ಹರಿಯಾಣ ವಿಧಾನಸಭೆ ಚುನಾವಣೆ ; ಮಾಜಿ ಕುಸ್ತಿಪಟು ವಿನೇಶ್ ಫೋಗಟ್ ಭರ್ಜರಿ ಗೆಲುವು

ಹರಿಯಾಣ: ಜುಲಾನ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ, ಮಾಜಿ ಕುಸ್ತಿಪಟು ವಿನೇಶ್ ಫೋಗಟ್ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಚುನಾವಣೆ ಆಯೋಗದ ಪ್ರಕಾರ, ಪ್ರಕಾರ 11 ಸುತ್ತಿನ ಮತ ಎಣಿಕೆಯ ಬಳಿಕ ಜೂಲಾನಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನೇಶ್ ಫೋಗಟ್ ಕ್ಷೇತ್ರದಿಂದ 50,617 ಮತಗಳನ್ನಯ ಪಡೆಯುವ ಮೂಲಕ 6,050 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಇದನ್ನೂ ಓದಿ: ಶತಕದ ಸಮೀಪಕ್ಕೆ ಟೊಮೆಟೊ ದರ; ಕೆಜಿ ಟೊಮೇಟೊ 70 ರಿಂದ 80 ರೂಪಾಯಿಗೆ ಮಾರಾಟ

ಇತ್ತೀಚೆಗಷ್ಟೇ ನಡೆದ ಪ್ಯಾರಿಸ್‌ ಒಲಿಂಪಿಕ್ಸ್‌ನ ಕುಸ್ತಿ ವಿಭಾದಲ್ಲಿ ವಿನೇಶ್ ಫೋಗಟ್‌ ಅವರು ಫೈನಲ್‌ ಪ್ರವೇಶ ಮಾಡಿದ್ದರು. ಈ ವೇಳೆ ಅವರನ್ನು 50 ಕಿ.ಜಿಗಿಂತ ಹೆಚ್ಚು ತೂಕ ಇದ್ದ ಕಾರಣ ಅವರನ್ನು ಹೊರಹಾಕಲಾಯಿತು. ಬಳಿಕ ದೇಶಕ್ಕೆ ಮರಳಿದ ಅವರು ನಿವೃತ್ತಿ ಘೋಷಣೆ ಮಾಡಿದರು.

ಇನ್ನು ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಕುಸ್ತಿ ವಿಭಾಗದಲ್ಲಿ ಫೈನಲ್‌ ಪ್ರವೇಶಕ್ಕೂ ಮುನ್ನ ಅವರು ತುಕ ಇಳಿಸಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಉಗುರು, ಕೂದಲ, ರಕ್ತವನ್ನು ಸಹ ತೆಗೆಸಿದ್ದರು. ಆದರೂ ಕೂಡ ಹೆಚ್ಚಿನ ತೂಕ ಇದ್ದ ಕಾರಣ ಅವರನ್ನು ಪಂದ್ಯದಿಂದ ಅಮಾನತುಗೊಳಿಸಲಾಯಿತು.

ಇದನ್ನೂ ನೋಡಿ: ICDS 50 | ಐಸಿಡಿಎಸ್ ಮತ್ತು ರಾಜಕೀಯ ಪಕ್ಷಗಳ ನಿಲುಮೆ

Donate Janashakthi Media

Leave a Reply

Your email address will not be published. Required fields are marked *