ಗಿಲ್‌ ಮುಂದಿದೆ 35 ವರ್ಷಗಳ ದೊಡ್ಡ ಕನಸ್ಸು 1595ದಿಗಳ ಬಳಿಕ ಎಂಟ್ರಿ

ನವದೆಹಲಿ: ಭಾರತ ಮತ್ತು ಇಂಗ್ಲೆಂಡ್‌ ನಡುವೆ 3 ನೇ ಟೆಸ್ಟ್‌ ಪಂದ್ಯವು ಜುಲೈ 10 ರಿಂದ ಶುರುವಾಗಲಿದೆ. ಕ್ರಿಕೆಟ್‌ ಕಾಶಿ ಲಾರ್ಡ್‌ ಮೈದಾನದಲ್ಲಿ ಜರುಗಲಿರುವ ಈ ಪಂದ್ಯದ ಮೂಲಕ ಜೋಪ್ರಾ ಆರ್ಚರ್‌ ಟೆಸ್ಟ ಕ್ರಿಕೆಟ್‌ ಗೆ ಮರುಳುತ್ತಿದ್ದಾರೆ. ಅದು ಕೂಡ ಬರೋಬ್ಬರಿ 1595 ದಿನಗಳ ಬಳಿಕ. ವರ್ಷ

ಆರ್ಚರ್ ಕೊನೆಯ ಬಾರಿ ಟೆಸ್ಟ್ ಪಂದ್ಯವಾಡಿದ್ದು 2021 ರಲ್ಲಿ. ಇದಾದ ಬಳಿಕ ಗಾಯಕ್ಕೆ ತುತ್ತಾಗಿದ್ದ ಆರ್ಚರ್ ಇದೀಗ ಸಂಪೂರ್ಣ ಫಿಟ್​ನೆಸ್​ನೊಂದಿಗೆ ಟೀಮ್ ಇಂಡಿಯಾ ವಿರುದ್ಧ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಅತ್ತ ಜೋಫ್ರಾನನ್ನು ಎದುರಿಸಿ ಹೊಸ ಇತಿಹಾಸ ಬರೆಯಲು ಟೀಮ್ ಇಂಡಿಯಾ ನಾಯಕ ಶುಭ್​ಮನ್ ಗಿಲ್ ಕೂಡ ತುದಿಗಾಲಲ್ಲಿ ನಿಂತಿದ್ದಾರೆ. ಅದು ಸಹ 35 ವರ್ಷಗಳ ಕನಸನ್ನು ಈಡೇರಿಸಿಕೊಳ್ಳುವ ಧ್ಯೇಯದೊಂದಿಗೆ ಎಂಬುದು ವಿಶೇಷ.

ಕಳೆದ 35 ವರ್ಷಗಳಿಂದ, ಲಾರ್ಡ್ಸ್ ಮೈದಾನದಲ್ಲಿ ಯಾವುದೇ ಭಾರತೀಯ ನಾಯಕ 50 ಕ್ಕಿಂತ ಹೆಚ್ಚು ರನ್​ ಕಲೆಹಾಕಿಲ್ಲ. ಟೀಮ್ ಇಂಡಿಯಾ ನಾಯಕರುಗಳನ್ನು ಕ್ರೀಸ್ ಕಚ್ಚಿ ನಿಂತು ಬ್ಯಾಟಿಂಗ್ ಮಾಡಲು ಇಂಗ್ಲೆಂಡ್ ಬೌಲರ್​ಗಳು ಬಿಡಲಿಲ್ಲ ಎನ್ನುವುದು ಸೂಕ್ತ. ಇದೀಗ ಟೀಮ್ ಇಂಡಿಯಾ ಶುಭ್​ಮನ್ ಗಿಲ್ ಮುಂದಾಳತ್ವದಲ್ಲಿ ಕಣಕ್ಕಿಳಿಯಲು ಸಜ್ಜಾಗಿದೆ.

