ಬಾಲಕನ ಕಿಡ್ನಾಪ್ ಮತ್ತು ಕೊಲೆ: ಕಠಿಣ ಕ್ರಮಕ್ಕೆ ಸಿಪಿಐ(ಎಂ) ಆಗ್ರಹ

ಬೆಂಗಳೂರು: ಹುಳಿಮಾವು ಪೋಲಿಸ್ ಠಾಣೆ ವ್ಯಾಪ್ತಿಯ ಅರೆಕರೆಯ ಶಾಂತಿನಿಕೇತನ ಬಡಾವಣೆಯಲ್ಲಿ ರಾತ್ರಿ ಟ್ಯೂಷನ್ ಮುಗಿಸಿ ಮನೆಗೆ ಬರುತ್ತಿದ್ದ 13 ವರ್ಷದ ಬಾಲಕನನ್ನು ಅಪಹರಣಕಾರರು ಕಿಡ್ನಾಪ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟು, ಕೊನೆಗೆ ಬಾಲಕನನ್ನು ಅಮಾನುಷವಾಗಿ ಕೊಂದ ಘಟನೆ ಖಂಡನೀಯ. ತಪ್ಪಿತಸ್ಥರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಸಿಪಿಐ(ಎಂ) ಆಗ್ರಹಿಸಿದೆ. ಮೃತ ಬಾಲಕನ ಕುಟುಂಬಕ್ಕೆ ಸಿಪಿಐ(ಎಂ) ತಂತಾಪಗಳನ್ನು ತಿಳಿಸುತ್ತದೆ ಎಂದು ಜಿಲ್ಲಾ ಕಾರ್ಯದರ್ಶಿ ಬಿ.ಎನ್ ಮಂಜುನಾಥ್ ಹೇಳಿದ್ದಾರೆ. ಕೊಲೆ 

ಕಿಡ್ನಾಪ್ ಆದ ಬಾಲಕನ ಪೋಷಕರಿಗೆ ಕೊಲೆಗಡುಕರು ಐದು ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದರು, ಕೊನೆಗೆ ಆ ಬಾಲಕನನ್ನು ಕೊಂದು ಕಗ್ಗಲೀಪುರ ವ್ಯಾಪ್ತಿಯಲ್ಲಿ ಬಾಲಕನ ಮೇಲೆ ಪೆಟ್ರೋಲ್ ಸುರಿದು ಸುಟ್ಟಿರುವ ಹೃದಯ ವಿದ್ರಾಯಕವಾದುದು. ಘಟನೆಯು ನಗರದ ಪೋಷಕರಲ್ಲಿ ತಮ್ಮ ಮಕ್ಕಳ ಬಗೆಗಿನ ಸುರಕ್ಷತೆ ಬಗ್ಗೆ ಆತಂಕ ಮೂಡಿಸಿದೆ ಎಂದರು.

ಇದನ್ನೂ ಓದಿ: ಅತ್ಯಾಚಾರ ಪ್ರಕರಣ | ಪ್ರಜ್ವಲ್ ರೇವಣ್ಣ ದೋಷಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು

ಈ ಪ್ರಕರಣದಲ್ಲಿ ಪೊಲೀಸ್ ವೈಫಲ್ಯವೂ ಇದೆ. ಆರಂಭದಲ್ಲೇ ಮೃತ ಬಾಲಕನ ಪೋಷಕರು ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದಾಗ ಈIಖ ಮಾಡಲು ಸತಾಯಿಸಿ, ವಿನಾಕಾರಣ ತಡ ಮಾಡಿದ್ದಾರೆ ಎಂಬ ದೂರುಗಳು ಇವೆ. ಒಂದು ವೇಳೆ ತಕ್ಷಣವೇ ಕಾರ್ಯಾಚರಣೆ ಮಾಡಿದ್ದರೆ, ಮಗುವನ್ನು ಉಳಿಸಬಹುದಿತ್ತು ಎಂಬ ಅಭಿಪ್ರಾಯ ಸ್ಥಳೀಯರಿಂದ ಬಂದಿದೆ ಎಂದು ಹೇಳಿದರು.

ರಾಜ್ಯದ ರಾಜಧಾನಿ ನಗರದಲ್ಲಿ ದೌರ್ಜನ್ಯ, ಹಿಂಸೆ, ಕೊಲೆಗಳು ದಿನನಿತ್ಯದ ಸಂಗತಿಯಾಗಿದ್ದು ಇದಕ್ಕೆ ಆಡಳಿತದ ವೈಫಲ್ಯವೇ ಕಾರಣವಾಗಿದೆ. ಪ್ರಕರಣದ ಆರೋಪಿಗಳನ್ನು ಪತ್ತೆ ಮಾಡಲಾಗಿದೆ ಎಂಬ ವರದಿಗಳು ಬಂದಿದ್ದು, ಶೀಘ್ರ ತನಿಖೆ ಮತ್ತು ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆಗೆ ಸಿಪಿಐ(ಎಂ) ಒತ್ತಾಯಿಸಿದೆ.

ಇಂತಹ ಪ್ರಕರಣಗಳು ಬೆಂಗಳೂರಿನಲ್ಲಿ ಮರುಕಳಿಸದಂತೆ ಸುರಕ್ಷತೆಗೆ ಆದ್ಯತೆ ನೀಡಬೇಕು ಹಾಗೂ ನಗರದಲ್ಲಿ ಮಕ್ಕಳನ್ನು ಕಿಡ್ನಾಪ್ ಮಾಡುವ ಜಾಲವನ್ನು ಸದೆಬಡಿಯಬೇಕೆಂದು ಸಿ.ಪಿ.ಐ(ಎಂ) ಬೆಂಗಳೂರು ಜಿಲ್ಲಾ ಸಮಿತಿ ಆಗ್ರಹಿಸಿದೆ ಎಂದರು.

ಇದನ್ನೂ ನೋಡಿ: ಧರ್ಮಸ್ಥಳ: ಮೃತದೇಹಗಳ ಹೂತಿಟ್ಟ ಜಾಗವನ್ನು ತೋರಿಸಿದ ಸಾಕ್ಷಿ ದೂರುದಾರ Janashakthi Media

Donate Janashakthi Media

Leave a Reply

Your email address will not be published. Required fields are marked *