ನವದೆಹಲಿ: ರಾಜಧಾನಿ ದೆಹಲಿಯ ಕೆಂಪು ಕೋಟೆಯ ಬಳಿ ನವೆಂಬರ್ 10ರ ಸಂಜೆ ನಡೆದ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ. ಶಂಕಿತ
ಈ ಸ್ಫೋಟದಲ್ಲಿ ಶಂಕಿತ ವ್ಯಕ್ತಿ ಚಾಲನೆ ಮಾಡುತ್ತಿದ್ದ ಹುಂಡೈ ಐ–20 ಕಾರಿನ ವಿಡಿಯೊ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.
ಇದನ್ನೂ ಓದಿ: ಕೆಂಪು ಕೋಟೆ ಬಳಿ ಕಾರು ಸ್ಪೋಟ: ಸಾವು 10ಕ್ಕೆ ಏರಿಕೆ
ಕೆಂಪುಕೋಟೆ ಮೆಟ್ರೊ ನಿಲ್ದಾಣದ ಸಮೀಪದ ಸಿಗ್ನಲ್ನಲ್ಲಿ ಸೋಮವಾರ ಸಂಜೆ 6.50ರ ಹೊತ್ತಿಗೆ ಹುಂಡೈ ಐ–20 ಕಾರು ಸ್ಫೋಟಗೊಂಡಿತ್ತು. ವೈದ್ಯ ಉಮರ್ ಮೊಹಮ್ಮದ್ ಕಾರನ್ನು ಚಲಾಯಿಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ.
ಕಾರು ಚಲಾಯಿಸಿದ್ದ ವ್ಯಕ್ತಿಯ ಸಿಸಿಟಿವಿ ದೃಶ್ಯಗಳು ಸೆರೆಯಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಫರಿದಾಬಾದ್ನಲ್ಲಿ ಅಪಾರ ಪ್ರಮಾಣದ ಸ್ಫೋಟಕಗಳನ್ನು ವಶಪಡಿಸಲಾಗಿತ್ತು. ಆ ಭಯೋತ್ಪಾದಕ ಗುಂಪಿನೊಂದಿಗೂ ಆತನಿಗೆ ಸಂಪರ್ಕ ಇದೆ ಎನ್ನಲಾಗಿದೆ.
ಇದನ್ನೂ ನೋಡಿ: ಸಕ್ಕರೆ ಇಳುವರಿ ಆಧಾರದ ಮೇಲೆ ಪ್ರತಿ ಟನ್ಗೆ 5500ನೀಡಬೇಕು – ಎನ್ ಎಲ್. ಭರತ್ರಾಜ್ Janashakthi Media
