ನವದೆಹಲಿ | ಬಿಹಾರ ಮೊದಲ ಹಂತದ ಚುನಾವಣೆಯಲ್ಲಿ ಶೇ 64.66 ಮತದಾನ ಪೂರ್ಣ

ನವದೆಹಲಿ: 243 ವಿಧಾನಸಭಾ ಕ್ಷೇತ್ರಗಳಲ್ಲಿ ಗುರುವಾರ 121 ಕ್ಷೇತ್ರಗಳಲ್ಲಿ ಮೊದಲ ಹಂತದ ಚುನಾವಣೆ ನಡೆದಿದ್ದು, ಶೇ 65ರಷ್ಟು (ಶೇ 64.66) ಮತದಾನವಾಗಿದೆ. ನವದೆಹಲಿ

ಬಿಹಾರದಲ್ಲಿ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಅತಿ ಹೆಚ್ಚು ಮತದಾನವಾಗಿದ್ದು, ಪ್ರಜಾಪ್ರಭುತ್ವದ ಗೆಲುವು ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ : ಮುಂಬೈ | ಹೊಸ ಕಟ್ಟಡವು ದುಂದುವೆಚ್ಚದಿಂದ ಮುಕ್ತವಾಗಬೇಕು -ಸಿಜೆಐ ಗವಾಯಿ

ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ ಶೂನ್ಯ ಮೇಲ್ಮನವಿ ಸಲ್ಲಿಕೆಯಾಗಿದೆ. ಇದರ ಜತೆಗೆ 1951ರಿಂದ ಮೊದಲ ಬಾರಿ ಅತಿ ಹೆಚ್ಚು ಮತದಾನವಾಗಿದೆ. ಪರಿಪೂರ್ಣ ಮತದಾರರ ಪಟ್ಟಿ ಮತ್ತು ಮತದಾರರ ಉತ್ಸಾಹಭರಿತ ಭಾಗವಹಿಸುವಿಕೆ, ಪಾರದರ್ಶಕ ಚುನಾವಣಾ ಯಂತ್ರಗಳ ಮೂಲಕ ಪ್ರಜಾಪ್ರಭುತ್ವ ಗೆಲ್ಲುತ್ತದೆ. ಇದು ಆಯೋಗಕ್ಕೆ ಅದ್ಭುತ ಪ್ರಯಾಣವಾಗಿದೆ’ ಎಂದು ಅವರು ಹೇಳಿದ್ದಾರೆ.

ಈ ಹಿಂದೆ 2020ರಲ್ಲಿ ಕೋವಿಡ್‌ ವೇಳೆ ನಡೆದ ಚುನಾವಣೆಯಲ್ಲಿ ಶೇ 57.29ರಷ್ಟು ಮತದಾನ ನಡೆದಿತ್ತು. 2000ರಲ್ಲಿ ಅತಿ ಹೆಚ್ಚು ಶೇ 62.57 ಮತದಾನ ನಡೆದಿತ್ತು ಎಂದು ವರದಿಯಾಗಿದೆ.

ಇನ್ನುಳಿದ 122 ಕ್ಷೇತ್ರಗಳಿಗೆ ನ.11ರಂದು ಚುನಾವಣೆ ನಡೆಯಲಿದ್ದು ನ.14ರಂದು ಮತಎಣಿಕೆ ನಡೆಯಲಿದೆ.

ಇದನ್ನೂ ನೋಡಿ : ಜ್ಞಾನ ಸಾಹಿತ್ಯಕ್ಕೆ ನಿರಂಜನರ ಕೊಡುಗೆ – ಎಂ.ಜಿ.ಹೆಗಡೆ Janashakthi Media

Donate Janashakthi Media

Leave a Reply

Your email address will not be published. Required fields are marked *