ಕಾರ್ಕಳ-ಧರ್ಮಸ್ಥಳ ಹೆದ್ದಾರಿಯಲ್ಲಿ ಅಪಘಾತ: ನಾಲ್ವರು ಸ್ಥಳದಲ್ಲೇ ಮೃತ

ಉಡುಪಿ: ಕಾರ್ಕಳ-ಧರ್ಮಸ್ಥಳ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದ್ದು, ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.

ಬೈಕ್​​​​​​ ಹಾಗೂ ಈಚರ್​​ ವಾಹನದ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಬೈಕ್​​​ನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಕಾರ್ಕಳ-ಧರ್ಮಸ್ಥಳ ಹೆದ್ದಾರಿಯ ಹೊಸ್ಮಾರು ಪಾಜೆಗುಡ್ಡೆ ಬಳಿ ನಡೆದಿದೆ.

ಇದನ್ನು ಓದಿ : ತೀವ್ರ ಒತ್ತಡಕ್ಕೆ ಆತ್ಮಹತ್ಯೆಗೆ ಶರಣಾದ ಫೈನಾನ್ಸ್ ಕಂಪನಿ ಮ್ಯಾನೇಜರ್: ಝಾನ್ಸಿಯಲ್ಲಿ ಘಟನೆ

ದಂಪತಿ ಹಾಗೂ ಮೂವರು ಮಕ್ಕಳು ಒಂದೇ ಬೈಕ್​​​ನಲ್ಲಿ ಹೋಗುತ್ತಿದ್ದಾಗ ಈಚರ್​ ವಾಹನ ಬೈಕ್​​​ಗೆ ಡಿಕ್ಕಿಯಾದ ರಭಸಕ್ಕೆ ನಾಲ್ವರು ಮೃತಪಟ್ಟಿದ್ದಾರೆ. ಮೃತರನ್ನು ಬೈಕ್ ಸವಾರ ಸುರೇಶ್​​ ಆಚಾರ್ಯ (36) ಮಕ್ಕಳಾದ ಸಮೀಕ್ಷಾ (7) ಸುಶ್ಮಿತಾ (5) ಮತ್ತು ಸುಶಾಂತ್ (2) ಎಂದು ಗುರುತಿಸಲಾಗಿದೆ.

ಇನ್ನು ಪತ್ನಿ ಮೀನಾಕ್ಷಿ ಸ್ಥಿತಿ ಗಂಭೀರವಾಗಿದ್ದು ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನು ನೋಡಿ : “ರಸ್ತೆಯಲ್ಲಿ ಗುಂಡಿಯೋ ಗುಂಡಿಯಲ್ಲಿ ರಸ್ತೆಯೋ” ಶಾಸಕರೇ ಉತ್ತರಿಸಿJanashakthi Media

Donate Janashakthi Media

Leave a Reply

Your email address will not be published. Required fields are marked *