ರಾಜ್ಯ ಸರಕಾರದ ಮುಟ್ಟಿನ ನೀತಿ – ಜನವಾದಿ ಮಹಿಳಾ ಸಂಘಟನೆ ಸ್ವಾಗತ; ಶೀಘ್ರ ಜಾರಿಗೆ ಒತ್ತಾಯ

ಬೆಂಗಳೂರು: ರಾಜ್ಯದಲ್ಲಿ ಮುಟ್ಟಿನ ರಜಾ ನೀತಿ ಯನ್ನು ಜಾರಿಗೆ ತರಲು ಮತ್ತು ಉದ್ಯೋಗಸ್ಥ ಮಹಿಳೆಯರಿಗೆ ‌ಮಾಸಿಕ ಒಂದು ದಿನ ವೆತನ ಸಹಿತ ಮುಟ್ಟಿನ ರಜಾ ನೀಡಲು ಕರ್ನಾಟಕ ರಾಜ್ಯ ಸಚಿವ ಸಂಪುಟವು ಮಾಡಿರುವ ತೀರ್ಮಾನವನ್ನು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯು ಸ್ವಾಗತಿಸುತ್ತದೆ. ಸರಕಾರ

ಮುಟ್ಟು ಅಸಹ್ಯ ಎಂದು ಮೂಡಿದ್ದ ನಕಾರಾತ್ಮಕ ಭಾವನೆ ಮತ್ತು ಆ ಸಮಯದಲ್ಲಿ ಮಹಿಳೆಯರು ಎದುರಿಸುವ ದೈಹಿಕ‌ ಮಾನಸಿಕ ಒತ್ತಡಗಳನ್ನು ಸ್ವಲ್ಪ ‌ಮಟ್ಟಿಗಾದರೂ ದೂರ ಮಾಡಲು ಇದು ಸಹಾಯವಾಗುತ್ತದೆ ಎಂದು ಸಂಘಟನೆ ಅಭಿಪ್ರಾಯ ಪಡುತ್ತದೆ.

ಇದನ್ನು ಒಂದು ದಿನದ ಬದಲು ಎರಡು ದಿನಗಳಿಗೆ ವಿಸ್ತರಿಸಬೇಕೆಂದು ಅಭಿಪ್ರಾಯ ‌ಪಡುತ್ತದೆ.

ಇದನ್ನೂ ಓದಿ: ಹರ್ಯಾಣ ಎಡಿಜಿಪಿ ಆತ್ಮಹತ್ಯೆಯ ನ್ಯಾಯಾಂಗ ವಿಚಾರಣೆಗೆ ಆಗ್ರಹ -ಪ್ರಧಾನಿಗೆ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಪತ್ರ

ರಾಜ್ಯ ಕಾರ್ಮಿಕ ಇಲಾಖೆಯ ಮೂಲಕ ಜಾರಿಯಾಗಲಿರುವ ಈ ನೀತಿಯನ್ನು ಕಡ್ಡಾಯವಾಗಿ ಎಲ್ಲ ಇಲಾಖೆಗಳು ಮತ್ತು ಸಂಸ್ಥೆಗಳು ಪಾಲಿಸಲು ಅಗತ್ಯವಾದ ನಿಯಮಗಳನ್ನು ರೂಪಿಸಬೇಕೆಂದೂ ಸಂಘಟನೆ ‌ಒತ್ತಾಯಿಸಿದೆ. ಇದನ್ನು ಶಿಕ್ಷಣ ‌ಕ್ಷೇತ್ರಕ್ಕೆ ವಿಸ್ತರಿಸಿ ವಿದ್ಯಾರ್ಥಿನಿಯರಿಗೂ ಅನ್ವಯವಾಗುವಂತೆ ಅಗತ್ಯ ನಿಯಮಗಳನ್ನು ಜಾರಿಗೆ ‌ತರಬೇಕೆಂದು ಆಗ್ರಹಿಸಿದೆ.

ದುಡಿಯುವ ಸ್ಥಳಗಳ ಹಾಗೂ ಸಾರ್ವಜನಿಕ ಶೌಚಾಲಯಗಳಲ್ಲಿ ಪ್ಯಾಡ್ ವಿತರಣೆ ಮತ್ತು ‌ಬರ್ನರ್ ಗಳನ್ನು ಅಳವಡಿಸುವ ಮೂಲಕ ಶುಚಿತ್ವ ಮತ್ತು ಸೌಲಭ್ಯ ಗಳ ಅನುಕೂಲಗಳನ್ನು ಮಾಡಬೇಕು.

ಇದೇ ಸಂದರ್ಭದಲ್ಲಿ ಕೇಂದ್ರ ದ ಮಾಜಿ ಸಚಿವೆ ಸ್ಮೃತಿ ‌ಇರಾನಿಯವರು ಮಹಿಳೆಗೆ ಮುಟ್ಟಿನ ರಜೆ ಕೊಡುವುದನ್ನು ವಿರೋಧಿಸಿ ಅದು ಅಂಗ ವೈಕಲ್ಯವಲ್ಲ ಎಂಬ ಹೇಳಿಕೆ ನೀಡಿರುವುದನ್ನು ಸಂಘಟನೆ ಖಂಡಿಸಿದೆ.

ರಾಜ್ಯ ಸರಕಾರ ನೀತಿಯ ಜಾರಿಗೆ ಅಗತ್ಯವಾದ ಕ್ರಮಗಳನ್ನು ಶೀಘ್ರವಾಗಿ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.

ಇದನ್ನೂ ನೋಡಿ: ಧರ್ಮಸ್ಥಳ | ‘ಒಂದೇ ದಿನ 72 ಶವಗಳ ದಫನ್‌ ʼ – ಪಂಚಾಯತ್ ದಾಖಲೆಗಳಿಂದ ಬಹಿರಂಗ Janashakthi Media #Dharmasthala

Donate Janashakthi Media

Leave a Reply

Your email address will not be published. Required fields are marked *