ಬೆಂಗಳೂರು| ಜುಲೈ 1ರಿಂದ ಎರಡು ಟೋಲ್ ದರ ಏರಿಕೆ

ಬೆಂಗಳೂರು: ಜುಲೈ 1ರಿಂದ ನಗರದ ಪ್ರಮುಖ ರಸ್ತೆಯ ಎರಡು ಟೋಲ್ ದರ ಏರಿಕೆಯಾಗಿದೆ. ಈ ಮೂಲಕ ವಾಹನ ಸವಾರರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಶಾಕ್​ ಕೊಟ್ಟಿದೆ. ಬೆಂಗಳೂರು

ಹೊಸೂರು ರಸ್ತೆಯ ಎರಡು ರಸ್ತೆಗಳಾದ ಅತ್ತಿಬೆಲೆ ಮತ್ತು ಎಲೆಕ್ಟ್ರಾನಿಕ್ ಸಿಟಿ ಟೋಲ್ ದರ ಏರಿಕೆಯಾಗಿದೆ, ದಿನದ ಟೋಲ್ ದರ ಜೊತೆ ಜೊತೆಗೆ ತಿಂಗಳ ಪಾಸ್ ಹಾಗೂ ವಾರ್ಷಿಕ ಪಾಸ್ ದರವೂ ಹೆಚ್ಚಾಗಿದೆ.

ಕಾರ್, ಜೀಪ್, ಲಘು ವಾಹನ, ಭಾರಿ ವಾಹನಗಳಲ್ಲಿ ಕನಿಷ್ಠ 5 ರೂಪಾಯಿ ಹೆಚ್ಚಾಗಿದೆ.

ಇದನ್ನೂ ಓದಿ: ವಸತಿ ಇಲಾಖೆಯಲ್ಲಿ ನಡೆದ ಹಗರಣಗಳನ್ನು ಬಿಚ್ಚಿಟ್ಟ ಬಿ ಆರ್ ಪಾಟೀಲ್

ಬೆಂಗಳೂರು ಎಲಿವೇಟೆಡ್ ಕಾರಿಡಾರ್ ಟೋಲ್‍ವೇ ಶುಲ್ಕ ಹೆಚ್ಚಾಗಿದೆ. ಪರಿಣಾಮ ಸೆಂಟ್ರಲ್ ಸಿಲ್ಕ್ ಬೋರ್ಡ್‍ನಿಂದ ಎಲೆಕ್ಟ್ರಾನಿಕ್ಸ್ ಸಿಟಿಗೆ ಮತ್ತು ಕರ್ನಾಟಕ, ತಮಿಳುನಾಡು ಗಡಿಯ ಬಳಿಯ ಅತ್ತಿಬೆಲೆ ಕಡೆಯ ಮಾರ್ಗದಲ್ಲಿ ಚಲಿಸುವ ಪ್ರಯಾಣಿಕರು ಎಲಿವೇಟೆಡ್ ಹೆಚ್ಚಿನ ಟೋಲ್ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ದರ ಎಷ್ಟಾಗಲಿದೆ?

ಕಾರು, ಜೀಪ್, ನಾಲ್ಕು ಚಕ್ರದ ಲಘು ವಾಹನಗಳಿಗೆ ಒಂದು ಪ್ರಯಾಣಕ್ಕೆ 65 ರೂಪಾಯಿ (ಹಳೆ ಬೆಲೆ 60)

ಎರಡು ಕಡೆಗಿನ ಪ್ರಯಾಣಕ್ಕೆ ರೂಪಾಯಿ 90 ರೂಪಾಯಿ (ಹಳೆ ಬೆಲೆ 85)

ದ್ವಿಚಕ್ರ ವಾಹನಗಳಿಗೆ ಒಂದು ಮಾರ್ಗದ ಪ್ರಯಾಣಕ್ಕೆ 25 ರೂಪಾಯಿ ಪಾವತಿಸಬೇಕಾಗಿದೆ (ಬದಲಾವಣೆ ಇಲ್ಲ)

ಲಾರಿ (ಟ್ರಕ್) ಹಾಗೂ ಬಸ್‌ಗಳಿಗೆ ಒಂದು ಬದಿ ಪ್ರಯಾಣಕ್ಕೆ 175

(ಹಳೆ ಬೆಲೆ 170) ರೂಪಾಯಿ
ಮಲ್ಟಿ-ಆಕ್ಸಲ್ ವಾಹನಗಳಿಗೆ ಒಂದು ಬದಿಗೆ 350 ರೂಪಾಯಿ ಕಟ್ಟಬೇಕಿದೆ (ಹಳೆ ಬೆಲೆ 345)

ಅತ್ತಿಬೆಲೆ ಟೋಲ್ ದರ ಹೆಚ್ಚಳ:

ಕಾರುಗಳು ಏಕ ಬದಿ ಪ್ರಯಾಣಕ್ಕೆ 40 ರೂಪಾಯಿ (ಹಳೆ ಬೆಲೆ 35)

ಲಘು ವಾಹನಗಳು,‌ ಮಿನಿ ಬಸ್ 65 ರೂಪಾಯಿ (ಹಳೆ ಬೆಲೆ 60)

ಟ್ರಕ್, ಬಸ್ 125 ರೂಪಾಯಿ (ಹಳೆ ಬೆಲೆ 120)

ದೊಡ್ಡ ಮಲ್ಟಿ ಎಕ್ಸೆಲ್ ವಾಹನಗಳಿಗೆ ಒಂದು ಟ್ರಿಪ್‌ಗೆ 265 ರೂಪಾಯಿ ಇದೆ (ಹಳೆ ಬೆಲೆ 260)

ಇದನ್ನೂ ನೋಡಿ: ಚನ್ನರಾಯಪಟ್ಟಣ ರೈತರ ಮೇಲೆ ಪೊಲೀಸ್ ದೌರ್ಜನ್ಯ: ಕಾಂಗ್ರೆಸ್ ಸರ್ಕಾರದ ವಿರುದ್ಧ ಸಿಪಿಐ(ಎಂ) ಪ್ರತಿಭಟನೆ

Donate Janashakthi Media

Leave a Reply

Your email address will not be published. Required fields are marked *