ಸ್ವಾತಂತ್ರ್ಯದ ಆಶಯಗಳು ಈಡೇರುತ್ತಿಲ್ಲ: ಆಳುವ ವರ್ಗಗಳು ಯುವಕರಿಗೆ ಉದ್ಯೋಗ ನೀಡುವ ಬದಲಾಗಿ ದಿಕ್ಕು ತಪ್ಪಿಸುತ್ತಿದ್ದಾರೆ -ರೇಣುಕಾ ಕಹಾರ.

ಹಾವೇರಿ: ಬ್ರಿಟಿಷ್ ಸರ್ಕಾರದ ವಿರುದ್ಧ ಹೋರಾಡಿ ಸ್ವಾತಂತ್ರ್ಯವನ್ನು ಪಡೆದು 79 ವಸಂತಗಳು ಕಳೆದರು ಸ್ವಾತಂತ್ರ್ಯ ಹೋರಾಟಕ್ಕಾಗಿ ತ್ಯಾಗ ಬಲಿದಾನದ ನಿಜವಾದ ಆಶಯಗಳು ಈಡೇರುತ್ತಿಲ್ಲ ನಮ್ಮನ್ನು ಆಳುವ ವರ್ಗಗಳು ವಿದ್ಯಾರ್ಥಿ – ಯುವಜನರಿಗೆ ಶಿಕ್ಷಣ, ಉದ್ಯೋಗ ನೀಡುವ ಬದಲಾಗಿ ಅವರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಎಸ್ಎಫ್ಐ ಮಾಜಿ ಜಿಲ್ಲಾಧ್ಯಕ್ಷೆ, ಡಿವೈಎಫ್ಐ ರಾಜ್ಯ ಸಮಿತಿ ಸದಸ್ಯರಾದ ರೇಣುಕಾ ಕಹಾರ ಹೇಳಿದರು.

ಶಿವಾಜಿ ನಗರದಲ್ಲಿರುವ ಎಸ್ಎಫ್ಐ ಕಛೇರಿ ಎದುರು ಮಧ್ಯೆ ರಾತ್ರಿ12 ಗಂಟೆಗೆ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಹಾವೇರಿ ಜಿಲ್ಲಾ ಸಮಿತಿ ಏರ್ಪಡಿಸಿದ 79ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣವನ್ನು ನೇರವೇರಿಸಿ ಅವರು ಮಾತನಾಡಿದರು.

ದೇಶದ ಅಭಿವೃದ್ಧಿ ಎಂದರೆ ಉಳವರಿಗೆ ಶಿಕ್ಷಣ ದೊರೆತರೆ ಸಾಲದು ಪ್ರತಿಯೊಬ್ಬರಿಗೂ ಶಿಕ್ಷಣ, ಉದ್ಯೋಗ ಸಿಗಬೇಕು ಆಗ ಮಾತ್ರ ದೇಶ ಸದೃಢವಾಗಲು ಸಾದ್ಯವಾಗುತ್ತದೆ ಎಂದರು.

ಇದನ್ನೂ ಓದಿ: ಬೆಂಗಳೂರು|ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿ  ಸ್ಫೋಟ ಸಂಭವಿಸಿದೆ ಬಾಲಕ ಮೃತ

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಮಾತನಾಡಿ, ದೇಶದಲ್ಲಿ ಆಡಳಿತ ಮಾಡುವ ಸರ್ಕಾರಗಳಿಂದ ಸ್ವಾತಂತ್ರ್ಯಕ್ಕಾಗಿ ಪ್ರಾಣ ಬಲಿದಾನಗೈದ ವೀರರ ಆಶಯಗಳಾದ ಶಿಕ್ಷಣ, ಉದ್ಯೋಗ, ವಸತಿ, ಆಹಾರ, ಘನತೆ ಬದುಕ ಕಟ್ಟಿಕೊಡಲು ಸಾದ್ಯವಾಗುತ್ತಿಲ್ಲ ಎಂದು ಹೇಳಿದರು.

ಸ್ವಾತಂತ್ರ್ಯ ದೊರಕಿ 79 ವಸಂತಗಳು ಕಳೆದರು ಶಿಕ್ಷಣ ಉದ್ಯೋಗ ಮೂಲಭೂತ ಹಕ್ಕು ಆಗುವ ಬದಲಿಗೆ ನಾಶವಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಕ್ರಾಂತಿಕಾರಿ ಹೋರಾಟಗಾರರನ್ನು ಅಧ್ಯಯನ ಮಾಡಬೇಕು ಆ ನಿಟ್ಟಿನಲ್ಲಿ ಅವರ ಆಶಯಗಳನ್ನು ನನಸು ಮಾಡಲು ವಿದ್ಯಾರ್ಥಿ-ಯುಜನರು ಮುಂದಾಗಬೇಕೆಂದರು.

