ಬೆಂಗಳೂರು : ಅಕ್ಟೋಬರ್ 6 ರಂದು ಮಧ್ಯರಾತ್ರಿ ರಾಮನಗರ ಜಿಲ್ಲೆಯ ಬಿಡದಿ ಪ್ರದೇಶದ ಭೀಮನ ಹಳ್ಳಿಯ ಎಲಿಗೆನ್ಸ್ ಲೇಔಟ್ ನಲ್ಲಿ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಸಂಭವಿಸಿದ ಬೆಂಕಿ ಅನಾಹತದಲ್ಲಿ ಮೂರು ಜನ ಮೃತಪಟ್ಟು, ಏಳು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆಗೆ ಸಿಐಟಿಯು ನೇತೃತ್ವದ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ (ರಿ.) ಕಳವಳ ವ್ಯಕ್ತಪಡಿಸಿದೆ.
ಈ ಕುರಿತು ರಾಜ್ಯಾಧ್ಯಕ್ಷ ಬಾಲಕೃಷ್ಣ ಶೆಟ್ಟಿ , ರಾಜ್ಯ ಪ್ರಧಾನಕಾರ್ಯದರ್ಶಿ ಕೆ.ಮಹಾಂತೇಶ್ ಜಂಟಿ ಹೇಳಿಕೆ ನೀಡಿದ್ದು, ಕೋರಮಂಗಲದ ಸನ್ ಲೈನ್ ಸಿಗ್ರೇಚರ್ ಡೆವಲಪರ್ ರವರ ನಿರ್ಮಾಣ ಸಂಸ್ಥೆ ಈ ಕಾಮಗಾರಿಯನ್ನು ತೀವ್ರವಾಗಿ ಗಾಯಗೊಂಡು ವಿಕ್ಟೋರಿಯಾ ಮೂವರು ವಲಸೆ ಕಾರ್ಮಿಕರ ಪರಿಸ್ಥಿತಿ ಚಿಂತಾಜನಕವಾಗಿದ್ದು, ಕಾಮಗಾರಿಯನ್ನು ನಡೆಸುತ್ತಿದ್ದ ಕೋರಮಂಗಲದ ಸನ್ ಲೈನ್ ಸಿಗ್ರೇಚರ್ ಡೆವಲಪರ್ ರವರ ನಿರ್ಮಾಣ ಸಂಸ್ಥೆ ಇದಕ್ಕೆ ಹೊಣೆಯಾಗಿದೆ ಎಂದು ಸಿಐಟಿಯು ಆರೋಪಿಸಿದೆ.
ಮೃತ ಕಾರ್ಮಿಕರಿಗೆ ತಲಾ 25 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಮತ್ತು ಗಾಯಾಳು ಕಾರ್ಮಿಕರ ಸಂಪೂರ್ಣ ಚಿಕಿತ್ಸಾ ವೆಚ್ಚ ಭರಿಸುವ ಜತೆಗೆ 10 ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ಸಿಐಟಿಯು ಒತ್ತಾಯಿಸಿದೆ.

ಸಿಐಟಿಯು ನಿಯೋಗ ಭೇಟಿ: ವಿಕ್ಟೋರಿಯಾ ಆಸ್ಪತ್ರೆಯ ಸುಟ್ಟುಗಾಯಗಳ ವಿಭಾಗದಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿರುವ ಗಾಯಾಳುಗಳು ಪಶ್ಚಿಮ ಬಂಗಾಳದವರೆಂದು ತಿಳಿದು ಇದರಲ್ಲಿ ಶೇ 65 ರಿಂದ ಶೇ35 ರಷ್ಟು ಸುಟ್ಟಗಾಯಗಳಿಂದ ನರಳುತ್ತಿದ್ದ ಅದರಲ್ಲಿ ಇದೀಗ ಮೂರು ಅಮಾಯಕ ಕಾರ್ಮಿಕರು ಸಾವನಪ್ಪಿದ್ದಾರೆ. 7 ಜನ ಕಟ್ಟಡ ಕಾರ್ಮಿಕರ ಸ್ಥಿತಿ ಚಿಂತಾಜನಕವಾಗಿದೆ.
ಕರ್ನಾಟಕ ರಾಜ್ಯ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ (ರಿ) ರಾಜ್ಯಾಧ್ಯಕ್ಷರಾದ ಬಾಲಕೃಷ್ಣ ಬೆಂಗಳೂರು ದಕ್ಷಿಣ ಜಿಲ್ಲಾ ಅಧ್ಯಕ್ಷೆ ಕೆ.ಎಸ್.ಲಕ್ಷ್ಮಿ, ಬೆಂಗಳೂರು ಉತ್ತರ ಜಿಲ್ಲಾ ಸಂಚಾಲಕ ಹರೀಶ್, ಅಂತರರಾಜ್ಯ ವಲಸೆ ಕಾರ್ಮಿಕರ ಸಂಘದ (ಐ.ಎಂ.ಎಫ್.ಕೆ) ಮುಖಂಡರಾದ ಸುಮನ್, ರಮೇಶ್, ರಾಮನಗರ ಜಿಲ್ಲಾ ಸಿಐಟಿಯು ಮುಖಂಡರಾದ ಬಿ.ಬಿ.ರಾಘವೇಂದ್ರ, ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್.ಎಫ್.ಐ) ರಾಜ್ಯ ಕಾರ್ಯದರ್ಶಿ ವಿಜಯಕುಮಾರ್ ಅವರನ್ನೊಳಗೊಂಡ ನಿಯೋಗ ಆಸ್ಪತ್ರೆಗೆ ಭೇಟಿ ನೀಡಿ, ಆಸ್ಪತ್ರೆಯ ವೈದ್ಯಾಧಿಕಾರಿಗಳೊಂದಿಗೆ ಚರ್ಚಿಸಿ ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡಲು ಮನವಿ ಮಾಡಿತು.
