ನವದೆಹಲಿ: ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಎನ್.ಕೋಟೀಶ್ವರ ಸಿಂಗ್ ಅವರ ನೇತೃತ್ವದ ನ್ಯಾಯಪೀಠವು, ಸಾಲ ಮರುಪಾವತಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ನ್ಯಾಯಾಲಯಗಳು ವಸೂಲಾತಿ ಏಜೆಂಟರಂತೆ ವರ್ತಿಸಲಾಗದು ಎಂದು ಸುಪ್ರೀಂ ಕೋರ್ಟ್ ಕಟುವಾಗಿ ಹೇಳಿದೆ. ನವದೆಹಲಿ
ವ್ಯಕ್ತಿಯೊಬ್ಬರು ಬಾಕಿ ಹಣ ಪಾವತಿಸದಿದ್ದರೆ ಅವರಿಗೆ ಬಂಧನದ ಬೆದರಿಕೆ ಒಡ್ಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿತು. ಹಣ ವಸೂಲಿಗಾಗಿ ಸಿವಿಲ್ ವ್ಯಾಜ್ಯಗಳನ್ನು ಕ್ರಿಮಿನಲ್ ಪ್ರಕರಣಗಳಾಗಿ ಪರಿವರ್ತಿಸುವ ಪ್ರವೃತ್ತಿ ಆರಂಭವಾಗಿದೆ ಎಂದು ಕೋರ್ಟ್ ಬೇಸರ ವ್ಯಕ್ತಪಡಿಸಿತು. ನವದೆಹಲಿ
ಇದನ್ನೂ ಓದಿ : ಸಾರಿಗೆ ನಿಗಮಗಳ ಬಸ್ ದರ ಪರಿಷ್ಕರಣೆಗೆ ಸಮಿತಿ ರಚನೆ
ಉತ್ತರ ಪ್ರದೇಶದಲ್ಲಿನ ಕ್ರಿಮಿನಲ್ ಆರೋಪ ಪ್ರಕರಣವೊಂದರ ವಿಚಾರಣೆ ವೇಳೆ ನ್ಯಾಯಾಲಯವು ಸೋಮವಾರ ಈ ಅಭಿಪ್ರಾಯ ವ್ಯಕ್ತಪಡಿಸಿತು. ಹಣ ವಸೂಲಾತಿ ವಿವಾದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರ ವಿರುದ್ಧ ಅಪಹರಣ ಆರೋಪದಡಿ ಪ್ರಕರಣ ದಾಖಲಿಸಲಾಗಿತ್ತು.
ಉತ್ತರ ಪ್ರದೇಶ ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ.ನಟರಾಜ್ ಅವರು, ‘ಇಂಥ ದೂರುಗಳು ಹೆಚ್ಚುತ್ತಿವೆ. ಇಂಥ ಸಂದರ್ಭದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳದಿದ್ದರೆ ನ್ಯಾಯಾಲಯವು ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತದೆ. ಒಂದು ವೇಳೆ ಪ್ರಕರಣ ದಾಖಲಿಸಿದರೆ, ಪೊಲೀಸರು ಪಕ್ಷಪಾತಿಯಾಗಿದ್ದಾರೆ, ಕಾನೂನು ಪ್ರಕ್ರಿಯೆ ಪಾಲಿಸುತ್ತಿಲ್ಲ ಎಂದು ದೂರಲಾಗುತ್ತದೆ’ ಎಂದು ನ್ಯಾಯಾಲಯದ ಗಮನಕ್ಕೆ ತಂದರು.
‘ಪೊಲೀಸರ ಸಂದಿಗ್ಧ ಸ್ಥಿತಿ ಅರ್ಥವಾಗುತ್ತದೆ. ಗಂಭೀರ ಅಪರಾಧ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸದಿದ್ದರೆ, ಸುಪ್ರೀಂ ಕೋರ್ಟ್ 2013ರಲ್ಲಿ ಲಲಿತ ಕುಮಾರ್ ಪ್ರಕರಣದಲ್ಲಿ ನೀಡಿದ್ದ ತೀರ್ಪನ್ನು ಅನುಸರಿಸದ ಕಾರಣ ಪೊಲೀಸರು ಕ್ರಮ ಎದುರಿಸಬೇಕಾಗುತ್ತದೆ’ ಎಂದು ನ್ಯಾ.ಸೂರ್ಯ ಕಾಂತ್ ಹೇಳಿದರು.
ಇಂಥ ಸಂದರ್ಭದಲ್ಲಿ, ಪೊಲೀಸರು ವ್ಯಕ್ತಿಯೊಬ್ಬರ ಬಂಧನಕ್ಕೂ ಮೊದಲು ಇದೊಂದು ಸಿವಿಲ್ ಪ್ರಕರಣವೇ ಅಥವಾ ಕ್ರಿಮಿನಲ್ ಪ್ರಕರಣವೇ ಎಂಬುದನ್ನು ಸ್ವಯಂವಿವೇಚನೆಯಿಂದ ನಿರ್ಧರಿಸಬೇಕು ಎಂದು ನ್ಯಾಯಪೀಠ ಸಲಹೆ ನೀಡಿತು.
ಕ್ರಿಮಿನಲ್ ಕಾನೂನಿನ ದುರ್ಬಳಕೆಯು ನ್ಯಾಯದಾನ ವ್ಯವಸ್ಥೆಗಿರುವ ಗಂಭೀರ ಬೆದರಿಕೆ ಎಂದು ನ್ಯಾಯಪೀಠ ಹೇಳಿತು.
ಈ ನಿಟ್ಟಿನಲ್ಲಿ ರಾಜ್ಯಗಳು ಪ್ರತಿ ಜಿಲ್ಲೆಗೆ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಿಸಬಹುದು. ಅವರು ಯಾವುದೇ ಅಪರಾಧ ಪ್ರಕರಣದ ದೂರು ಬಂದಾಗ ಪೊಲೀಸರೊಂದಿಗೆ ಸಮಾಲೋಚನೆ ನಡೆಸಿ ಅದು ಸಿವಿಲ್ ಅಥವಾ ಕ್ರಿಮಿನಲ್ ಅಪರಾಧ ಎಂದು ನಿರ್ಧರಿಸಬಹುದು. ನಂತರ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬಹುದು ಎಂದು ನ್ಯಾಯಪೀಠ ಸಲಹೆ ನೀಡಿತು.
ಇದನ್ನೂ ನೋಡಿ : ಸೌಹಾರ್ದತೆಯ ತಾಣ, ಮೊಹಮ್ಮದ್ ಗವಾನ್ ಮದರಸಾ Janashakthi Media