ಎಸ್ಎಫ್ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್ ಮಾತನಾಡಿ, ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನ ಮಾಡಿದ ಗಾಂಧಿ, ಭಗತ್ ಸಿಂಗ್, ಸಂಗೊಳ್ಳಿ ರಾಯಣ್ಣ ಸೇರಿದಂತೆ ಅನೇಕ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಅಪಾರ ಗೌರವ ಹೊಂದಬೇಕು. ಅವರ ಆದರ್ಶ ಹಾಗೂ ಹೋರಾಟದ ಪರಂಪರೆಯನ್ನು ಶಿಕ್ಷಣ, ಉದ್ಯೋಗದ ಮೂಲಭೂತ ಹಕ್ಕಿಗಾಗಿ, ದೇಶದ ಅಭಿವೃದ್ಧಿಗಾಗಿ ಮುಂದುವರೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಬೇಕು ಎಂದರು.

ಕಾಲೇಜ್ ಘಟಕ ಅಧ್ಯಕ್ಷೆ ಚೈತ್ರ ಕೊರವರ್ ಮಾತನಾಡಿ, ಭಗತ್‌‌ ಸಿಂಗ್‌‌ ಅವರ ಜೀವನ ಚರಿತ್ರೆಯು ವಿದ್ಯಾರ್ಥಿ – ಯುವಜನರ ಮೈ ರೋಮಾಂಚಕಗೊಳಿಸುವ ಧೀರೋದಾತ್ತ ಹೋರಾಟವನ್ನು ಮರೆಯಬಾರದು ಎಂದರು.

ಎಸ್ಎಫ್ಐ, ಡಿವೈಎಫ್ಐ ಕಾರ್ಯಕರ್ತರು ಹಾಗೂ ಪಾಲಕರು, ಸಾರ್ವಜನಿಕರಿಗೆ ಪರಸ್ಪರ ಸಿಹಿ ತಿನಿಸುವ ಮೂಲಕ ಸ್ವಾತಂತ್ರ್ಯ ದಿನವನ್ನು ಸಂಭ್ರಮಾಚರಿಸಿದ್ದರು.

ಈ ಸಂದರ್ಭದಲ್ಲಿ ಎಸ್ಎಫ್ಐ ಜಿಲ್ಲಾ ಸಹ ಕಾರ್ಯದರ್ಶಿ ಕೃಷ್ಣ ನಾಯ್ಕ, ಹಾಸ್ಟೆಲ್ ಘಟಕ ಅಧ್ಯಕ್ಷ ಫಕ್ಕೇಶ್ ಮ್ಯಾಗಳಮನಿ, ಪಾಲಕರಾದ ರೇಣುಕಾ ಬಸಪ್ಪ ಕೊರವರ್, ಲಕ್ಷ್ಮೀ ಪ್ರಭಾ ಹುಲೂರ ಮುಖಂಡರಾದ ಸುನೀಲ್ ಕುಮಾರ್ ಎಲ್, ಸುದೀಪ್ ನಾಯ್ಕ, ಚೇತನ್ ಕುಮಾರ್, ರಮೇಶ್ ಎನ್, ದಿನೇಶ್, ಪ್ರವೀಣ್ ಬಾರ್ಕಿ, ವಿಜಯ್ ಎಚ್, ವಿವೇಕ್, ಪ್ರಮೋದ್, ಸಂಜು , ವೀರನ್ ಗೌಡ, ಬಾಲಸಂಘಂನ ಸಂಗಾತಿಗಳಾದ ಧನುಷ್ ದೊಡ್ಡಮನಿ, ಅನ್ವಿಕಾ ಆರ್ ಬಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಕಾಲೇಜ್ ಘಟಕ ಕಾರ್ಯದರ್ಶಿ ಗಂಗಾ ಯಲ್ಲಾಪುರ ಸ್ವಾಗತಿಸಿದರು, ಜಿಲ್ಲಾ ಮುಖಂಡರಾದ ಅರುಣ್ ನಾಗವತ್ ನಿರೂಪಿಸಿದರು.

ಇದನ್ನೂ ನೋಡಿ: ಸಮುದಾಯ 50 | ಆಗಸ್ಟ್‌ 24 ರಿಂದ 27 ; ಕಲಾ ಶಿಬಿರ – ನಾಟಕೋತ್ಸವ Janashakthi Media

Donate Janashakthi Media

Leave a Reply

Your email address will not be published. Required fields are marked *