ನವದೆಹಲಿ: ಗಾಜಾದ ಮೇಲೆ ಇತ್ತೀಚಿನ ದಾಳಿಯೊಂದಿಗೆ ಅಮೆರಿಕ ಘೋಷಿಸಿದ ಮತ್ತು ಇಸ್ರೇಲ್ ಸ್ವೀಕರಿಸಿದ ಕದನ ವಿರಾಮ ಒಪ್ಪಂದವನ್ನು ಇಸ್ರೇಲ್ ಮತ್ತೆ-ಮತ್ತೆ ಉಲ್ಲಂಘಿಸುತ್ತಿದೆ ಎಂದು ಸಿಪಿಐ(ಎಂ) ಪೊಲಿಟ್ ಬ್ಯೂರೋ ಖಂಡಿಸಿದೆ. ಇಸ್ರೇಲಿ
ಈ ದಾಳಿಯು ಮತ್ತೊಮ್ಮೆ ಕದನ ವಿರಾಮದ ಭಂಗುರತೆಯನ್ನು ಮತ್ತು ಇಸ್ರೇಲ್ನ ಆಕ್ರಮಣಕ್ಕೆ ಲಗಾಮು ಹಾಕುವ ಅಗತ್ಯವನ್ನು ಪ್ರದರ್ಶಿಸುತ್ತದೆ. ಕದನ ವಿರಾಮದ ಡಂಗುರ ಸಾರಿದ ಅಮೆರಿಕ, ಅದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಬೇಕು.
ಇದನ್ನೂ ಓದಿ: ಸಂಬಳ ನೀಡದೆ ಪಿಡಿಒ ಕಿರುಕುಳ: ಗ್ರಂಥಾಲಯ ನೌಕರ ಆತಹತ್ಯೆ
ಇದನ್ನು ಇಸ್ರೇಲ್ನ ಆಕ್ರಮಣಕೋರತೆ ಮತ್ತು ವಿಸ್ತರಣಾವಾದಿ ನೀತಿಗಳನ್ನು ನಿಗ್ರಹಿಸುವ ಮೂಲಕ ಮಾತ್ರ ಸಾಧಿಸಬಹುದು. ಅಂತರರಾಷ್ಟ್ರೀಯ ಸಮುದಾಯ ಕೂಡ ಇಸ್ರೇಲ್ ಒಪ್ಪಂದವನ್ನು ಪಾಲಿಸುವಂತೆ ಒತ್ತಡ ಹೇರಬೇಕು ಎಂದು ಸಿಪಿಐ(ಎಂ) ಆಗ್ರಹಿಸಿದೆ.
ಶಾಶ್ವತ ಶಾಂತಿ ಪ್ಯಾಲೆಸ್ಟೈನ್ ಪ್ರಭುತ್ವಕ್ಕೆ ಮಾನ್ಯತೆ ನೀಡುವುದರಿಂದ ಮತ್ತು ಇಸ್ರೇಲಿಗೆ ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳಿಂದ ಮಿಲಿಟರಿ ಮತ್ತು ರಾಜಕೀಯ ಬೆಂಬಲವನ್ನು ನಿಲ್ಲಿಸಿದರೆ ಮಾತ್ರವೇ ಸಾಧ್ಯ ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಪುನರುಚ್ಚರಿಸಿದೆ.
ಇದನ್ನೂ ನೋಡಿ: ನಿರಂಜನರುಸಾಹಿತ್ಯ ತಾಳಬಹುದಾದ ಎಲ್ಲಾ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದವರು – ಪ್ರತಿಭಾ ಭಟ್ Janashakthi Media
