ಚಿಕಿತ್ಸೆಗೆಂದು ಆಸ್ಪತ್ರೆಗೆ ಬಂದಿದ್ದ ಯುವತಿಗೆ ಮೂರ್ನಾಲ್ಕು ಬಾರಿ ಇಂಜೆಕ್ಷನ್ ಚುಚ್ಚಿದ ವೈದ್ಯ

ಬೆಂಗಳೂರು: ಕುಮಾರಸ್ವಾಮಿ ಲೇಔಟ್ ಠಾಣಾ ವ್ಯಾಪ್ತಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಗೆಂದು ಆಸ್ಪತ್ರೆಗೆ ಬಂದಿದ್ದ ಯುವತಿಯೊಬ್ಬರಿಗೆ ಮದ್ಯಪಾನದ ಅಮಲಿನಲ್ಲಿದ್ದ ವೈದ್ಯ ಹಾಗೂ ವಾರ್ಡ್ ಬಾಯ್ ಮೂರ್ನಾಲ್ಕು ಬಾರಿ ಇಂಜೆಕ್ಷನ್ ಚುಚ್ಚದಿದ್ದಲ್ಲದೆ ಅಸಭ್ಯವಾಗಿ ವರ್ತಿಸಿದ್ದಾರ. ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವೈದ್ಯ ಹಾಗೂ ವಾರ್ಡ್ ಬಾಯ್ ಮದ್ಯಪಾನದ ಅಮಲಿನಲ್ಲಿ ನಾಲೈದು ಬಾರಿ ಇಂಜೆಕ್ಷನ್ ಚುಚ್ಚಿದ ವಿದ್ಯಮಾನ ನಡೆದಿದೆ. ಗಾಬರಿಯಾದ ಯುವತಿ ಕುಡುಕ ಡಾಕ್ಟರ್‌ ಕೈಯಿಂದ ತಪ್ಪಿಸಿಕೊಂಡಿದ್ದು, ಇದೀಗ ಪೊಲೀಸರಿಗೆ ದೂರು ನೀಡಿದ್ದಾರೆ. ಚಿಕಿತ್ಸೆ

ಇದನ್ನೂ ಓದಿ: ಪೊಕ್ಸೊ ಪ್ರಕರಣ: ಅತ್ಯಾಚಾರಕ್ಕೆ ತುತ್ತಾಗಿದ್ದ ಬಾಲಕಿಯ ಗರ್ಭಪಾತಕ್ಕೆ ಹೈಕೋರ್ಟ್ ಅನುಮತಿ

ಕಾವೇರಿ (ಹೆಸರು ಬದಲಿಸಿದೆ) ಎಂಬ ಯುವತಿ ನವೆಂಬರ್ 3ರಂದು ತೀವ್ರ ಜ್ವರ ಹಾಗೂ ನಿತ್ರಾಣದಿಂದ ಚಿಕಿತ್ಸೆಗೆಂದು ಆಸ್ಪತ್ರೆಗೆ ಹೋಗಿದ್ದರು. ಈ ವೇಳೆ ಡಾಕ್ಟರ್ ಪ್ರದೀಪ್, ವಾರ್ಡ್ ಬಾಯ್ ಮಹೇಂದ್ರ ಮದ್ಯಪಾನದ ಅಮಲಿನಲ್ಲಿ ಇದ್ದರು. ಆ ಸಮಯದಲ್ಲಿ ಅವರಿಬ್ಬರೂ ಕರ್ತವ್ಯದಲ್ಲಿ ಇಲ್ಲದಿದ್ದರೂ ರೋಗಿಯನ್ನ ಅಟೆಂಡ್ ಮಾಡಿದ್ದರು.

ಮೊದಲಿಗೆ ವಾರ್ಡ್ ಬಾಯ್ ಮಹೇಂದ್ರ, ರೋಗಿ ಕಾವೇರಿ ಕೈ ಹಿಡಿದು ಸಿರಿಂಜ್ ಚುಚ್ಚಿದ್ದ. ಬಳಿಕ ಡಾಕ್ಟರ್ ಪುದೀಪ್ ಕರೆದು ಟ್ರಿಟೆಂಟ್ ಕೊಡುವಂತೆ ಕೇಳಿದ್ದ. ಡಾ. ಪುದೀಪ್ ಇಂಜೆಕ್ಷನ್ ಹಿಡಿದು ಸ್ನೇಹಾ ಕೈಗೆ ಮತ್ತೊಂದು ಬಾರಿ ಸಿರಿಂಜ್ ಚುಚ್ಚಿದ್ದ ಅಲ್ಲದೆ, ಮರಳಿ ಇಂಜೆಕ್ಷನ್ ಚುಚ್ಚಿದ್ದಲ್ಲದೆ, ಮತ್ತದೇ ಕೆಲಸ ಮಾಡಲು ಮುಂದಾಗಿದ್ದ. ಮೈಕೈಗೆ ಮೂರ್ನಾಲ್ಕು ಬಾರಿ ಇಂಜೆಕ್ಷನ್ ಚುಚ್ಚಿದ್ದರಿಂದ ಕಾವೇರಿ ಗಾಬರಿಯಾಗಿದ್ದಾರೆ.

ಮೂರ್ನಾಲ್ಕು ಬಾರಿ ಇಂಜೆಕ್ಷನ್ ಚುಚ್ಚಿದ್ದಲ್ಲದೆ, ಯುವತಿ ಜತೆ ಅಸಭ್ಯವಾಗಿ ವರ್ತಿಸಿರುವ ಆರೋಪವೂ ವೈದ್ಯ ಹಾಗೂ ನರ್ಸ್ ವಿರುದ್ಧ ಕೇಳಿಬಂದಿದೆ.

ಇಷ್ಟಲ್ಲ ಆಗುತ್ತಿದ್ದಂತೆಯೇ ಕಾವೇರಿ ಪೋಷಕರು ಹೆದರಿ, “ಕುಡಿದು ಬಂದಿದ್ದೀರಾ” ಎಂದು ಪ್ರಶ್ನಿಸಿದ್ದರು. ಅಷ್ಟರಲ್ಲಿ ಡಾ. ಪ್ರದೀಪ್ ಆಸ್ಪತ್ರೆಯಿಂದ ಪರಾರಿಯಾಗಿದ್ದಾರೆ.

ನಂತರ ಕಾವೇರಿ ಪೋಷಕರು ವಾರ್ಡ್ ಬಾಯ್ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದೀಗ ಘಟನೆ ಬಗ್ಗೆ ಕುಮಾರಸ್ವಾಮಿ ಲೇಔಟ್ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ಸದ್ಯ ಪೊಲೀಸರು ಎನ್‌ಸಿಆರ್ ದಾಖಲು ಮಾಡಿಕೊಂಡಿದ್ದಾರೆ.

ಇದನ್ನೂ ನೋಡಿ: ನೈಸ್ ಕಂಪನಿ ಪರ ನಿಂತ ಡಿಕೆ ಶಿವಕುಮಾರ್ ವಿರುದ್ಧ ರೈತರ ಪ್ರತಿಭಟನೆ Janashakthi Media

Donate Janashakthi Media

Leave a Reply

Your email address will not be published. Required fields are marked *