕ ತಂಡ ಏಳು ವಿಕೆಟ್‌ಗಳಿಂದ ಜಯಿಸಿತ್ತು. ಅದೇ ವರ್ಷ ಫೆಬ್ರುವರಿ  ನಡೆದ ಚಂಡೀಗಡ ಎದುರಿನ ಪಂದ್ಯ ಡ್ರಾ ಆಗಿತ್ತು.

ಕರ್ನಾಟಕ ತಂಡ: ಮಯಂಕ್‌ ಅಗರವಾಲ್‌ (ನಾಯಕ), ನಿಕಿನ್‌ ಜೋಸ್‌, ಕರುಣ್‌ ನಾಯರ್, ಸ್ಮರಣ್ ರವಿಚಂದ್ರನ್, ಕೆ.ಎಲ್‌. ಶ್ರೀಜಿತ್, ಅಭಿನವ್‌ ಮನೋಹರ್‌, ಶ್ರೇಯಸ್ ಗೋಪಾಲ್, ವಿದ್ವತ್‌ ಕಾವೇರಪ್ಪ, ವಿದ್ಯಾಧರ ಪಾಟೀಲ, ಅಭಿಲಾಷ್‌ ಶೆಟ್ಟಿ, ಎಂ.ವೆಂಕಟೇಶ, ಕೃತಿಕ್ ಕೃಷ್ಣ, ಮೊಹ್ಸಿನ್ ಖಾನ್‌, ಶಿಖರ್ ಶೆಟ್ಟಿ, ಅನೀಶ್‌ ಕೆ.ವಿ.

ಚಂಡೀಗಡ ತಂಡ: ಮನನ್‌ ವೋಹ್ರಾ (ನಾಯಕ), ಅಮೃತ್‌ ಲುಬಾನಾ, ನಿಖಿಲ್ ಠಾಕೂರ್, ಶಿವಂ ಭಾಂಬ್ರಿ, ಅರ್ಜಿತ್ ಸಿಂಗ್, ಅರ್ಜುನ್ ಆಜಾದ್‌, ತರಣ್‌ಪ್ರೀತ್ ಸಿಂಗ್‌, ವಿಷ್ಣು ಕಷ್ಯಪ್‌, ಗೌರವ್‌ ಪುರಿ, ಅನಿರುದ್ಧ ಕನ್ವರ್‌, ಜಗಜಿತ್‌ ಸಿಂಗ್ ಸಂಧು, ಮೋಹಿತ್‌ ಸೋನಿ, ರಾಜನಗಡ ಬಾವಾ, ನಿಶುಂಕ್ ಬಿರ್ಲಾ,  ಅಂಕಿತ್ ಕೌಶಿಕ್‌.

ಮೂರನೇ ದ್ವಾರದಿಂದ ಸಾರ್ವಜನಿಕರಿಗೆ ಪ್ರವೇಶ ಪಂದ್ಯ ವೀಕ್ಷಣೆಗೆ ಆಸನಗಳ ವ್ಯವಸ್ಥೆ ತಾರಾ ವರ್ಚಸ್ಸಿನ ಆಟಗಾರರ ನೋಡಲು ಅವಕಾಶ

ಇದನ್ನೂ ನೋಡಿ : ಕಡಲೆಕಾಯಿ ಪರಿಷೆಗೆ ಶೃಂಗಾರಗೊಳ್ಳುತ್ತಿದೆ ಬಸವನಗುಡಿ |17 ರಿಂದ 21 | Janashakthi Media| #kadalekaiparishe

Donate Janashakthi Media

Leave a Reply

Your email address will not be published. Required fields are marked *