ತನ್ನ ಬೈಕ್‌ ಸರಿಯಾಗಿ ದುರಸ್ತಿ ಮಾಡಿಲ್ಲ ಎಂಬ ಕೋಪದಲ್ಲಿ ಶೋರೂಂಗೆ ಬೆಂಕಿ ಹಚ್ಚಿದ ವ್ಯಕ್ತಿ

ಲಬುರಗಿ: ಮಂಗಳವಾರ, ತನ್ನ ಬೈಕ್‌ ಸರಿಯಾಗಿ ದುರಸ್ತಿ ಮಾಡಿಲ್ಲ ಎಂಬ ಕೋಪದಲ್ಲಿ ಹುಮನಾಬಾದ್ ಮುಖ್ಯರಸ್ತೆಯಲ್ಲಿನ ಓಲಾ ಎಲೆಕ್ಟ್ರಿಕ್‌ ವಾಹನದ ಶೋರೂಂಗೆ ವ್ಯಕ್ತಿಯೊಬ್ಬ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪ್ರಕರಣ ಚೌಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ  ನಡೆದಿದೆ.

ನಗರದ ನಿವಾಸಿ ಮಹಮದ್ ನದೀಮ್ ಬೆಂಕಿ ಹಚ್ಚಿದ ಆರೋಪಿ ಎಂದು ತಿಳಿದುಬಂದಿದೆ. ಮಂಗಳವಾರ ಬೆಳಿಗ್ಗೆ 10ರ ಸುಮಾರಿಗೆ ಶೋರೂಂಗೆ ಬಂದ ನದೀಮ್, ತನ್ನ ಎಲೆಕ್ಟ್ರಿಕ್ ಬೈಕ್ ದುರಸ್ತಿಯ ಬಗ್ಗೆ ಶೋರೂಂ ಸಿಬ್ಬಂದಿ ಜತೆಗೆ ವಾಗ್ವಾದ ನಡೆಸಿದರು.

ಇದನ್ನೂ ಓದಿ: ಮೂರು ವರ್ಷದ ಮಗು ವಾಷಿಂಗ್ ಮೆಷಿನ್‌ನಲ್ಲಿ ಶವವಾಗಿ ಪತ್ತೆ; ತಿರುನಲ್ವೇಲಿಯಲ್ಲಿ ಘಟನೆ

ಸರಿಯಾದ ಸ್ಪಂದನೆ ಸಿಗದಿರುವುದಕ್ಕೆ ಕೋಪದಲ್ಲಿ ಶೋರೂಂಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಬೆಂಕಿಯ ಕೆನ್ನಾಲಿಗೆಗೆ ಬೈಕ್‌ಗಳು, ಸಾಮಗ್ರಿಗಳು ಸುಟ್ಟಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಬೆಂಕಿಯನ್ನು ನಂದಿಸಿದರು.

ಆರೋಪಿ ವಶಕ್ಕೆ: ಶೋರೂಂಗೆ ಬೆಂಕಿ ಹಚ್ಚಿದ ಆರೋಪದಡಿ ಮಹಮದ್ ನದೀಮ್‌ನನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಇದನ್ನೂ ನೋಡಿ: ಸಕ್ಕರೆ, ಮೈದಾ ಎಷ್ಟು ಡೇಂಜರ್ ಗೊತ್ತಾ?

Donate Janashakthi Media

Leave a Reply

Your email address will not be published. Required fields are marked *