ಇದನ್ನೂ ಓದಿ: ಮೂಡ ಹಗರಣ: ಒಬ್ಬನೇ ವ್ಯಕ್ತಿಗೆ ಅಕ್ರಮವಾಗಿ 30 – 40 ನಿವೇಶನ ಹಂಚಿಕೆ ಪತ್ತೆ

ಕಳೆದ ಎರಡು ಮ್ಯಾಚ್​ಗಳಲ್ಲಿ ಶತಕ ಹಾಗೂ ದ್ವಿಶತಕ ಸಿಡಿಸಿರುವ ಗಿಲ್ ಲಾರ್ಡ್ಸ್ ಮೈದಾನದಲ್ಲಿ ಅರ್ಧಶತಕ ಪೂರೈಸುವ ವಿಶ್ವಾಸದಲ್ಲಿದ್ದಾರೆ. ಈ ಮೂಲಕ 35 ವರ್ಷಗಳಿಂದ ಟೀಮ್ ಇಂಡಿಯಾ ನಾಯಕರುಗಳ ಪಾಲಿಗೆ ಮರೀಚಿಕೆಯಾಗಿರುವ ಹಾಫ್ ಸೆಂಚುರಿಯ ಕನಸನ್ನು ನನಸು ಮಾಡಿಕೊಳ್ಳಲು ಗಿಲ್ ಟೊಂಕ ಕಟ್ಟಿ ನಿಂತಿದ್ದಾರೆ. ಅದು ಸಹ ಆಘಾತ ವೇಗಿ ಜೋಫ್ರಾ ಆರ್ಚರ್ ಅವರನ್ನು ಎದುರಿಸುವ ಮೂಲಕ ಈ ಕನಸು ಈಡೇರುವ ಸಾಧ್ಯತೆಯಿದೆ.

ಟೆಸ್ಟ್ ಕ್ರಿಕೆಟ್​ನಲ್ಲಿ ಜೋಫ್ರಾ ಆರ್ಚರ್ ಹಾಗೂ ಶುಭ್​ಮನ್ ಗಿಲ್ 3 ಬಾರಿ ಮುಖಾಮುಖಿಯಾಗಿದ್ದರು. ಈ ವೇಳೆ 2 ಬಾರಿ ಗಿಲ್ ವಿಕೆಟ್ ಪಡೆಯುವಲ್ಲಿ ಆರ್ಚರ್ ಯಶಸ್ವಿಯಾಗಿದ್ದಾರೆ. ಇನ್ನು ಆರ್ಚರ್ ಎಸೆದ 28 ಎಸೆತಗಳಲ್ಲಿ ಶುಭ್​ಮನ್ ಗಿಲ್ ಕೇವಲ 18 ರನ್​ಗಳಿಸಲಷ್ಟೇ ಶಕ್ತರಾಗಿದ್ದಾರೆ.

ಇದೀಗ ನಾಲ್ಕು ವರ್ಷಗಳ ಬಳಿಕ ಶುಭ್​ಮನ್ ಗಿಲ್ ಹಾಗೂ ಜೋಫ್ರಾ ಆರ್ಚರ್ ಮತ್ತೆ ಮುಖಾಮುಖಿಯಾಗಲು ಸಜ್ಜಾಗಿದ್ದಾರೆ. ಅದು ಕೂಡ ಲಾರ್ಡ್ಸ್ ಮೈದಾನದಲ್ಲಿ. ಹೀಗಾಗಿಯೇ ಮೂರನೇ ಟೆಸ್ಟ್ ಪಂದ್ಯವನ್ನು ಗಿಲ್ vs ಆರ್ಚರ್ ಎಂದು ಬಣ್ಣಿಸಲಾಗುತ್ತಿದೆ. ಈ ಜಿದ್ದಾಜಿದ್ದಿನ ಪೈಪೋಟಿಯಲ್ಲಿ ಯಾರು ಮಿಂಚಲಿದ್ದಾರೆ ಕಾದು ನೋಡೋಣ.

ಇದನ್ನೂ ನೋಡಿ: ಜುಲೈ 09 ರಂದು ಕಾರ್ಮಿಕರ ಮುಷ್ಕರ | ಮುಷ್ಕರಕ್ಕೆ ಕಾರಣಗಳೇನು? – ವಿಶ್ಲೇಷಣೆ ಎಸ್‌ ವರಲಕ್ಷ್ಮಿ Janashakthi Media

Donate Janashakthi Media

Leave a Reply

Your email address will not be published. Required fields are marked *