ಗಂಜಾಂ: ಒಡಿಶಾದ ಗಂಜಾಂನಲ್ಲಿ ಇಬ್ಬರು ದಲಿತರಿಗೆ ಪುಪೊಂದು ಚಿತ್ರಹಿಂಸೆ ಕೊಟ್ಟಿರುವ ಘಟನೆ ನಡೆದಿದ್ದು, ವಿಡಿಯೋ ಸಾಮಾಜಿಕ ಜಲತಾಣಗಳಲ್ಲಿ ಹರಿದಾಡುತ್ತಿದೆ. ಇಬ್ಬರ ಬಾಯಿಗೆ ಹುಲ್ಲು ತುರುಕಿ ಪ್ರಾಣಿಯಂತೆ 2 ಕಿ.ಮೀ ನಡೆಸಿದ್ದಷ್ಟೇ ಅಲ್ಲದೆ, ಚರಂಡಿ ನೀರು ಕುಡಿಸಿರುವ ಅವಮಾನಿಯ ಘಟನೆ ವರದಿಯಾಗಿದೆ.
ಧರಕೋಟೆ ಬ್ಲಾಕ್ನ ಸಿಂಗಿಪುರ ಗ್ರಾಮದ ಬುಲು ನಾಯಕ್ ಹಾಗೂ ಬಾಬುಲಾ ನಾಯಕ್ ತಮ್ಮ ಮಗಳ ಮದುವೆಗೆ ವರದಕ್ಷಿಣೆ ವ್ಯವಸ್ಥೆಯ ಭಾಗವಾಗಿ ಮೂರು ಹಸುಗಳನ್ನು ಖರೀದಿಸಿ ಮನೆಗೆ ಹಿಂತಿರುಗುತ್ತಿದ್ದಾಗ ಗುಂಪೊಂದು ಅವರನ್ನು ತಡೆದಿತ್ತು.
ಇದನ್ನೂ ಓದಿ: ಜೂನ್ 23ರಂದು ವಿವಿಧ ಜಿಲ್ಲೆಗಳಲ್ಲಿ ಮಳೆ ಮುಂದುವರಿಯುವ ಸಾಧ್ಯತೆ
ದನಗಳನ್ನು ಕಳ್ಳಸಾಗಣೆ ಮಾಡುತ್ತಿದ್ದಾರೆಂದು ಆರೋಪಿಸಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಕೊಡಲು ನಿರಾಕರಿಸಿದಾಗ ಹಲ್ಲೆ ನಡೆಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅವರಿಗೆ ಹುಲ್ಲು ತಿನ್ನಿಸಿದ್ದಷ್ಟೇ ಅಲ್ಲದೆ ಚರಂಡಿ ನೀರು ಕೂಡ ಕುಡಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ನೋಡಿ: ಬಾನು ಮುಷ್ತಾಕ್‌ಗೆ ಬೂಕರ್ ಪ್ರಶಸ್ತಿ | ಅಕ್ಷರಕ್ಕಾಗಿ ಸಂಭ್ರಮಿಸುವ ವಾತಾವರಣ: ಅನುಪಮಾJanashakthi Media