ಕಾಮಾಗಾರಿ ಸ್ಥಳದಲ್ಲಿ ಕಾರ್ಮಿಕರಿಗೆ ನೀಡಿರುವ ವಸತಿ ನೀಡಿದ್ದು, ಇದು ವಾಸಕ್ಕೆ ಸುರಕ್ಷಿತವಾಗಿರಲಿಲ್ಲ. ಸುರಕ್ಷಾ ಕ್ರಮಗಳನ್ನು ಪಾಲಿಸದಿರುವುದೇ ಈ ಅವಘಡಕ್ಕೆ ಕಾರಣವಾಗಿದ್ದು ಈ ಸಂಬಂಧ ಪ್ರಕರಣ ಬಿಡದಿಯ ಪೋಲಿಸ್ ಸ್ಟೇಷನ್ ನಲ್ಲಿ ದೂರು ದಾಖಲಾಗಿದ್ದು ಕಂಪನಿ ಮುಖ್ಯಸ್ಥರನ್ನು ನಿರ್ಲಕ್ಷ್ಯದ ಮೇಲೆ ಬಂಧಿಸಿ ಕಾನೂನು ಕ್ರಮವಹಿಸಬೇಕೆಂದು ಕರ್ನಾಟಕ ರಾಜ್ಯ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ (ರಿ) ಆಗ್ರಹಿಸಿದೆ.
ಜೀವನೋಪಾಯಕ್ಕಾಗಿ ಬದುಕನ್ನು ಅರಸಿ ಬಂದ ಕಾರ್ಮಿಕರ ನೆರವಿಗೆ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಮತ್ತು ರಾಜ್ಯ ಸರ್ಕಾರ ನಿಲ್ಲಬೇಕೆಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್, ಕರ್ನಾಟಕ ರಾಜ್ಯ ಸಮಿತಿ ನಿಯೋಗ ಕಲ್ಯಾಣ ಮಂಡಳಿ ಕಾರ್ಯದರ್ಶಿ ಹಾಗೂ ಸಿಇಓ ಅವರನ್ನು ಮತ್ತು ಜಂಟಿ ಕಾರ್ಯದರ್ಶಿ ಅವರನ್ನು ನಿಯೋಗ ಭೇಟಿ ಮಾಡಿ ಮಧ್ಯಪ್ರವೇಶಿಸಬೇಕೆಂದು ಮನವಿ ಮಾಡಿದೆ.
ಬೆಂಕಿ ಅನಾಹುತಕ್ಕೆ ಸಿಲುಕಿದ ಎಲ್ಲ ಕಾರ್ಮಿಕರಿಗೆ ಉನ್ನತ ಮಟ್ಟದ ಚಿಕಿತ್ಸೆಗಳು ದೊರೆಯಬೇಕು. ಚಿಕಿತ್ಸಾ ವೆಚ್ಚಗಳನ್ನು ಮತ್ತು ಅವರು ಚೇತರಿಸಿಕೊಳ್ಳುವ ಆರೈಕೆ ಅವಧಿಯ ವೆಚ್ಚಗಳನ್ನು ಸಂಪೂರ್ಣ ಕಂಪನಿ ನೀಡಬೇಕು. ದೀರ್ಘ ಚಿಕಿತ್ಸೆಯಿಂದಾಗಿ ಕುಟುಂಬದ ಆದಾಯ ಮೂಲಗಳಿಂದ ವಂಚಿತರಾಗುವ ಪ್ರತಿ ಕುಟುಂಬಕ್ಕೆ 10 ಲಕ್ಷ ಪರಿಹಾರದ ನೀಡಬೇಕು. ಮೃತಪಟ್ಟ ಪ್ರತಿ ಕುಟುಂಬಕ್ಕೆ ತಕ್ಷಣವೇ 25 ಲಕ್ಷ ಪರಿಹಾರ ನೀಡಬೇಕು. ಮೃತದೇಹಗಳನ್ನು ಅವರ ಕುಟುಂಬಗಳ ಸದಸ್ಯರನ್ನು ಸುರಕ್ಷಿತವಾಗಿ ಹಾಗೂ ಉಚಿತವಾಗಿ ಪ.ಬಂಗಾಳದ ಅವರ ಮೂಲ ಸ್ಥಳಕ್ಕೆ ಕಳುಹಿಸಲು ವ್ಯವಸ್ಥೆ ಮಾಡಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟಿದೆ.
