ಕೊಪ್ಪಳ: ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ದಲಿತ ಮುಖಂಡರು ನಗರದ ಅಶೋಕ ವೃತ್ತದ ಬಳಿ ಸಚಿವ ಶಿವರಾಜ್ ತಂಗಡಗಿ ಅವರಿಗೆ ಆಗಸ್ಟ್ 15ರಂದು ಮನವಿ ಸಲ್ಲಿಸಿ ಗಮನ ಸೆಳೆದರು.
3 ದಶಕಗಳಿಂದ ಒಳ ಮೀಸಲಾತಿ ಜಾರಿಗಾಗಿ ನಿರಂತರ ಹೋರಾಟ ನಡೆದಿದೆ. ಆಡಳಿತಕ್ಕೆ ಬರುವ ಯಾವುದೇ ಸರ್ಕಾರಗಳು ನಮಗೆ ಒಳ ಮೀಸಲು ಜಾರಿ ಮಾಡುತ್ತಿಲ್ಲ.
ಮೀಸಲಾತಿಗಾಗಿ ಹಲವು ಬಾರಿ ಸರಕಾರದ ಗಮನ ಸೆಳೆದರೂ ಸಹಿತ ಸರ್ಕಾರ ನಾನಾ ಕಾರಣಗಳನ್ನು ಹೇಳುತ್ತಾ ಒಳಮಿಸಲಾತಿ ಜಾರಿ ಮುಂದೂಡುವ ತಂತ್ರ ಅನುಸರಿಸುತ್ತದೆ. ಸುಪ್ರೀಂ ಕೋರ್ಟ್ ಸಹಿತ ಒಳ ಮೀಸಲು ಜಾರಿ ಮಾಡುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇದೆ ಎಂದು ತೀರ್ಪು ನೀಡಿದೆ.
ಇದನ್ನೂ ಓದಿ: ಪಶ್ಚಿಮ ಆಫ್ರಿಕಾದಲ್ಲೊಂದು ಮೌನ ಕ್ರಾಂತಿ
ನ್ಯಾ. ನಾಗಮೋಹನ್ ದಾಸ್ ಏಕ ಸದಸ್ಯ ಆಯೋಗ ರಚಿಸಿ ವರದಿಯನ್ನು ಸಿದ್ಧಪಡಿಸಿದೆ. ವರದಿಯು ಈಗಾಗಲೇ ಸರ್ಕಾರಕ್ಕೆ ಸಲ್ಲಿಕೆಯಾಗಿದ್ದು ಆ ವರದಿ ಅನುಸಾರ ಒಳ ಮೀಸಲು ಜಾರಿ ಮಾಡಬೇಕು ಎಂದು ದಲಿತ ಮುಖಂಡರು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಸಚಿವ ಶಿವರಾಜ್ ತಂಗಡಗಿ ಅವರು, ನಮ್ಮ ಸರಕಾರ ಒಳ ಮೀಸಲಾತಿ ಜಾರಿ ಮಾಡಲಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಎಲ್ಲ ಸಮುದಾಯಗಳಿಗೂ ನ್ಯಾಯ ದೊರೆಯಲಿದೆ ಎಂಬ ಭರವಸೆ ನೀಡಿದರು.
ಮನವಿ ಸಲ್ಲಿಸುವ ವೇಳೆ ಮುಖಂಡರಾದ ಗಣೇಶ್ ಹೊರತಟ್ನಾಳ, ಹನುಮೇಶ ಕಡೆಮನಿ, ಮಲ್ಲು ಪೂಜಾರ, ಮಂಜುನಾಥ ಮುಸ್ಲಾಪೂರ, ಸಿದ್ದು ಮಣ್ಣೀನವರ್, ರಾಮಣ್ಣ, ನಿಂಗಪ್ಪ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
ಇದನ್ನೂ ನೋಡಿ: ಧರ್ಮಸ್ಥಳದಲ್ಲಿ ದೌರ್ಜನ್ಯ ನಡೆಸಿದವರು ಕಟಕಟೆಗೆ ಬರಬೇಕು, ಅವರಿಗೆ ಶಿಕ್ಷೆಯಾಗಬೇಕು Janashakthi Media
