ಬೆಂಗಳೂರು: ಶಾಲಾ ವಿದ್ಯಾರ್ಥಿನಿಯರನ್ನು ತನ್ನ ಕ್ಯಾಬಿನ್‌ಗೆ ಕರೆಯಿಸಿಕೊಂಡು ಅವರ ಅಂಗಾಂಗಗಳನ್ನು ಮುಟ್ಟಿ, ಅಶ್ಲೀಲ ಪದಗಳ ಮೂಲಕ ವಿಕೃತಿ ಮೆರೆಯುತ್ತಿದ್ದ, ನೆಲಮಂಗಲದ ಕಿತ್ತನಹಳ್ಳಿಯ ಬಳಿ ಇರುವ ವಿಭಾ ಇಂಟರ್ನ್ಯಾಷನಲ್ ಎಂಬ ಖಾಸಗಿ ಶಾಲಾಯ ಮಾಲೀಕನನ್ನು ಬಂಧಿಸಲಾಗಿದೆ. ಈ ಕಾಮುಕನ್ನು ಮಾಲೀಕ ಈರತ್ತಯ್ಯ ಎಂದು ಗುರುತಿಸಲಾಗಿದೆ. ಲೈಂಗಿಕ
ಹೆಣ್ಣು ಮಕ್ಕಳ ಮೇಲೆ ಕಳೆದ ನಾಲ್ಕು ತಿಂಗಳಿನಿಂದ ಪದೇ ಪದೇ ಲೈಂಗಿಕ ದೌರ್ಜನ್ಯ ನಡೆಸುತ್ತಲೇ ಇದ್ದ ಎಂದು ನೊಂದ ವಿದ್ಯಾರ್ಥಿ ದೂರು ದಾಖಲಿಸಿದ್ದು, ದೂರಿನಲ್ಲಿ ಈತನ ಕಾಮಚೇಷ್ಟೆಯ ಬಗ್ಗೆ ಎಳೆ ಎಳೆಯಾಗಿ ವಿವರಿಸಿದ್ದಾರೆ. ಸದ್ಯ ಈ ದೂರಿನ ಮೇರೆಗೆ ಮಾದನಾಯಕನಹಳ್ಳಿಯ ಪೊಲೀಸರು. ಶಾಲಾ ಮಾಲೀಕ ಈರತ್ತಯ್ಯನನ್ನು ಪೋಕ್ಸೋ ಆಕ್ಟ್ ಅಡಿಯಲ್ಲಿ ಬಂಧಿಸಿ ಜೈಲಿಗಟ್ಟಿದ್ದಾರೆ.
ಕಳೆದ ನಾಲ್ಕು ತಿಂಗಳಿನಿಂದ ವಿದ್ಯಾರ್ಥಿನಿಯರ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ. ತನ್ನ ಕ್ಯಾಬಿನ್ ಗೆ ವಿದ್ಯಾರ್ಥಿನಿಯರನ್ನು ಕರೆಯಿಸಿಕೊಂಡು ಅವರ ಅಂಗಾಂಗಗಳನ್ನು ಮುಟ್ಟಿ ವಿಕೃತ ಆನಂದಪಡುತ್ತಿದ್ದ. ಅವರ ಅಂಗಾಂಗಗಳನ್ನು ಹಣ್ಣುಗಳಿಗೆ ಹೋಲಿಕೆ ಮಾಡಿ ವರ್ಣನೆ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ. ಇನ್ನು ವಿದ್ಯಾರ್ಥಿನಿಯರು ಸಹ ತಮಗಾದ ಕಿರುಕುಳ ಬಗ್ಗೆ ಎಫ್ಐಆರ್ನಲ್ಲಿ ವಿವರಿಸಿದ್ದಾರೆ.
