ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಅಧ್ಯಕ್ಷ ಮಹೇಶ ಜೋಶಿ ಆಡಳಿತ ವೈಖರಿ ವಿರೋಧಿಸಿ ಜೂನ್ 26 ಗುರುವಾರದಂದು ಕಸಾಪ ಗೌರವ ಕಾರ್ಯದರ್ಶಿ ಸ್ಥಾನಕ್ಕೆ ನೇ.ಭ. ರಾಮಲಿಂಗ ಶೆಟ್ಟಿ ರಾಜೀನಾಮೆ ನೀಡಿದ್ದಾರೆ.
ಗೌರವ ಕಾರ್ಯದರ್ಶಿಯಾಗಿದ್ದ ಪದ್ಮಿನಿ ನಾಗರಾಜು ಕಳೆದ ವಾರ ರಾಜೀನಾಮೆ ನೀಡಿದ್ದರು. ಮತ್ತೊಬ್ಬ ಗೌರವ ಕಾರ್ಯದರ್ಶಿ ರಾಮಲಿಂಗ ಶೆಟ್ಟಿ ಅವರೂ ಈಗ ರಾಜೀನಾಮೆ ನೀಡಿದ್ದಾರೆ. ನಾಲ್ಕು ಪುಟಗಳ ರಾಜೀನಾಮೆ ಪತ್ರದಲ್ಲಿ ಮಹೇಶ ಜೋಶಿ ಅವರ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆಂಗಳೂರು
ಇದನ್ನೂ ಓದಿ: ಪ್ರಲ್ಹಾದ್ ಜೋಶಿ ವಿರುದ್ಧ ಬೆದರಿಕೆ ಆರೋಪ; ಏಮ್ಸ್ ಹೋರಾಟಗಾರರ ವಿರುದ್ಧ ಎಫ್ಐಆರ್
‘ಗೌರವ ಕಾರ್ಯದರ್ಶಿ ಹುದ್ದೆಗೆ ನೇಮಕಗೊಂಡಾಗಿನಿಂದ ವಿನಾಕಾರಣ ನಿಂದನೆ, ಬೆದರಿಕೆ ಎದುರಿಸಿದ್ದೇನೆ. ದರ್ಪ, ದೌರ್ಜನ್ಯದ ನಡೆಯಿಂದ ಹಲವು ಬಾರಿ ಹೊರ ಹೋಗಲು ಬಯಸಿದ್ದೆ. ಪದಾಧಿಕಾರಿಗಳ ಸಾಂತ್ವನ, ಕಸಾಪದ ಮೇಲಿನ ಅಭಿಮಾನದಿಂದ ಮುಂದುವರಿದಿದ್ದೆ’ ಎಂದು ತಿಳಿಸಿದ್ದಾರೆ.
‘ಮಹೇಶ ಜೋಶಿ ಜತೆಗೆ ಕೆಲಸ ಮಾಡಿದ್ದು ಕಹಿ ಘಟನೆಯೂ ಹೌದು. ಅವರಿಗೆ ದುರಹಂಕಾರವಿದ್ದು, ಸರ್ವಾಧಿಕಾರಿಯಂತೆ ವರ್ತಿಸುತ್ತಾರೆ’ ಎಂದು ಹೇಳಿದ್ದಾರೆ.
ಇದನ್ನೂ ನೋಡಿ: ಘೋಷಿತ ತುರ್ತು ಪರಿಸ್ಥಿತಿ ಮತ್ತು ಅಘೋಷಿತ ತುರ್ತು ಪರಿಸ್ಥಿತಿಯ ಸಾಮ್ಯತೆ ಮತ್ತು ವ್ಯತ್ಯಾಸಗಳನ್ನು ತೆರೆದಿಡುವ ಪುಸ್ತಕ