ಇದನ್ನೂ ಓದಿ: ಜಮೀರ್ ಅಹ್ಮದ್ ಖಾನ್ ಹೇಳಿಕೆಗಳು ಹಾಗೂ ಅಪ್ರಬುದ್ಧ ನಡೆಗಳು
“ನಮ್ಮ ಗ್ರಾಮದಲ್ಲಿರುವ ವಿಭಾ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ವಿದ್ಯಾಭ್ಯಾಸ ಮಾಡಿಕೊಂಡಿರುತ್ತೇನೆ. ಈಗ್ಗೆ ಕಳೆದ 4 ತಿಂಗಳಿನಿಂದ ನಮ್ಮ ಶಾಲೆಯ ಸೆಕ್ರೆಟರಿಯಾದ ಈರತ್ತಯ್ಯರವರು ನನ್ನನ್ನು ಒಬ್ಬಳನ್ನೇ ಅವರ ಕ್ಯಾಬಿನ್ ಗೆ ಕರೆಸಿಕೊಂಡು ನನ್ನ ತುಟಿಗೆ ಮುತ್ತನ್ನು ಕೊಟ್ಟರು, ಅವರು ನನ್ನ ಬಳಿ ಪೀರಿಯಡ್ಸ್ ಮತ್ತು ನನ್ನ ದೇಹದ ಅಂಗಾಂಗಗಳ ಬಗ್ಗೆ ಅಸಹ್ಯವಾಗಿ ಮಾತನಾಡಿದರು. ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ನಿನ್ನ ಭವಿಷ್ಯಕ್ಕೆ ತೊಂದರೆಯಾಗುತ್ತದೆ ಎಂದು ಹೆದರಿಸಿದರು” ಎಂದು ವಿದ್ಯಾರ್ಥಿನಿ ದೂರಿನಲ್ಲಿ ಬರೆದಿದ್ದಾಳೆ.
“ಸುಮಾರು 2 ತಿಂಗಳ ಹಿಂದೆ ನನ್ನನ್ನು ಅವರ ಕ್ಯಾಬಿನ್‌ಗೆ ಕರೆಸಿಕೊಂಡು, ನನಗೆ ಆಸೆಯಾಗಿ ನಿನ್ನ ಕರೆದರೆ ಬರುತ್ತೀಯಾ ಎಂದು ಕೇಳಿದರು. ನಾನು ಭಯಪಟ್ಟು ಏನನ್ನೂ ಹೇಳದೇ ಮಾನಸಿಕವಾಗಿ ಕುಗ್ಗಿ ಹೋದೆ. ಆಗಾಗ ಸ್ಪೆಷಲ್ ಕ್ಲಾಸ್ ಭಾನುವಾರದ ವೇಳೆ ಕ್ಯಾಬಿನ್ ಗೆ ಕರೆದು ಮತ್ತು ಬಸ್ ನಲ್ಲಿ ಹೋಗುವಾಗ ಎಲ್ಲಾ ಮಕ್ಕಳು ಇಳಿದ ಮೇಲೆ ನನ್ನನ್ನು ಲಾಸ್ಟ್ ಸೀಟಿಗೆ ಕರೆದುಕೊಂಡು ಹೋಗಿ ಮುತ್ತು ಕೊಡುವುದು ಮತ್ತು ಅಂಗಾಂಗಗಳನ್ನು ಅಸಭ್ಯವಾಗಿ ಮುಟ್ಟುವುದು ಮಾಡುತ್ತಿದ್ದ. ಇವರು ನಮ್ಮ ಶಾಲೆಯ ಮಾಲೀಕರು ಎಂದು ಅವರಿಗೆ ಭಯಪಟ್ಟು ಸುಮ್ಮನಾಗಿದ್ದೆ. ಈ ರೀತಿ ಕಿರುಕುಳ ಸಹಿಸಿಕೊಂಡು ಸಾಕಾಗಿತ್ತು” ಎಂದು ವಿದ್ಯಾರ್ಥಿನಿ ಅಳಲು ತೋಡಿಕೊಂಡಿದ್ದಾಳೆ.
ಇದನ್ನೂ ನೋಡಿ: ಮರಕುಂಬಿ ದಲಿತ ದೌರ್ಜನ್ಯ ಪ್ರಕರಣ : ಆರೋಪಗಳಿಗೆ ಸಿಕ್ಕಿದ್ದು ತಾತ್ಕಾಲಿಕ ಜಾಮೀನು Janashakthi Media